HomeLifestyleಜಾಗತಿಕ ಫುಡ್ ಲಿಸ್ಟ್‌ನಲ್ಲಿ ಮಿಂಚಿದ ಮಸಾಲೆ ದೋಸೆ: ದಕ್ಷಿಣ ಭಾರತದ ರುಚಿಗೆ ವಿಶ್ವವೇ ಫಿದಾ!

ಜಾಗತಿಕ ಫುಡ್ ಲಿಸ್ಟ್‌ನಲ್ಲಿ ಮಿಂಚಿದ ಮಸಾಲೆ ದೋಸೆ: ದಕ್ಷಿಣ ಭಾರತದ ರುಚಿಗೆ ವಿಶ್ವವೇ ಫಿದಾ!

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಹಾರವಾದ ದೋಸೆ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯ ಮಿಶ್ರಣದಿಂದ ತಯಾರಾಗುವ, ಗರಿಗರಿಯಾದ ಮತ್ತು ರುಚಿಕರವಾದ ದೋಸೆಯು ವಿಶ್ವದ ಅತ್ಯುತ್ತಮ ತಿಂಡಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರಸಿದ್ಧ ಆಹಾರ ವಿಶ್ಲೇಷಣಾ ತಾಣವಾದ ‘ಟೇಸ್ಟ್ ಅಟ್ಲಾಸ್’ ಬಿಡುಗಡೆ ಮಾಡಿರುವ ಮೇ 2026ರ ವಿಶ್ವದ 50 ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ದೋಸೆ ವಿವಿಧ ವಿಭಾಗಗಳಲ್ಲಿ ಮಿಂಚಿದೆ.

ಮಸಾಲೆ ದೋಸೆಗೆ ಸಿಕ್ಕಿತು ಆರನೇ ಸ್ಥಾನ

ಸಾಮಾನ್ಯವಾಗಿ ವಿದೇಶಗಳಲ್ಲಿ ಪ್ಯಾನ್‌ಕೇಕ್ ಎಂದರೆ ಸಿಹಿಯಾದ ತಿಂಡಿ ಎಂಬ ಭಾವನೆಯಿದೆ. ಆದರೆ ಭಾರತದ ಈ ಖಾರವಾದ ಮಸಾಲೆ ದೋಸೆ ತನ್ನ ವಿಶಿಷ್ಟ ರುಚಿಯಿಂದ ಜಾಗತಿಕ ಆಹಾರ ಪ್ರಿಯರನ್ನು ಸೆಳೆದಿದೆ. ಈ ಪಟ್ಟಿಯಲ್ಲಿ ಮಸಾಲೆ ದೋಸೆಯು 4.3 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ವಿಶ್ವದಲ್ಲೇ 6ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಸಾಮಾನ್ಯ ದೋಸೆ 4.2 ರೇಟಿಂಗ್‌ನೊಂದಿಗೆ 15ನೇ ಸ್ಥಾನದಲ್ಲಿದ್ದರೆ, ಅತ್ಯಂತ ತೆಳುವಾದ ಮತ್ತು ಗರಿಗರಿಯಾದ ಪೇಪರ್ ದೋಸೆ 35ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾಗತಿಕ ಮಟ್ಟದಲ್ಲಿ ಸ್ಪರ್ಧೆ

ಈ ಪಟ್ಟಿಯಲ್ಲಿ ಲಾಟ್ವಿಯಾದ ಆಲೂಗಡ್ಡೆ ಪ್ಯಾನ್‌ಕೇಕ್ ಆದ ‘ಕರ್ಟುಪೆಲು ಪಂಕುಕಾಸ್’ ಮೊದಲ ಸ್ಥಾನದಲ್ಲಿದೆ. ನಂತರದ ಮೂರು ಸ್ಥಾನಗಳನ್ನು ಫ್ರಾನ್ಸ್‌ನ ಕ್ರೀಪ್ಸ್ (Crepes) ವಿಭಾಗದ ವಿವಿಧ ತಿಂಡಿಗಳು ಪಡೆದುಕೊಂಡಿವೆ. ಐದನೇ ಸ್ಥಾನದಲ್ಲಿ ಚೀನಾದ ‘ಜಿಯಾನ್‌ಬಿಂಗ್’ ಇದ್ದರೆ, ಆರನೇ ಸ್ಥಾನವನ್ನು ಭಾರತದ ಹೆಮ್ಮೆಯ ಮಸಾಲೆ ದೋಸೆ ಅಲಂಕರಿಸಿದೆ.

ದಕ್ಷಿಣ ಭಾರತದ ಮನೆಗಳಲ್ಲಿ ನಿತ್ಯವೂ ತಯಾರಾಗುವ ದೋಸೆ, ಇಂದು ಅಮೆರಿಕ, ಯುರೋಪ್ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸಖತ್ ಫೇಮಸ್ ಆಗುತ್ತಿದೆ. ಆರೋಗ್ಯಕರವಾಗಿ ಹದಗೊಳಿಸಿದ ಹಿಟ್ಟಿನಿಂದ ತಯಾರಾಗುವ ಈ ಖಾದ್ಯವು ಜಾಗತಿಕ ಮಟ್ಟದಲ್ಲಿ ಭಾರತೀಯ ಆಹಾರ ಪದ್ಧತಿಯ ಶ್ರೀಮಂತಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular