HomeUncategorizedIPL 2026: ಆರ್‌ಸಿಬಿ vs ಗುಜರಾತ್ ಕ್ವಾಲಿಫಯರ್ ಪಂದ್ಯಕ್ಕೆ ಮಳೆ ಆತಂಕ; ಇಲ್ಲ ರಿಸರ್ವ್ ಡೇ,...

IPL 2026: ಆರ್‌ಸಿಬಿ vs ಗುಜರಾತ್ ಕ್ವಾಲಿಫಯರ್ ಪಂದ್ಯಕ್ಕೆ ಮಳೆ ಆತಂಕ; ಇಲ್ಲ ರಿಸರ್ವ್ ಡೇ, ಪಂದ್ಯ ರದ್ದಾದರೆ ಈ ತಂಡ ಫೈನಲ್‌ಗೆ!

ಇಂದು ( ಮೇ 26 ) ಧರಂಶಾಲಾ ಕ್ರೀಡಾಂಗಣದಲ್ಲಿ ಮಹತ್ವದ ಐಪಿಎಲ್ 2026ರ ಒಂದನೇ ಕ್ವಾಲಿಫಯರ್ ಪಂದ್ಯ ನಡೆಯಲಿದೆ.

ಗ್ರೂಪ್ ಹಂತದ ಅಂಕಪಟ್ಟಿಯಲ್ಲಿ ಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನ ಪಡೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಇನ್ನು ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ತಲುಪಿದರೆ, ಸೋಲುವ ತಂಡ ನಾಳೆ ( ಮೇ 27 ) ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ಜತೆ ಮೇ 29ರಂದು ನಡೆಯಲಿರುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅಂಶವೇ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಏಕೆ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಸುತ್ತಿದ್ದು, ಸೋಲುವ ತಂಡಕ್ಕೆ ಫೈನಲ್ ತಲುಪು ಇನ್ನೊಂದು ಅವಕಾಶ ಸಿಗಲಿದೆ.

ಈ ನಡುವೆ ಮಳೆ ಕುರಿತ ಸುದ್ದಿಗಳೂ ಸಹ ಹರಿದಾಡುತ್ತಿದ್ದು, ಧರಂಶಾಲಾದಲ್ಲಿ ಸಂಜೆ ಐದು ಗಂಟೆ ಸಮಯಕ್ಕೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಕ್ಯುವೆದರ್ ಪ್ರಕಾರ 80% ಮಳೆಯಾಗುವ ಸಾಧ್ಯತೆಗಳಿದ್ದು, ಟಾಸ್ ವೇಳೆ ಮಳೆ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇನ್ನು ಒಂದುವೇಳೆ ಇಂದಿನ ಪಂದ್ಯ ಮಳೆಯಿಂದ ರದ್ದಾದರೆ ಪಂದ್ಯ ಇನ್ನೊಂದು ದಿನ ನಡೆಯಲಿದೆಯಾ ಎಂಬ ಪ್ರಶ್ನೆಗಳು ಎದ್ದಿದ್ದು, ಇದಕ್ಕೆ ಉತ್ತರ ಈ ಪಂದ್ಯಕ್ಕೆ ಯಾವುದೇ ಮೀಸಲು ದಿನ ಇರುವುದಿಲ್ಲ.

ಹೌದು, ಈ ಪಂದ್ಯಕ್ಕೆ ರಿಸರ್ವ್ ಡೇ ಇಲ್ಲದೇ ಇದ್ದು, ಮಳೆಯಿಂದ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೇರವಾಗಿ ಫೈನಲ್ ತಲುಪಲಿದ್ದು, ಎರಡನೇ ಸ್ಥಾನ ಪಡೆದ ಗುಜರಾತ್ ಟೈಟನ್ಸ್ ಎಲಿಮಿನೇಟರ್ ಗೆದ್ದು ಬರುವ ತಂಡದ ಜತೆ ಎರಡನೇ ಕ್ವಾಲಿಫಯರ್ ಆಡಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular