HomeLatest Newsಅಯ್ಯಯ್ಯೋ ಅಲ್ಪಮೊತ್ತಕ್ಕೆ ಸುಸ್ತಾದ ಮುಂಬೈ; ಮತ್ತೊಂದು ತಂಡವನ್ನು ಮನೆಗೆ ಕಳುಹಿಸುವ ಅವಕಾಶ ಕೈಚೆಲ್ಲಿತಾ ಪಾಂಡ್ಯ ಪಡೆ?

ಅಯ್ಯಯ್ಯೋ ಅಲ್ಪಮೊತ್ತಕ್ಕೆ ಸುಸ್ತಾದ ಮುಂಬೈ; ಮತ್ತೊಂದು ತಂಡವನ್ನು ಮನೆಗೆ ಕಳುಹಿಸುವ ಅವಕಾಶ ಕೈಚೆಲ್ಲಿತಾ ಪಾಂಡ್ಯ ಪಡೆ?

ಇಂದು ( ಮೇ 20 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ 2026ರ ಲೀಗ್ ಹಂತದ 65ನೇ ಪಂದ್ಯ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಮಳೆಯಿಂದಾಗಿ ಕೆಲ ಕಾಲ ಪಂದ್ಯ ಸ್ಥಗಿತಗೊಂಡರೂ 20 ಓವರ್‌ಗಳ ಪಂದ್ಯ ನಡೆಯಿತಾದರೂ ಪಿಚ್ ಒದ್ದೆಯಾಗಿದ್ದ ಕಾರಣ ರನ್ ಗಳಿಸಲು ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 148 ರನ್‌ಗಳ ಗುರಿಯನ್ನು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರ ರಯಾನ್ ರಿಕೆಲ್ಟನ್ 6, ರೋಹಿತ್ ಶರ್ಮಾ 15, ನಮನ್ ಧೀರ್ ಡಕ್‌ಔಟ್, ಸೂರ್ಯಕುಮಾರ್ ಯಾದವ್ 15, ತಿಲಕ್ ವರ್ಮಾ 20, ನಾಯಕ ಹಾರ್ದಿಕ್ ಪಾಂಡ್ಯ 26, ವಿಲ್ ಜಾಕ್ಸ್ 14, ದೀಪಕ್ ಚಹರ್ 10 ಹಾಗೂ ಕಾರ್ಬಿನ್ ಬಾಷ್ 18 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು.

ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸೌರಭ್ ದುಬೆ, ಕ್ರಾಮೆರಾನ್ ಗ್ರೀನ್ ಹಾಗೂ ಕಾರ್ತಿಕ್ ತ್ಯಾಗಿ ತಲಾ ಎರಡು ವಿಕೆಟ್ ಪಡೆದರೆ, ಸುನಿಲ್ ನರೇನ್ ಒಂದು ವಿಕೆಟ್ ಪಡೆದರು.

ಹೀಗೆ ಅಲ್ಪ ಮೊತ್ತ ಕಲೆಹಾಕಿದ ಮುಂಬೈ ಇಂಡಿಯನ್ಸ್ ಕೊಲ್ಕತ್ತಾವನ್ನು ಗೆಲ್ಲಲು ಬಿಟ್ಟು ಇಂದು ಅವರನ್ನು ಎಲಿಮಿನೇಟ್ ಮಾಡಲು ಇದ್ದ ಅವಕಾಶವನ್ನು ಕೈಚೆಲ್ಲಿತಾ ಎಂಬ ಪ್ರಶ್ನೆ ಮೂಡಿದೆ.

ಹೌದು, 12 ಪಂದ್ಯಗಳನ್ನಾಡಿ 11 ಅಂಕಗಳನ್ನು ಹೊಂದಿರುವ ಕೆಕೆಆರ್‌ ಪ್ಲೇಆಫ್ ಹಾದಿ ಸುಲಭವಾಗಿರದೇ ಇದ್ದರೂ ಸಹ ಜೀವಂತವಾಗಿದೆ. ಏಕೆಂದರೆ ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ತಂಡದ ಒಟ್ಟು ಅಂಕ 15 ಆಗಲಿದೆ. ಡೆಲ್ಲಿ ಹಾಗೂ ಚೆನ್ನೈ ಉಳಿದ ಪಂದ್ಯಗಳನ್ನು ಗೆದ್ದರೂ 14 ಅಂಕಗಳಾಗಲಿದ್ದು, ಕೆಕೆಆರ್‌ಗಿಂತ ಕಡಿಮೆಯಾಗಲಿದೆ. 14 ಅಂಕ ಹೊಂದಿರುವ ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಪಂದ್ಯ ಸೋತರೆ ಪಂಜಾಬ್ ಕಿಂಗ್ಸ್ ತಂಡವೇನಾದರೂ ತನ್ನ ಕೊನೆಯ ಪಂದ್ಯ ಸೋತರೆ ಕೆಕೆಆರ್ ಪ್ಲೇಆಫ್ ಪ್ರವೇಶ ಪಡೆಯಲಿದೆ. ಒಂದುವೇಳೆ ಈ ಪಂದ್ಯವನ್ನೇನಾದರೂ ಕೆಕೆಆರ್ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಎಲಿಮಿನೇಟ್ ಆಗಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular