HomeLatest Newsಜನ ಜಾಡಿಸಿದ ಮೇಲೆ ಒಂದೇ ದಿನಕ್ಕೆ ಬುದ್ದಿ ಕಲಿತ ಅಧಿಕಾರಿಗಳು, ಬ್ಯಾಂಕ್: 19300 ರೂಗಾಗಿ ಸಮಾಧಿಯಿಂದ...

ಜನ ಜಾಡಿಸಿದ ಮೇಲೆ ಒಂದೇ ದಿನಕ್ಕೆ ಬುದ್ದಿ ಕಲಿತ ಅಧಿಕಾರಿಗಳು, ಬ್ಯಾಂಕ್: 19300 ರೂಗಾಗಿ ಸಮಾಧಿಯಿಂದ ಸಹೋದರಿ ಹೆಣ ಹೊತ್ತುತಂದಿದ್ದ ವ್ಯಕ್ತಿಗೆ ಸಿಕ್ತು ಹಣ

ಒಡಿಶಾ ಗ್ರಾಮೀಣ ಬ್ಯಾಂಕ್‌ ಮುಂದೆ ನಿನ್ನೆ ( ಏಪ್ರಿಲ್ 28 ) ಜಿತು ಮುಂಡ ಎಂಬ ಬುಡಕಟ್ಟು ಜನಾಂಗದ ವ್ಯಕ್ತಿ ತನ್ನ ಸಹೋದರಿಯ ಹೆಣವನ್ನು ಸಮಾಧಿಯಿಂದ ಹೊರತೆಗೆದು ಬ್ಯಾಂಕ್ ಮುಂದೆ ತಂದು ಇಟ್ಟಿದ್ದ.

ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ತನ್ನ ಸಹೋದರಿ ಕರ್ಲ ಮುಂಡ ಎಂಬಾಕೆಯ ಖಾತೆಯಲ್ಲಿ 19300 ರೂ ಇತ್ತು. ಸಾಯುವ ಮುನ್ನ ಆಕೆ ಇದನ್ನು ವಿತ್‌ಡ್ರಾ ಮಾಡಿಕೊಳ್ಳುವಂತೆ ಸಹೋದರನಿಗೆ ತಿಳಿಸಿದ್ದರು. ಅದರಂತೆ ಬ್ಯಾಂಕ್‌ಗೆ ತೆರಳಿದ ಜಿತುಗೆ ಬ್ಯಾಂಕ್ ಅಧಿಕಾರಿಗಳು ಖಾತೆದಾರರೇ ನೇರವಾಗಿ ಬರಬೇಕು ಎಂದಿದ್ದರು. ತನ್ನ ಸಹೋದರಿ ಸಾವನ್ನಪ್ಪಿದ್ದಾರೆ ಎಂದಾಗ ಮರಣ ಪತ್ರ ತರಬೇಕೆಂದು ತಿಳಿಸಿದರು.

ಕಡುಬಡವನಾಗಿದ್ದ ಜಿತು ಮುಂಡಗೆ ಮರಣ ಪತ್ರ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಬ್ಯಾಂಕ್‌ನ ಈ ನಿಯಮದಿಂದ ಬೇಸತ್ತ ಜಿತು ಮುಂಡ ಸಮಾಧಿಯಿಂದ ತನ್ನ ಸಹೋದರಿಯ ಹೆಣವನ್ನು ಹೊರತೆಗೆದು ಸುಮಾರು ಐದು ಕಿಲೋಮೀಟರ್ ಹೆಗಲ ಮೇಲೆ ಹೊತ್ತು ಬ್ಯಾಂಕ್‌ಗೆ ತಂದು ಸಾಕ್ಷಿಯಾಗಿ ಸಿಬ್ಬಂದಿ ಮುಂದಿಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸುದ್ದಿ ನಿನ್ನೆ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಬ್ಯಾಂಕ್ ಸಿಬ್ಬಂದಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಹೀಗೆ ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆ ಬ್ಯಾಂಕ್ ಇದರಲ್ಲಿ ತಮ್ಮ ತಪ್ಪಿಲ್ಲ, ಮೃತಪಟ್ಟ ಖಾತೆದಾರರ ಹಣವನ್ನು ಸರಿಯಾದ ಪತ್ರಗಳಿಲ್ಲದೇ ನೀಡಲಾಗುವುದಿಲ್ಲ, ಅದನ್ನೇ ಆ ವ್ಯಕ್ತಿಗೆ ಹೇಳಿಕಳುಹಿಸಲಾಗಿತ್ತು. ಆದರೆ ಆ ವ್ಯಕ್ತಿ ಹೆಣವನ್ನು ತಂದರು ಎಂದು ಹೇಳಿಕೊಂಡಿತ್ತು.

ಇದೀಗ ಇಷ್ಟೆಲ್ಲ ನಡೆದ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಪಾಲಿನ ಕೆಲಸಗಳನ್ನು ವೇಗವಾಗಿ ಮುಗಿಸಿಕೊಟ್ಟಿದ್ದು, ಕರ್ಲ ಮುಂಡ ಅವರ ಮರಣ ಪತ್ರವನ್ನು ಬ್ಯಾಂಕ್‌ಗೆ ಹಸ್ತಾಂತರಿಸಿದೆ. ಬಳಿಕ ಬ್ಯಾಂಕ್ ಜಿತು ಮುಂಡಗೆ ಹಣವನ್ನು ಊರಿನ ಜನತೆಯ ಸಮ್ಮುಖದಲ್ಲಿ ವಿತರಿಸಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular