HomeKarnatakaBREAKING : ರೈತನ ಜಮೀನು ಹದ್ದುಬಸ್ತಿಗೆ 1 ಲಕ್ಷಕ್ಕೆ ಬೇಡಿಕೆ : ದಾವಣಗೆರೆಯಲ್ಲಿ ಲೋಕಾಯುಕ್ತ ಬಲೆಗೆ...

BREAKING : ರೈತನ ಜಮೀನು ಹದ್ದುಬಸ್ತಿಗೆ 1 ಲಕ್ಷಕ್ಕೆ ಬೇಡಿಕೆ : ದಾವಣಗೆರೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇ ಸೂಪರ್ ವೈಸರ್

ದಾವಣಗೆರೆ: ರೈತನೊಬ್ಬನಿಂದ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸರ್ವೇ ಸೂಪರ್ ವೈಸರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ADLR (ಭೂ ದಾಖಲೆಗಳ ಸಹಾಯಕ ನಿರ್ದೇಶಕರು) ಕಚೇರಿಯಲ್ಲಿ ನಡೆದಿದೆ. ಸರ್ವೇ ಸೂಪರ್ ವೈಸರ್ ಕೆ.ಹೆಚ್. ಅಂಜಿನಪ್ಪ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.

ಘಟನೆಯ ವಿವರ: ದಾವಣಗೆರೆ ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ‘ದ್ವಾರಕಾ ಲಾಡ್ಜ್’ನಲ್ಲಿ 50 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಅಂಜಿನಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಧುರ ನಾಯಕನಹಳ್ಳಿಯ ರೈತರಾದ ಎ.ಬಿ. ಕುಮಾರನಾಯಕ ಎಂಬುವವರ ಜಮೀನಿನ ಹದ್ದುಬಸ್ತು ಮಾಡಿಕೊಡಲು ಅಂಜಿನಪ್ಪ ಅವರು ಒಟ್ಟು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ, ಮೊದಲ ಕಂತಾಗಿ 50 ಸಾವಿರ ರೂಪಾಯಿಗಳನ್ನು ತನ್ನ ಸ್ನೇಹಿತ ಶ್ರೀಧರ್ ಮೂಲಕ ರೈತನಿಂದ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಸರ್ವೇ ಸೂಪರ್ ವೈಸರ್ ಅಂಜಿನಪ್ಪ ಹಾಗೂ ಆತನಿಗೆ ಸಾಥ್ ನೀಡಿದ ಸ್ನೇಹಿತ ಶ್ರೀಧರ್ ಇಬ್ಬರನ್ನೂ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular