ಮಂಗಳೂರು: ಮಂಗಳೂರು ನಗರದ ಕುಂಟಿಕಾನ ಸಮೀಪ ಮಾರ್ಟ್ ವೊಂದರ ಕಟ್ಟಡದ ಲಿಫ್ಟ್ ನಲ್ಲಿ ಸಿಲುಕಿ ಯುವಕ ಸಾವನ್ನಪ್ಪಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪೂಂಜಕೆರೆ ನಿವಾಸಿ ನೌಫಲ್(28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ತೆರಳಿದ್ದಾಗ ನೌಫಲ್ ಲಿಫ್ಟ್ ನಲ್ಲಿ ಸಿಲುಕಿದ್ದಾರೆ. ಮೊದಲ ಮತ್ತು ಎರಡನೇ ಮಹಡಿಯ ನಡುವೆ ಲಿಫ್ಟ್ ನಲ್ಲಿ ನೌಫಲ್ ಸಿಲುಕಿದ್ದು ಈ ವೇಳೆ ಸಹೋದ್ಯೋಗಿಗಳು ಆತನ ರಕ್ಷಣೆಗೆ ಬಂದಿದ್ದಾರೆ. ಆತನ ರಕ್ಷಣೆಗಾಗಿ ಕೈಹಿಡಿದು ಎಳೆಯುವ ಸಂದರ್ಭದಲ್ಲಿ ಏಕಾಏಕಿ ಲಿಫ್ಟ್ ಚಲಿಸಿದೆ. ಇದರ ಪರಿಣಾಮ ಲಿಫ್ಟ್ ಮತ್ತು ಗೋಡೆಯ ಮತ್ತೆ ಸಿಲುಕಿ ನೌಫಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

