HomeInternationalಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಖಾಸಗಿ ಜೆಟ್ ವಿಮಾನ ಅಪಘಾತ: ಬೆಂಕಿಗಾಹುತಿ: ಇಬ್ಬರು ದುರ್ಮರಣ

ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಖಾಸಗಿ ಜೆಟ್ ವಿಮಾನ ಅಪಘಾತ: ಬೆಂಕಿಗಾಹುತಿ: ಇಬ್ಬರು ದುರ್ಮರಣ

ಸ್ಯಾಂಟೊ ಡೊಮಿಂಗೊ: ಖಾಸಗಿ ಜೆಟ್ ವಿಮಾನ ತಾಂತ್ರಿಕ ದೋಷದಿಂದ ತುರ್ತು ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾಗಿರುವ ಘಟನೆ ದ್ವೀಪ ರಾಷ್ಟ್ರ ಡೊಮಿನಿಕನ್ ಗಣರಾಜ್ಯದ ಲಾ ರೊಮಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ತಾಂತ್ರಿಕ ದೋಷದ ಕಾರಣದಿಂದಾಗಿ ತುರ್ತು ಭೂಸ್ಪರ್ಶಕ್ಕೆ ಯತ್ನಿಸುತ್ತಿದ್ದ ಖಾಸಗಿ ವಿಮಾನ ರನ್​ ವೇ ಮೇಲೆ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಬೇರೆ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಇರಲಿಲ್ಲ ಎಂದು ವಿಮಾನಯಾನ ಅಧಿಕಾರಿಗಳು ಖಚಿತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಲ್ಫ್‌ಸ್ಟ್ರೀಮ್ ಜಿ200 (Gulfstream G200) ಮಾದರಿಯ ಖಾಸಗಿ ಜೆಟ್ ವಿಮಾನವು ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ, ಹಾರಾಟದ ಮಧ್ಯೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸಿಬ್ಬಂದಿಯು ಲಾ ರೊಮಾನಾದ ನೈಋತ್ಯಕ್ಕೆ ಸುಮಾರು 16 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

ಅಪಾಯವನ್ನು ಅರಿತ ಪೈಲಟ್‌ಗಳು ತಕ್ಷಣವೇ ವಿಮಾನವನ್ನು ಹತ್ತಿರದ ಲಾ ರೊಮಾನಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಿ ಸುರಕ್ಷಿತವಾಗಿ ಇಳಿಸಲು ಪ್ರಯತ್ನಿಸಿದರು. ಆದರೆ, ವಿಮಾನವು ಅತ್ಯಂತ ವೇಗವಾಗಿ ಬಂದು ರನ್‌ವೇ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ಕ್ಷಣಾರ್ಧದಲ್ಲೇ ಜೆಟ್ ಸಂಪೂರ್ಣವಾಗಿ ಬೆಂಕಿಯ ಉಂಡೆಯಂತೆ ಸ್ಫೋಟಗೊಂಡಿತು.

ಗಲ್ಫ್‌ಸ್ಟ್ರೀಮ್ ಜಿ200 ಜೆಟ್ ಅಪಘಾತಕ್ಕೆ ಕಾರಣವಾದ ನಿಖರವಾದ ತಾಂತ್ರಿಕ ದೋಷಗಳನ್ನು ಪತ್ತೆಹಚ್ಚಲು ಡೊಮಿನಿಕನ್ ಗಣರಾಜ್ಯದ ವಿಮಾನಯಾನ ಸಂಸ್ಥೆಗಳು ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular