ಹೊಸಪೇಟೆ(ವಿಜಯನಗರ): ರಾತ್ರೋರಾತ್ರಿ ಮುಸುಕುಧಾರಿಗಳ ಓಡಾಡಿ ಕಳ್ಳತನಕ್ಕೆ ಸಂಚು ನಡೆಸಿದ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ನಡೆದಿದೆ.
ಕೂಡ್ಲಿಗಿ ಬಸವೇಶ್ವರ ವೃತ್ತದಲ್ಲಿರುವ ಮನೆಗಳ ಬಳಿ ಮುಸುಕುಧಾರಿಗಳು ಓಡಾಟ ನಡೆಸಿದ್ದಾರೆ. ಮುಸುಕು ದಾರಿಗಳ ಓಡಾಟಕ್ಕೆ ಕೂಡ್ಲಿಗಿ ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಮಾಸ್ಕ್ ಧರಿಸಿ, ಗ್ಲೌಸ್ ಹಾಕಿಕೊಂಡು ಕಳ್ಳರು ಓಡಾಟ ನಡೆಸಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದು, ಸದ್ಯಕ್ಕೆ ಯಾವುದೇ ಮನೆ ಕಳ್ಳತನವಾಗಿಲ್ಲವೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಿತ್ರಕೃಪೆ: ಎಐ

