HomeKarnatakaರಣ ಬಿಸಿಲ ಝಳ: ತಾಪಮಾನ ಹೆಚ್ಚಳದಿಂದ ಎರಡು ನಾಯಿಗಳು ಸಾವು; ಮತ್ತೊಂದು ಶ್ವಾನದ ಸ್ಥಿತಿ ಗಂಭೀರ

ರಣ ಬಿಸಿಲ ಝಳ: ತಾಪಮಾನ ಹೆಚ್ಚಳದಿಂದ ಎರಡು ನಾಯಿಗಳು ಸಾವು; ಮತ್ತೊಂದು ಶ್ವಾನದ ಸ್ಥಿತಿ ಗಂಭೀರ

ಮೈಸೂರು: ರಾಜ್ಯಾದ್ಯಂತ ರಣ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಾಪಮಾನ ಹೆಚ್ಚಳದಿಂದಾಗಿ ಮನುಷ್ಯರೇ ಹೈರಾಣಾಗುತ್ತಿದ್ದಾರೆ. ಹೀಟ್ ಸ್ಟ್ರೋಕ್ ನಿಂದಾಗಿ ಜೂವಕ್ಕೆ ಕುತ್ತು ಬರುತ್ತಿದೆ. ಮನುಷ್ಯರೇ ಸುಡು ಬಿಸಿಲಿಂದ ತತ್ತತಿರಿಸುತ್ತಿರುವಾಗ ಮೂಕಪ್ರಾಣಿಗಳ ಪಾಡೇನು? ಉಷ್ಣ ಅಲೆಯಿಂದಾಗಿ ಸಾಂಸ್ಕ್ರ‍ಿತಿಕ ನಗರಿ ಮೈಸೂರಿನಲ್ಲಿ ಎರಡು ನಾಯಿಗಳು ಸಾವನ್ನಪ್ಪಿವೆ. ಓರ್ವ ನಾಯಿ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

ಮೈಸೂರಿನ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ರಣ ಬಿಸಿಲ ಬೇಗೆಯಿಂದ ಎರಡು ಸಾಕುನಾಯಿಗಳು ಮೃತಪಟ್ಟಿದ್ದು, ಇನ್ನೊಂದು ಶ್ವಾನದ ಸ್ಥಿತಿ ಗಂಭೀರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೋಲ್ಡನ್ ರಿಟೈವರ್ ವರ್ಗಕ್ಕೆ ಸೇರಿದ 7 ವರ್ಷದ ರೋನಿ, ಬಿಗಲ್ ವರ್ಗಕ್ಕೆ ಸೇರಿದ 4 ವರ್ಷದ ಸೋನು ಎಂಬ ಸಾಕು ನಾಯಿಗಳು ಬಿಸಿಲಿನ ಹೊಡೆತಕ್ಕೆ ಮೃತಪಟ್ಟಿವೆ. ಮತ್ತೊಂದು ಸಾಕು ನಾಯಿಯ ಸ್ಥಿತಿ ಗಂಭೀರವಾಗಿದ್ದು, ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯ ನಗರದ ಮೂರನೇ ಹಂತದ ನಿವಾಸಿ ತೇಜಸ್ ಅವರು ಸಾಕಿದ್ದ ರೋನಿ ಶನಿವಾರ ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು. ಪ್ರದರ್ಶನದ ನಂತರ ಮಧ್ಯಾಹ್ನ 3ರ ವೇಳೆಗೆ ಅಸ್ವಸ್ಥಗೊಂಡ ರೋನಿಯನ್ನು ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಮೈಸೂರಿನ ವಿಜಯ ನಗರದಲ್ಲಿರುವ ಶ್ರೀ ಪೆಟ್ ಚಿಕಿತ್ಸೆ ಆಸ್ಪತ್ರೆಗೆ ಕರೆದೊಯ್ದು, ತುರ್ತು ಚಿಕಿತ್ಸೆ ಕೊಡಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಬೇಳೆಗೆ ಸಾವನ್ನಪ್ಪಿದೆ.

ಮತ್ತೊಂದು ಪ್ರಕರಣದಲ್ಲಿ ಮೋಹನ್ ಅವರು ತಮ್ಮ ಸೋನು ನಾಯಿಯನ್ನು ಶನಿವಾರ ಮಧ್ಯಾಹ್ನ ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಬಿಸಿಲಿನ ತಾಪಕ್ಕೆ ಅಸ್ವಸ್ಥಗೊಂಡಿತ್ತು. ತಕ್ಷಣ ಪೆಟ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಮತ್ತೊಂದು ಪ್ರಕರಣದಲ್ಲಿ ಸಾಕು ನಾಯಿಯೊಂದು ಹೀಟ್ ಸ್ಟೋಕ್‌ನಿಂದ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಎಂದು ಶ್ರೀ ಪೆಟ್ ಆಸ್ಪತ್ರೆಯ ವೈದ್ಯ ಡಾ. ದೀಪಕ್ ತಿಳಿಸಿದ್ದಾರೆ.

ಮನುಷ್ಯನಂತೆ ಶ್ವಾನಗಳು ಬೆವರುವುದು ಸಾಧ್ಯವಿಲ್ಲ. ಅವು ಉಸಿರಾಟದ ಮೂಲಕವೇ ದೇಹದ ತಾಪಮಾನವನ್ನು ಕಡಿಮೆ ಮಾಡಿಕೊಳ್ಳುತ್ತವೆ. ರಣ ಬಿಸಿಲಿನ ಸಂದರ್ಭದಲ್ಲಿ ವಿಶೇಷವಾಗಿ ಮಧ್ಯಾಹ್ನದ ವೇಳೆಯಲ್ಲಿ ಈ ವಿಧಾನ ವಿಫಲವಾಗಬಹುದು. ಇದರಿಂದ ದೇಹದ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಏರುತ್ತದೆ. ಆಗ ಹೀಟ್ ಸ್ಟ್ರೋಕ್ ಸಂಭವಿಸಲಿದೆ. ತಕ್ಷಣ ಚಿಕಿತ್ಸೆ ದೊರೆಯದಿದ್ದರೆ ಅಂಗಾಂಗ ವೈಫಲ್ಯ ಮತ್ತು ಮರಣಕ್ಕೂ ಕಾರಣವಾಗಬಹುದು ಎಂದು ಪಶು ವೈದ್ಯರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular