HomeLatest Newsಡಿಕೆಶಿ ಮಂತ್ರಿಮಂಡಲದ ಹೈ-ವೋಲ್ಟೇಜ್ ಸಸ್ಪೆನ್ಸ್: ಇಂದು ಮಧ್ಯಾಹ್ನದೊಳಗೆ ದೆಹಲಿಯಿಂದ ಬರಲಿದೆ ಸಚಿವರ ಪಟ್ಟಿ: ಡಿಕೆಶಿ ನೀಡಿದ...

ಡಿಕೆಶಿ ಮಂತ್ರಿಮಂಡಲದ ಹೈ-ವೋಲ್ಟೇಜ್ ಸಸ್ಪೆನ್ಸ್: ಇಂದು ಮಧ್ಯಾಹ್ನದೊಳಗೆ ದೆಹಲಿಯಿಂದ ಬರಲಿದೆ ಸಚಿವರ ಪಟ್ಟಿ: ಡಿಕೆಶಿ ನೀಡಿದ ಬಿಗ್ ಅಪ್ಡೇಟ್ ಇದು

ಬೆಂಗಳೂರು: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವರ ಅಥವಾ ಅಭ್ಯರ್ಥಿಗಳ ಆಯ್ಕೆ ಪಟ್ಟಿಯ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ ಸದ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಹಾಗೂ ಚರ್ಚೆಯಾಗುತ್ತಿರುವ ಯಾವುದೇ ಹೆಸರುಗಳು ಅಧಿಕೃತವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮಾಧ್ಯಮಗಳಲ್ಲಿ ಯಾವ ಯಾವ ಹೆಸರುಗಳು ಊಹಾಪೋಹ (Speculation) ಆಗುತ್ತಿವೆಯೋ, ಅದೆಲ್ಲವೂ ಅಧಿಕೃತವಲ್ಲ. ಬೆಳಗ್ಗೆ 10 ಗಂಟೆಯ ನಂತರ ಅಥವಾ ಮಧ್ಯಾಹ್ನದ ವೇಳೆಗೆ ದೆಹಲಿ ಹೈಕಮಾಂಡ್ ನಾಯಕರು ಅಧಿಕೃತ ಹೆಸರುಗಳ ಪಟ್ಟಿಯನ್ನು ನನಗೆ ಕಳಿಸಿಕೊಡಲಿದ್ದಾರೆ ಎಂದು ತಿಳಿಸಿದರು

ದೆಹಲಿ ನಾಯಕರದ್ದೇ ಅಂತಿಮ ತೀರ್ಮಾನ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ನಾವೆಲ್ಲ ಆದರೆ ಅಂತಿಮ ತೀರ್ಮಾನವನ್ನು ದೆಹಲಿಯವರೇ ಮಾಡಲಿದ್ದಾರೆ ಅಲ್ಲಿಂದ ಪಟ್ಟಿ ಬಂದ ತಕ್ಷಣವೇ ಅದನ್ನು ನಾನು ಅಧಿಕೃತವಾಗಿ ರಾಜಭವನಕ್ಕೆ ಕಳಿಸಿರೂ ಒಟ್ಟಿಗೆ ಸೇರಿ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ. ನಮ್ಮ ನಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಕೊಡಲಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು

ಕಾಂಗ್ರೆಸ್ ಭವನ ಭೂಮಿ ಪೂಜೆ ಮುಂದೂಡಿಕೆ:

ಇದೇ ಸಂದರ್ಭದಲ್ಲಿ ಇಂದು ಆಯೋಜನೆಗೊಂಡಿದ್ದ ಕಾಂಗ್ರೆಸ್ ಭವನದ ಭೂಮಿ ಪೂಜೆ ಕಾರ್ಯಕ್ರಮದ ಬಗ್ಗೆಯೂ ಮಾಹಿತಿ ನೀಡಿದ ಅವರು, ಇಂದು ನಡೆಯಬೇಕಿದ್ದ ಭೂಮಿ ಪೂಜೆಯನ್ನು ಮತ್ತೊಂದು ಪ್ರತ್ಯೇಕ ದಿನಕ್ಕೆ ಮುಂದೂಡಲು ತೀರ್ಮಾನಿಸಲಾಗಿದೆ ಆದರೆ ಆಮಂತ್ರಣ ಪತ್ರಿಕೆ ತಲುಪಿರುವ ಎಲ್ಲಾ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯರು ಮಧ್ಯಾಹ್ನ 2 ಗಂಟೆಯ ಒಳಗಾಗಿ ಭಾರತ್ ಜೋಡೋ ಭವನದಲ್ಲಿ ಉಪಸ್ಥಿತರಿರಬೇಕು ಎಂದು ಮನವಿ ಮಾಡಿದರು

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರದ ನಾಯಕರ ಭೇಟಿ ಕುರಿತು ಮಾತನಾಡುತ್ತಾ, ಪ್ರಮಾಣ ವಚನ ಮುಗಿದ ನಂತರ ಕ್ಯಾಬಿನೆಟ್ (ಸಂಪುಟ) ಸಭೆ ನಡೆಯಲಿದೆ. ಆ ಬಳಿಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಬೀಳ್ಕೊಡುಗೆ ನೀಡಿ, ನಂತರ ನಾನು ನೇರವಾಗಿ ಕಾಂಗ್ರೆಸ್ ಕಚೇರಿಗೆ ಬರಲಿದ್ದೇನೆ ಎಂದು ತಿಳಿಸಿದರು

ಮಾಧ್ಯಮಗಳಲ್ಲಿ ಉಪಮುಖ್ಯಮಂತ್ರಿ (DCM) ಸ್ಥಾನದ ಹೆಸರು ಫೈನಲ್ ಆಗಿದೆ ಎಂಬ ಚರ್ಚೆಗಳಿಗೂ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ದೆಹಲಿಯಿಂದ ಅಧಿಕೃತ ಪಟ್ಟಿ ಬರುವವರೆಗೂ ಯಾವುದೂ ಅಂತಿಮವಲ್ಲ ಎಂದಿದ್ದಾರೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular