HomeLatest Newsರನ್ ಬಾರಿಸದ ನಿನ್ನ ಕೊಡುಗೆ ಸಾಕು ಹೋಗಪ್ಪ: ಟಿ20 ವಿಶ್ವಕಪ್ ಗೆಲ್ಲಿಸಿದ ಆಟಗಾರನನ್ನು ಕ್ಯಾರೆ ಎನ್ನದೇ...

ರನ್ ಬಾರಿಸದ ನಿನ್ನ ಕೊಡುಗೆ ಸಾಕು ಹೋಗಪ್ಪ: ಟಿ20 ವಿಶ್ವಕಪ್ ಗೆಲ್ಲಿಸಿದ ಆಟಗಾರನನ್ನು ಕ್ಯಾರೆ ಎನ್ನದೇ ತಂಡದಿಂದ ಕಿತ್ತೆಸೆದ ಬಿಸಿಸಿಐ!

ಈ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಎದುರಾಳಿ ತಂಡಗಳ ವಿರುದ್ಧ ಅಬ್ಬರಿಸುವ ಆಟಗಾರರಿಲ್ಲದೇ ಟೂರ್ನಿಯ ಮಧ್ಯದಲ್ಲಿ ತುಸು ಮಂಕಾಗಿದ್ದ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ತಂಡ ಸೇರಿದ್ದು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಕಾರಣ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.

ನಾಯಕತ್ವಕ್ಕಿಂತ ಹೆಚ್ಚಾಗಿ ತಂಡದ ಆಟಗಾರರ ಜಾಣ್ಮೆಯ ಆಟದಿಂದ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಇದೇ ಕಾರಣದಿಂದಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದರೂ ಒಳ್ಳೆಯ ನಾಯಕ ಬೇಕು ಎಂಬ ಚರ್ಚೆಗಳು ನಡೆದವು.

ಹೌದು, ನಾಯಕ ಸೂರ್ಯಕುಮಾರ್ ಯಾದವ್ ನಾಯಕತ್ವದಿಂದ ಭಾರತ ಟ್ರೋಫಿ ಗೆದ್ದಿತು ಎಂದು ಯಾರಾದರೂ ಹೇಳಿದರೆ ಕ್ರಿಕೆಟ್ ಪ್ರೇಮಿಗಳು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅಷ್ಟು ಕೆಟ್ಟ ನಾಯಕತ್ವವನ್ನು ಸೂರ್ಯ ನಿರ್ವಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಟ್ಟು 9 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಕೇವಲ 242 ರನ್ ಬಾರಿಸಿದರು ಅದೂ ಸಹ 136ರ ಸ್ಟ್ರೈಕ್ ರೇಟ್‌ನಲ್ಲಿ. ಕ್ರಿಕೆಟ್ ಶಿಶು ಯುಎಸ್‌ಎ ವಿರುದ್ಧ ಅಜೇಯ 84 ರನ್ ಬಾರಿಸಿದ್ದೇ ಸೂರ್ಯ ಸಾಧನೆ.

ಈ ಹಿಂದೆ ಧೋನಿ ಹಾಗೂ ರೋಹಿತ್ ರೀತಿಯ ಜಾಣ್ಮೆಯ ನಾಯಕತ್ವದಡಿಯಲ್ಲಿ ಗೆದ್ದ ಭಾರತಕ್ಕೆ ಅಂತಹದ್ದೇ ನಾಯಕನ ಅಗತ್ಯವಿದ್ದು, ಸೂರ್ಯಕುಮಾರ್ ಯಾದವ್ ಆ ಕೆಲಸ ಮಾಡುವ ಸಾಮರ್ಥ್ಯ ಹೊಂದಿರದ ನಾಯಕ ಎಂಬುದನ್ನು ಮನಗಂಡ ಬಿಸಿಸಿಐ ನಾಯಕತ್ವ ಬದಲಾವಣೆಗೆ ಮುಂದಾಗಿದೆ. ಟಿ ಟ್ವೆಂಟಿ ವಿಶ್ವಕಪ್‌ನಲ್ಲೇನೋ ಇತರೆ ಆಟಗಾರರ ಸಮಯಪ್ರಜ್ಞೆಯಿಂದ ತಂಡ ಜಯ ಸಾಧಿಸಿತು. ಒಂದುವೇಳೆ ನಾಯಕತ್ವದ ಮೇಲೆ ಎಲ್ಲವೂ ಅವಲಂಬಿತವಾಗಿದ್ದರೆ ಭಾರತ ಹೀನಾಯ ಸೋಲು ಅನುಭವಿಸುತ್ತಿತ್ತು ಎಂಬ ವಿಷಯ ಅರಿವಾಗಿದೆ.

ಹೀಗಾಗಿ ಬಿಸಿಸಿಐ ಸೂರ್ಯಕುಮಾರ್ ಯಾದವ್‌ರನ್ನು ತಂಡದ ನಾಯಕತ್ವದಿಂದ ಕಿತ್ತೆಸೆಯಲು ಮುಂದಾಗಿದೆ. ಕೇವಲ ನಾಯಕತ್ವದಿಂದ ಮಾತ್ರವಲ್ಲ ಕಳಪೆ ಫಾರ್ಮ್ ಸಹ ಹೊಂದಿರುವ ಸೂರ್ಯಕುಮಾರ್ ಯಾದವ್‌ರನ್ನು ತಂಡದಿಂದಲೇ ಹೊರಹಾಕಲು ಬಿಸಿಸಿಐ ನಿರ್ಧರಿಸಿದೆ.

ಈ ಕುರಿತು ಪತ್ರಕರ್ತ ದೇವೇಂದ್ರ ಪಾಂಡೆ ವರದಿ ಮಾಡಿದ್ದು ‘ಆಯ್ಕೆಗಾರರ ಸಮಿತಿ, ಬಿಸಿಸಿಐ ಹಾಗೂ ತಂಡದ ಮ್ಯಾನೇಜ್‌ಮೆಂಟ್ ಕೋಚ್ ಗೌತಮ್ ಗಂಭೀರ್ ಜತೆ ಚರ್ಚಿಸಿದ್ದು, ಇನ್ನುಮುಂದೆ ಹೊಸ ನಾಯಕನ ಜತೆ ತಂಡವನ್ನು ಕೊಂಡೊಯ್ಯುವ ನಿರ್ಧಾರಕ್ಕೆ ಬಂದಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಡಿಯಲ್ಲಿ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆದ್ದಿತಾದರೂ ಆತನ ಫಾರ್ಮ್ ಹಾಗೂ ತಂಡದ ಭವಿಷ್ಯವನ್ನು ತಲೆಯಲ್ಲಿಟ್ಟುಕೊಂಡು ಬದಲಾವಣೆ ಅಗತ್ಯ ಎಂದು ತೀರ್ಮಾನಿಸಿದೆ. ತಂಡದ ಆಯ್ಕೆಗೆ ಆತನನ್ನು ಪರಿಗಣಿಸುವುದಿಲ್ಲ ಹಾಗೂ ಈ ವಿಷಯವನ್ನು ಶೀಘ್ರದಲ್ಲಿಯೇ ಸೂರ್ಯನಿಗೆ ತಿಳಿಸಲಾಗುವುದು’ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular