ಶಿವಮೊಗ್ಗ: ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಮಂಗಳಮುಖಿ ಕರೆದೊಯ್ದು ಹಣ, ಮೊಬೈಲ್, ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಘಟನೆ ನಡೆದ 12 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 24/04/2026 ರಂದು ರಾತ್ರಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಚಾನಲ್ ಏರಿಯಾದ ಹತ್ತಿರ ಒಬ್ಬ ಮಂಗಳಮುಖಿಯನ್ನು ಯಾರೋ ಅಪರಿಚಿತರು ಆಟೋದಲ್ಲಿ ಕರೆದುಕೊಂಡು ಬಂದು 4,000 ರೂ. ನಗದು, ಮೊಬೈಲ್, ಕೊರಳ ಚೈನ್ & ಬಂಗಾರದ ಉಂಗುರಗಳನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ದಿನಾಂಕ 25/04/2026 ರಂದು ದೂರು ನೀಡಿದ ಮೇರೆಗೆ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ ಎಸ್ಪಿ ನಿಖಿಲ್ ಬಿ. ಎಎಸ್ಪಿ ಕಾರಿಯಪ್ಪ, ಡಿವೈಎಸ್ಪಿ ಸಂಜೀವ್ ಕುಮಾರ್ ಟಿ. ಅವರ ಮಾರ್ಗದರ್ಶನದಲ್ಲಿ ವಿನೋಬನಗರ ಪೊಲೀಸ್ ಠಾಣೆ ಪೊಲೀಸ್ ನೀರಿಕ್ಷಕರು(ಪ್ರಭಾರ) ಸುರೇಶ್ ಅವರ ಉಸ್ತುವಾರಿಯಲ್ಲಿ ಪಿಎಸ್ಐ ತಿರುಮಲೇಶ್ ಜಿ. ಮತ್ತು ಸಿಬ್ಬಂದಿಗಳಾದ ರಾಜು ಕೆ.ಆರ್., ಚಂದ್ರಾನಾಯ್ಕ ಬಿ., ವಿಜಯಕುಮಾರ್, ಮನುಶಂಕರ, ಅವರ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಪ್ರಕರಣದ ಆರೋಪಿ ಬಂಧಿಸಿದೆ.
ಹಳೆ ಮಂಡ್ಲಿ ನಿವಾಸಿ ದೇವರಾಜ(27) ಬಂಧಿತ ಆರೋಪಿ. ಪ್ರಕರಣ ದಾಖಲಾಗಿ 12 ಗಂಟೆಯೊಳಗೆ ಬಂಧಿಸಿ, ಮೊಬೈಲ್ ಅದರ ಬೆಲೆ 20,000 ಮತ್ತು ಕೃತ್ಯಕ್ಕೆ ಬಳಸಿದ ಆಟೋ, 3 ಲಕ್ಷ ಹಾಗೂ 01 ಚಾಕು ಸೇರಿ ಒಟ್ಟು ಅಂದಾಜು ಮೌಲ್ಯ 3,20,000 ರೂ ಮೌಲ್ಯದ ಮಾಲು ವಶಪಡಿಸಿಕೊಂಡಿರುತ್ತಾರೆ. ಸದರಿ ತನಿಖಾ ತಂಡದ ಕಾರ್ಯವನ್ನು ಪೊಲೀಸ್ ಅಧೀಕ್ಷಕ ನಿಖಿಲ್ ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

