ಬೆಂಗಳೂರು : ರೈಲ್ವೇ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು, ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ. ಆಗಸ್ಟ್ 1ರಿಂದ ಈ ಅತ್ಯಾಧುನಿಕ ರೈಲು ಹಳಿಗೆ ಇಳಿಯಲಿದ್ದು, ಐಟಿ ಸಿಟಿ ಮತ್ತು ವಾಣಿಜ್ಯ ನಗರಿ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಆಗಸ್ಟ್ 1, 2026 ರಿಂದ ಅಧಿಕೃತವಾಗಿ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.ಪ್ರಸ್ತುತ ಉದ್ಯಾನ್ ಎಕ್ಸ್ಪ್ರೆಸ್ 24 ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ವಂದೇ ಭಾರತ್ ಸ್ಲೀಪರ್ ಕೇವಲ 15 ಗಂಟೆಗಳಲ್ಲಿ ಗುರಿ ತಲುಪಲಿದೆ. ಈ ರೈಲು ಗರಿಷ್ಠ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (CSMT) ವರೆಗೆ ಸಂಚರಿಸಲಿದ್ದು, ಹಾದಿಯಲ್ಲಿ ಸೊಲ್ಲಾಪುರ ಮತ್ತು ಕಲಬುರಗಿ ನಿಲ್ದಾಣಗಳಲ್ಲಿ ನಿಲ್ಲಲಿದೆ.ಸಂಜೆ ಬೆಂಗಳೂರಿನಿಂದ ಹೊರಟು ಮರುದಿನ ಮುಂಜಾನೆ ಮುಂಬೈ ತಲುಪುವಂತೆ ರಾತ್ರಿ ಪ್ರಯಾಣಕ್ಕೆ ಅನುಕೂಲಕರವಾಗಿ ವೇಳಾಪಟ್ಟಿ ಇರಲಿದೆ.ಇದು 16 ಬೋಗಿಗಳನ್ನು ಹೊಂದಿದ್ದು, ಬಿಇಎಂಎಲ್ (BEML) ಸಂಸ್ಥೆಯು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ತಂತ್ರಜ್ಞಾನ ಬಳಸಿ ಇದನ್ನು ನಿರ್ಮಿಸಿದೆ. ಇದು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲಾಗಿದೆ (ಮೊದಲನೆಯದು ಹೌರಾ-ಕಾಮಾಖ್ಯ ಮಾರ್ಗದಲ್ಲಿ ಸಂಚರಿಸುತ್ತಿದೆ

