ಮೈಸೂರು: ಯುವತಿ ಎದುರು ನಗ್ನನನಾಗಿ ವಿಡಿಯೋ ಚಾಟ್ ಮಾಡಿದ್ದ ನಿವೃತ್ತ ಅಧಿಕಾರಿಯೊಬ್ಬರು ಯುವತಿಯ ಬ್ಲಾಕ್ ಮೇಲ್ ಗೆ ಹೆದರಿ 9.45 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಮೈಸೂರಿನ ಕುವೆಂಪು ನಗರ ನಿವಾಸಿಯಾಗಿರುವ 74 ವರ್ಷದ ನಿವೃತ್ತ ಅಧಿಕಾರಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಯುವತಿಯ ಪರಿಚಯವಾಗಿದೆ. ಮೊಬೈಲ್ ಸಂದೇಶ ಕಳುಹಿಸಿ ಆಕೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಈ ವೇಳೆ ಯುವತಿಯೊಂದಿಗೆ ನಗ್ನವಾಗಿ ವಿಡಿಯೋ ಚಾಟ್ ಮಾಡಿದ್ದು, ಇದನ್ನು ಆಕೆ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲೆ ಮಾಡಿದ್ದಾಳೆ.
ಹಣ ನೀಡದಿದ್ದರೆ ಬೆತ್ತಲೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾಳೆ. ಯುವತಿಯ ಬೆದರಿಕೆ, ಒತ್ತಡಕ್ಕೆ ಮಣಿದ ನಿವೃತ್ತ ಅಧಿಕಾರಿ ಆಕೆಯ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 9.45 ಲಕ್ಷ ರೂ. ವರ್ಗಾಯಿಸಿದ್ದಾರೆ. ಮತ್ತೆ ಬ್ಲಾಕ್ ಮೇಲ್ ಮಾಡಲು ಮುಂದುವರೆಸಿದಾಗ ದೂರು ನೀಡಿದ್ದಾರೆ. ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

