HomeIPL 2026ಸ್ಲೋವರ್ ಬಾಲ್‌ಗಳ ಅತಿಯಾದ ಬಳಕೆ ಬುಮ್ರಾಗೆ ಮುಳುವಾಯಿತೇ? ಮುಂಬೈ ಇಂಡಿಯನ್ಸ್ ಸ್ಟಾರ್ ವೇಗಿಯ ವೈಫಲ್ಯಕ್ಕೆ ಅಸಲಿ...

ಸ್ಲೋವರ್ ಬಾಲ್‌ಗಳ ಅತಿಯಾದ ಬಳಕೆ ಬುಮ್ರಾಗೆ ಮುಳುವಾಯಿತೇ? ಮುಂಬೈ ಇಂಡಿಯನ್ಸ್ ಸ್ಟಾರ್ ವೇಗಿಯ ವೈಫಲ್ಯಕ್ಕೆ ಅಸಲಿ ಕಾರಣ ಇಲ್ಲಿದೆ

ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲಿ ಜಸ್ಪ್ರಿತ್ ಬುಮ್ರಾ ಅವರ ಫಾರ್ಮ್ ಕೂಡ ಒಂದಾಗಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬುಮ್ರಾ, ಈಗ ಐಪಿಎಲ್‌ನಲ್ಲಿ ಸತತ ವಿಫಲರಾಗುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಒಂಬತ್ತು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್ ಪಡೆದಿರುವ ಅವರ ಪ್ರದರ್ಶನದ ಬಗ್ಗೆ ಈಗ ಕ್ರಿಕೆಟ್ ದಿಗ್ಗಜರು ವಿಶ್ಲೇಷಣೆ ನಡೆಸಿದ್ದಾರೆ.

ಬುಮ್ರಾ ಅವರ ಈ ಲಯ ತಪ್ಪಲು ‘ಟಿ20 ವಿಶ್ವಕಪ್ ಹ್ಯಾಂಗೋವರ್’ ಕಾರಣವಿರಬಹುದು ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಶಾನ್ ಪೊಲಾಕ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವಕಪ್ ನಡೆದ ಪಿಚ್‌ಗಳ ಸ್ವರೂಪದಿಂದಾಗಿ ಅಲ್ಲಿ ಸ್ಲೋವರ್ ಬಾಲ್‌ಗಳು ಹೆಚ್ಚು ಪರಿಣಾಮಕಾರಿಯಾಗಿದ್ದವು. ಅದೇ ಶೈಲಿಯನ್ನು ಬುಮ್ರಾ ಐಪಿಎಲ್‌ನಲ್ಲೂ ಮುಂದುವರಿಸುತ್ತಿದ್ದಾರೆ. ಆದರೆ, ಐಪಿಎಲ್ ಪಿಚ್‌ಗಳಲ್ಲಿ ಇದು ಅಷ್ಟಾಗಿ ವರ್ಕೌಟ್ ಆಗುತ್ತಿಲ್ಲ ಎಂದು ಪೊಲಾಕ್ ವಿವರಿಸಿದ್ದಾರೆ.

ನ್ಯೂಜಿಲೆಂಡ್‌ನ ಮಾಜಿ ವೇಗಿ ಸೈಮನ್ ಡೌಲ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದು, “ಬುಮ್ರಾ ಅತಿಯಾಗಿ ಸ್ಲೋವರ್ ಎಸೆತಗಳ ಮೇಲೆ ಅವಲಂಬಿತರಾಗಿದ್ದಾರೆ. ಇದು ಬ್ಯಾಟರ್‌ಗಳಿಗೆ ಸುಲಭವಾಗಿ ಅರ್ಥವಾಗುತ್ತಿದೆ. ಪವರ್‌ಪ್ಲೇ ಅವಧಿಯಲ್ಲಿ ಅವರು ಕನಿಷ್ಠ 12 ಎಸೆತಗಳನ್ನು ವೇಗವಾಗಿ ಎಸೆಯಬೇಕು. ಆ ಮೂಲಕ ಬ್ಯಾಟರ್‌ಗಳಿಗೆ ಒತ್ತಡ ಹೇರಬೇಕು. ಆದರೆ ಅವರು ಈಗ ಮೊದಲೇ ಸ್ಲೋವರ್ ಬಾಲ್ ಎಸೆಯುತ್ತಿರುವುದು ಅವರ ವಿಕೆಟ್ ಪಡೆಯುವ ಸಾಮರ್ಥ್ಯಕ್ಕೆ ಅಡ್ಡಿಯಾಗಿದೆ” ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬುಮ್ರಾ ಅವರ ಸರಾಸರಿ ವೇಗ ಕೂಡ ಈ ಸೀಸನ್‌ನಲ್ಲಿ ಇಳಿಮುಖವಾಗಿದೆ. ಇದು ಅವರ ದೈಹಿಕ ಫಿಟ್‌ನೆಸ್ ಬಗ್ಗೆಯೂ ಅನುಮಾನ ಮೂಡಿಸುತ್ತಿದೆ. ಮುಂಬೈ ಇಂಡಿಯನ್ಸ್ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಬುಮ್ರಾ ಫಾರ್ಮ್‌ಗೆ ಮರಳುವುದು ತಂಡದ ಪ್ಲೇ ಆಫ್ ಕನಸಿಗೆ ಅತ್ಯಂತ ಅಗತ್ಯವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular