ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ಅಮಿರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾದ ಪ್ರಚಾರದ ವೇಳೆ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಯಿ ಪಲ್ಲವಿ ಅವರ ಹೆಗಲ ಮೇಲೆ ಕೈ ಹಾಕಲು ಮುಂದಾದ ಜುನೈದ್, ತಕ್ಷಣವೇ ಅದನ್ನು ಹಿಂತೆಗೆದುಕೊಂಡ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
‘ಏಕ್ ದಿನ್’ ಸಿನಿಮಾದ ವಿಶೇಷ ಪ್ರದರ್ಶನದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಜುನೈದ್ ಖಾನ್ ಅವರು ಫೋಟೋಗೆ ಫೋಸ್ ನೀಡುವಾಗ ಸಾಯಿ ಪಲ್ಲವಿ ಹೆಗಲ ಮೇಲೆ ಕೈ ಹಾಕಲು ಮುಂದಾದರು. ಆದರೆ, ಕೂಡಲೇ ಅವರು ತಮ್ಮ ನಿರ್ಧಾರ ಬದಲಿಸಿ ಕೈಯನ್ನು ಹಿಂದೆ ತೆಗೆದುಕೊಂಡರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಜುನೈದ್ ಅವರ ‘ಗೌರವಯುತ ನಡವಳಿಕೆ’ಯನ್ನು ಶ್ಲಾಘಿಸುತ್ತಿದ್ದಾರೆ. “ಸಾಯಿ ಪಲ್ಲವಿ ಉಳಿದ ನಟಿಯರಂತಲ್ಲ ಎಂಬು ‘ಏಕ್ ದಿನ್’ ಸಿನಿಮಾ ಥಾಯ್ ಚಿತ್ರ ‘ಒನ್ ಡೇ’ ನ ರಿಮೇಕ್ ಆಗಿದ್ದು, ಸುನೀಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಮೇ 1 ರಂದು ಸಿನಿಮಾ ಬಿಡುಗಡೆಯಾಗಲಿದೆ.ಈ ಚಿತ್ರದ ಮೂಲಕ ಜುನೈದ್ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿದ ಆಮಿರ್ ಖಾನ್ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ಪ್ರವೇಶಿಸುತ್ತಿರುವ ಸಾಯಿ ಪಲ್ಲವಿ ಅವರ ವ್ಯಕ್ತಿತ್ವಕ್ಕೆ ಜುನೈದ್ ಗೌರವ ನೀಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಈ ಜೋಡಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

