HomeIPL 2026ಹಾರ್ದಿಕ್ ಪಾಂಡ್ಯನ ಮತ್ತೊಂದು ತಲೆಕೆಟ್ಟ ನಡೆ: ಇಂಪ್ಯಾಕ್ಟ್ ಪ್ಲೇಯರ್‌ಗೆ ಬ್ಯಾಟಿಂಗೂ ಇಲ್ಲ, ಬೌಲಿಂಗೂ ಇಲ್ಲ; ಇಡೀ...

ಹಾರ್ದಿಕ್ ಪಾಂಡ್ಯನ ಮತ್ತೊಂದು ತಲೆಕೆಟ್ಟ ನಡೆ: ಇಂಪ್ಯಾಕ್ಟ್ ಪ್ಲೇಯರ್‌ಗೆ ಬ್ಯಾಟಿಂಗೂ ಇಲ್ಲ, ಬೌಲಿಂಗೂ ಇಲ್ಲ; ಇಡೀ ಐಪಿಎಲ್‌ನಲ್ಲೇ ಇದೇ ಮೊದಲು!

ನಿನ್ನೆ ( ಏಪ್ರಿಲ್ 29 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ ಹೈದರಾಬಾದ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರಯಾನ್ ರಿಕೆಲ್ಟನ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿ ಬೌಂಡರಿಗಳ ಸುರಿಮಳೆಗೈದ ಸನ್ ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಚಚ್ಚಿತು.

ಬ್ಯಾಟಿಂಗ್‌ನಲ್ಲಿ ರನ್ ಹೊಳೆ ಹರಿಸಿ ಅಬ್ಬರಿಸಿದ ಮುಂಬೈ ಇಂಡಿಯನ್ಸ್ ಬೌಲಿಂಗ್‌ನಲ್ಲಿ ಮಕಾಡೆ ಮಲಗಿತು. ಸನ್‌ರೈಸರ್ಸ್ ಬ್ಯಾಟಿಂಗ್ ಅಬ್ಬರಕ್ಕೆ ಉತ್ತರವಿಲ್ಲದೇ ವಿಫಲವಾಯಿತು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತ ಕೆಲಹಾಕಿದರೂ ಸಹ ಮುಂಬೈ ಇಂಡಿಯನ್ಸ್ ಸೋಲನ್ನು ಕಂಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಮುಂಬೈ ಇಂಡಿಯನ್ಸ್ ಹೀನಾಯ ಸೋಲನ್ನು ಕಾಣುತ್ತಿದ್ದಂತೆ ನಾಯಕ ಹಾರ್ದಿಕ್ ಪಾಂಡ್ಯ ಭಾರೀ ದೊಡ್ಡ ಮಟ್ಟದಲ್ಲಿ ಟ್ರೋಲ್‌ಗೀಡಾಗಿದ್ದಾರೆ. ಹೋಮ್‌ಗ್ರೌಂಡ್‌ನಲ್ಲಿ ಎರಡನೇ ಬಾರಿಗೆ ಇನ್ನೂರಕ್ಕಿಂತ ಹೆಚ್ಚು ರನ್ ಟಾರ್ಗೆಟ್ ನೀಡಿಯೂ ಸೋಲನ್ನು ಕಂಡಿದ್ದು ಈ ರೀತಿಯ ಸೋಲನ್ನು ಒಮ್ಮೆಯೂ ಕಾಣದ ರೋಹಿತ್ ಹೋಲಿಸಿ ತೆಗಳಿದ್ದಾರೆ.

ಇನ್ನು ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಂಭವಾದ ಮೇಲೆ ಶಾರ್ದೂಲ್ ಠಾಕೂರ್‌ರನ್ನು ಇಂಪ್ಯಾಕ್ಟ್ ಪ್ಲೇಯರ್‌ನನ್ನಾಗಿ ಕಣಕ್ಕಿಳಿಸಿದ ನಾಯಕ ಹಾರ್ದಿಕ್ ಪಾಂಡ್ಯ ನಿರ್ಧಾರ ಮತ್ತಷ್ಟು ಟೀಕೆಗಳಿಗೆ ಕಾರಣವಾಗಿದೆ.

ಬ್ಯಾಟಿಂಗ್ ಮುಗಿದ ಬಳಿಕ ಕಣಕ್ಕಿಳಿದ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್‌ಗೆ ಬೌಲಿಂಗ್ ನೀಡುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಪಾಂಡ್ಯ ಮಾತ್ರ ಶಾರ್ದೂಲ್ ಠಾಕೂರ್‌ಗೆ ಒಂದೇ ಒಂದು ಬೌಲಿಂಗ್ ಮಾಡುವ ಅವಕಾಶವನ್ನೂ ಸಹ ನೀಡಲಿಲ್ಲ.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಒಬ್ಬ ಬ್ಯಾಟಿಂಗ್ ಹಾಗೂ ಬೌಲಿಂಗ್ ಇಲ್ಲದೇ ಕಣದಲ್ಲಿದ್ದ ಘಟನೆ ನಡೆದಿದೆ. ಈ ವಿಷಯಕ್ಕೆ ಸದ್ಯ ಹಾರ್ದಿಕ್ ಪಾಂಡ್ಯ ಟೀಕೆಗೆ ಒಳಗಾಗಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular