HomeKarnatakaಇನ್ನು ಶಾಲೆ, ಕಾಲೇಜು ಎಲ್ಲಾ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಗೆ ಅಂಕಪಟ್ಟಿ, ಹಾಜರಾತಿ, ನಡವಳಿಕೆ ಪತ್ರ...

ಇನ್ನು ಶಾಲೆ, ಕಾಲೇಜು ಎಲ್ಲಾ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಗೆ ಅಂಕಪಟ್ಟಿ, ಹಾಜರಾತಿ, ನಡವಳಿಕೆ ಪತ್ರ ರವಾನೆ

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ 2026-27 ನೇ ಸಾಲಿನಿಂದ ಅಂಕಪಟ್ಟಿ ಜೊತೆಗೆ ಅವರ ಹಾಜರಾತಿ, ನಡವಳಿಕೆ ಸೇರಿ ಸರ್ವತೋಮುಖ ಬೆಳವಣಿಗೆ ಬಿಂಬಿಸುವ ಸಮಗ್ರ ಪ್ರಗತಿಪತ್ರ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.

ಎಲ್ಕೆಜಿಯಿಂದ ಪದವಿಪೂರ್ವ ಕಾಲೇಜಿನವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಗತಿಪತ್ರ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಪ್ರಗತಿ ಪತ್ರ ಡಿಜಿಟಲ್ ರೂಪದಲ್ಲಿರಲಿದ್ದು, ಪೋಷಕರ ಮೊಬೈಲ್ ಅಥವಾ ಇ-ಮೇಲ್ ಗೆ ನೇರವಾಗಿ ರವಾನೆ ಮಾಡಲಾಗುವುದು.

 ಈ ಹೊಸ ಮಾದರಿಯ ಪ್ರಗತಿಪತ್ರದಲ್ಲಿ ಪರೀಕ್ಷೆಯ ಅಂಕಗಳು ಮಾತ್ರವಲ್ಲದೇ ವಿದ್ಯಾರ್ಥಿಯ ನಡವಳಿಕೆ, ಹಾಜರಾತಿ, ಶಿಕ್ಷಕರ ಅಭಿಪ್ರಾಯ, ಮಗುವಿನ ಸರ್ವತೋಮುಖ ಬೆಳವಣಿಗೆಯ ಮಾಹಿತಿ ಇರಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಪ್ರಗತಿ ಪತ್ರವನ್ನು ಪೋಷಕರಿಗೆ ಕಳುಹಿಸಲಾಗುವುದು. 2026 -27ನೇ ಶೈಕ್ಷಣಿಕ ವರ್ಷದಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಪೋಷಕರು ವಿನಂತಿಸಿದಾಗ ಅಥವಾ ವಿದ್ಯಾರ್ಥಿ ವರ್ಗಾವಣೆ ಪ್ರಮಾಣ ಪತ್ರ ಪಡೆದು ಬೇರೆ ಶಾಲೆಗೆ ಸೇರುವ ಸಂದರ್ಭದಲ್ಲಿ ಭೌತಿಕ ಪ್ರತಿಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular