ಇಂದು ( ಮೇ 21 ) ಬೆಳಗ್ಗೆ ಎದ್ದ ಕೂಡಲೇ ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸತತವಾಗಿ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಬಿಜೆಪಿ ಪಕ್ಷವನ್ನು ಇನ್ಸ್ಟಾಗ್ರಾಮ್‌ನಲ್ಲಿ ಬಗ್ಗುಬಡಿದ ಸುದ್ದಿ ಕಣ್ಣಿಗೆ ಬಿದ್ದಿತ್ತು.
14 ವರ್ಷಗಳಿಂದ ಕಷ್ಟಪಟ್ಟು, ಹಲವಾರು ವಿಡಿಯೊಗಳನ್ನು ಅಪ್‌ಲೋಡ್ ಮಾಡಿ 8.7 ಮಿಲಿಯನ್ ಹಿಂಬಾಲಕರನ್ನು ಇನ್ಸ್ಟಾಗ್ರಾಮ್‌ನಲ್ಲಿ ಸಂಪಾದಿಸಿದ್ದ ಬಿಜೆಪಿಯನ್ನು ಮೇ 16ರಂದು ಶುರುವಾದ ಕಾಕ್ರೋಚ್ ಜನತಾ ಪಾರ್ಟಿ ಕೇವಲ ನಾಲ್ಕೇ ದಿನಗಳಲ್ಲಿ ಹಿಂದಿಕ್ಕಿಬಿಟ್ಟಿತು.
ಹೀಗೆ ರಾತ್ರಿ ಬಿಜೆಪಿಯನ್ನು ಬಗ್ಗುಬಡಿದಿದ್ದ ಕಾಕ್ರೋಚ್ ಜನತಾ ಪಾರ್ಟಿ ಇದೀಗ ದೇಶದಲ್ಲಿ ಅತಿ ಹೆಚ್ಚು ಇನ್ಸ್ಟಾಗ್ರಾಮ್ ಹಿಂಬಾಲಕರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿದೆ. ಹೌದು, ಐಎನ್‌ಸಿ ಕಾಂಗ್ರೆಸ್ 13.3 ಮಿಲಿಯನ್ ಹಿಂಬಾಲಕರನ್ನು ಹೊಂದಿದೆ. ಸದ್ಯ ಇಂದು ( ಮೇ 21 ) ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ 14.3 ಮಿಲಿಯನ್ ಫಾಲೋವರ್ಸ್‌ಗಳನ್ನು ತಲುಪಿದೆ.
ಈ ಮೂಲಕ ಕಾಕ್ರೋಚ್ ಜನತಾ ಪಾರ್ಟಿ ದೇಶದಲ್ಲಿ ಅತಿಹೆಚ್ಚು ಜನರಿಂದ ಫಾಲೋ ಮಾಡಲ್ಪಡುತ್ತಿರುವ ಪಾರ್ಟಿ ಎಂಬ ದಾಖಲೆ ಬರೆದಿದೆ.

