HomeLatest Newsಮಮತಾ ಬ್ಯಾನರ್ಜಿಗೆ ಬಿಗ್ ಶಾಕ್ ; ಬಂಗಾಳದ ಪ್ರತಿಪಕ್ಷ ನಾಯಕರಾಗಿ ಬಂಡಾಯ ನಾಯಕ!

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್ ; ಬಂಗಾಳದ ಪ್ರತಿಪಕ್ಷ ನಾಯಕರಾಗಿ ಬಂಡಾಯ ನಾಯಕ!

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಅನಿರೀಕ್ಷಿತ ರಾಜಕೀಯ ಬಿರುಗಾಳಿ ಎದ್ದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅವರ ಪಕ್ಷದ ಬಂಡಾಯ ನಾಯಕರು ಭಾರಿ ಆಘಾತ ನೀಡಿದ್ದಾರೆ.

ಟಿಎಂಸಿಯಿಂದ ಉಚ್ಚಾಟನೆಗೊಂಡಿರುವ ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ, ಪಶ್ಚಿಮ ಬಂಗಾಳ ವಿಧಾನಸಭೆಯ ಹೊಸ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಗೆದ್ದಿರುವ 80 ಟಿಎಂಸಿ ಶಾಸಕರಲ್ಲಿ 58 ಮಂದಿ ಶಾಸಕರು ರಿತಬ್ರತ ಬ್ಯಾನರ್ಜಿಗೆ ಬೆಂಬಲ ವ್ಯಕ್ತಪಡಿಸಿರುವುದು ಬಂಗಾಳ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಸ್ಪೀಕರ್ ಅಂಕಿತ ತಮಗೆ ಬೆಂಬಲ ನೀಡುತ್ತಿರುವ 58 ಶಾಸಕರ ಸಹಿ ಇರುವ ಪತ್ರವನ್ನು ರಿತಬ್ರತ ಬ್ಯಾನರ್ಜಿ ಸ್ಪೀಕರ್‌ಗೆ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿದ ಸ್ಪೀಕರ್, ವಿಧಾನಸಭೆಯಲ್ಲಿ ಬದಲಾಗಿರುವ ಈ ರಾಜಕೀಯ ಸಮೀಕರಣಗಳಿಗೆ ಅನುಮೋದನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಪಕ್ಷ ನಾಯಕರಿಗೆ ಮೀಸಲಾಗಿರುವ ಅಧಿಕೃತ ಕಚೇರಿಯನ್ನು ಕೂಡ ರಿತಬ್ರತ ಅವರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ರಾಜ್ಯದ ಹೊರಗಿರುವ ಮತ್ತಿಬ್ಬರು ಶಾಸಕರು ಕೂಡ ನಮ್ಮೊಂದಿಗಿದ್ದಾರೆ ಎಂದು ಬಂಡಾಯ ಬಣ ಘೋಷಿಸಿದ್ದು, ಶೀಘ್ರದಲ್ಲೇ ತಮ್ಮ ಬಲ ಇನ್ನೂ ಹೆಚ್ಚಾಗಲಿದೆ ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ ರಿತಬ್ರತ ಬ್ಯಾನರ್ಜಿ ವಿಧಾನಸಭೆಯಲ್ಲಿ ತಮ್ಮ ಹೊಸ ತಂಡವನ್ನು ಘೋಷಿಸಿದ್ದಾರೆ. ಅಖ್ರುಜ್ಜಮಾನ್ ಅವರನ್ನು ಮುಖ್ಯ ಸಚೇತಕರನ್ನಾಗಿ (Chief Whip), ಹಿರಿಯ ಶಾಸಕರಾದ ಜಾವೇದ್ ಅಹ್ಮದ್ ಖಾನ್, ಸಂದೀಪನ್ ಸಾಹಾ, ಸಬಿನಾ ಯಾಸ್ಮಿನ್ ಮತ್ತು ಶಿವಲಿ ಸಾಹಾ ಅವರನ್ನು ಉಪ ನಾಯಕರನ್ನಾಗಿ ನೇಮಿಸಿರುವುದಾಗಿ ತಿಳಿಸಿದ್ದಾರೆ.

ಪಕ್ಷದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬಂಡಾಯ ನಡೆಯುತ್ತಿದ್ದರೂ, ರಿತಬ್ರತ ಬ್ಯಾನರ್ಜಿ ಅವರು ತಮ್ಮ ನಾಯಕಿ ಮಮತಾ ಬ್ಯಾನರ್ಜಿಯವರಿಗೆ ಒಂದು ವಿಚಿತ್ರ ಮನವಿ ಮಾಡಿದ್ದಾರೆ. ನಾವು ಪಕ್ಷದಿಂದ ಬೇರ್ಪಟ್ಟಿದ್ದರೂ, ವಿಧಾನಸಭೆಯಲ್ಲಿ ನಮ್ಮ ಶಾಸಕಾಂಗ ಪಕ್ಷದ ಮುಖ್ಯ ಸಲಹೆಗಾರರಾಗಿ ಮುಂದುವರಿಯುತ್ತಾ ನಮಗೆ ಮಾರ್ಗದರ್ಶನ ನೀಡಬೇಕೆಂದು ಅವರು ಕೋರಿದ್ದಾರೆ. ಆದರೆ, ಮಮತಾ ಬ್ಯಾನರ್ಜಿಯವರ ಉತ್ತರಾಧಿಕಾರಿ ಎಂದು ಭಾವಿಸಲಾಗಿರುವ ಸಂಸದ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ತಮಗೆ ಯಾವುದೇ ರಾಜಕೀಯ ಸಂಬಂಧವಿಲ್ಲ ಎಂದು ಅವರು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಟಿಎಂಸಿ ಹೈಕಮಾಂಡ್ ಹಿರಿಯ ಶಾಸಕ ಶೋಭನ್‌ದೇವ್ ಚಟ್ಟೋಪಾಧ್ಯಾಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿತ್ತು. ಆದರೆ, ಅವರಿಗೆ ಬೆಂಬಲವಾಗಿ ಸಲ್ಲಿಸಲಾದ ಪತ್ರದಲ್ಲಿ ಅನೇಕ ಶಾಸಕರ ಸಹಿಯನ್ನು ಫೋರ್ಜರಿ (ನಕಲು) ಮಾಡಲಾಗಿದೆ ಎಂದು ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ಅವರು ಸ್ಪೀಕರ್‌ಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಬಂಗಾಳ ಸಿಐಡಿ ತನಿಖೆಯನ್ನೂ ಆರಂಭಿಸಿದೆ. ಇದರಿಂದ ಸಿಟ್ಟಿಗೆದ್ದ ಟಿಎಂಸಿ ಹೈಕಮಾಂಡ್, ರಿತಬ್ರತ ಮತ್ತು ಸಂದೀಪನ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular