ಕಲಬುರಗಿ: ಕಲಬುರಗಿಯಿಂದ ಬೆಂಗಳೂರಿಗೆ ಜೂನ್ 10 ರಿಂದ ವಿಮಾನ ಸೇವೆ ಪುನರಾರಂಭವಾಗಲಿದೆ. ಕಳೆದ 8 ತಿಂಗಳಿಂದ ಕಲಬುರಗಿ -ಬೆಂಗಳೂರು ವಿಮಾನ ಸೇವೆ ಸ್ಥಗಿತವಾಗಿತ್ತು. ಜೂನ್ 10 ರಿಂದ ಪುನರಾರಂಭವಾಗಲಿದೆ.
ವಿಮಾನಸೇವೆಯನ್ನು ಪುನರಾರಂಭಿಸುವಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳು ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದು ಅದೀಗ ಫಲಪ್ರದವಾಗಿದೆ. ಜೂನ್ 10 ರಿಂದ ಸಂಜೆ ಬೆಂಗಳೂರಿಗೆ ಕಲಬುರಗಿ ಹಾಗೂ ಕಲಬುರಗಿಯಿಂದ ಬೆಂಗಳೂರಿಗೆ ರೌಂಡ್ ಟ್ರಿಪ್ ಸೇವೆ ಆರಂಭವಾಗಲಿದೆ.
ಟಿಕೆಟ್ ಬುಕಿಂಗ್ ಪ್ರಕ್ರಿಯೆ ಕೂಡ ಶೀಘ್ರದಲ್ಲೇ ಶುರುವಾಗಿದೆ. ಕಳೆದ ವರ್ಷ ಅಕ್ಟೋಬರ್ 15 ರಂದು ಸ್ಥಗಿತವಾಗಿದ್ದ ವಿಮಾನ ಸೇವೆ ಪುನರಾರಂಭಿಸಲು ರಾಜ್ಯ ಸರ್ಕಾರ ವೆಚ್ಚ ಸರಿದೂಗಿಸುವ ನಿಧಿಯಿಂದ 28.47 ಕೋಟಿ ರೂ. ಅನುದಾನ ನೀಡಿದೆ.

