HomeLatest Newsಶ್ರೇಯಸ್ ಐಯ್ಯರ್‌ನ ಆ ಎರಡು ಕ್ಯಾಚ್‌ ಡ್ರಾಪ್‌ಗಳಿಂದ 265 ರನ್ ಬೃಹತ್ ಟಾರ್ಗೆಟ್ ನೀಡಿದ್ದ ಗೆಲ್ಲುವ...

ಶ್ರೇಯಸ್ ಐಯ್ಯರ್‌ನ ಆ ಎರಡು ಕ್ಯಾಚ್‌ ಡ್ರಾಪ್‌ಗಳಿಂದ 265 ರನ್ ಬೃಹತ್ ಟಾರ್ಗೆಟ್ ನೀಡಿದ್ದ ಗೆಲ್ಲುವ ಪಂದ್ಯ ಸೋತ ಡೆಲ್ಲಿ; ಕ್ಯಾಚ್ ಬಿಟ್ಟು ಕಣ್ಣೀರಿಟ್ಟ ಕನ್ನಡಿಗ

ನಿನ್ನೆ ( ಏಪ್ರಿಲ್ 25 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಬರೋಬ್ಬರಿ 265 ರನ್ ಚೇಸ್ ಮಾಡಿ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್ ಅಬ್ಬರದ ಅರ್ಧಶತಕ ಹಾಗೂ ನಿತಿಶ್ ರಾಣಾ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 265 ರನ್ ಗಳ ಬೃಹತ್ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 265 ರನ್ ಬಾರಿಸಿತು.

ಈ ಮೂಲಕ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಟಾರ್ಗೆಟ್ ಚೇಸ್ ಮಾಡಿದ ದಾಖಲೆ ಬರೆದು ಟೂರ್ನಿಯಲ್ಲಿ ತನ್ನ ಸೋಲಿಲ್ಲದ ಅಭಿಯಾನವನ್ನು ಮುಂದುವರಿಸಿತು. ಇನ್ನು ಪಂಜಾಬ್ ಕಿಂಗ್ಸ್ ದಾಖಲೆಯ ಗೆಲುವು ಒಂದೆಡೆ ಸುದ್ದಿಯಾದರೆ, ಮತ್ತೊಂದೆಡೆ ಇಷ್ಟು ಬೃಹತ್ ಮೊತ್ತವನ್ನು ತವರಿನಲ್ಲಿ ಕಟ್ಟಿಹಾಕಲು ಡೆಲ್ಲಿ ತಂಡಕ್ಕಿದ್ದ ಅವಕಾಶಗಳು ಸಹ ಸದ್ದು ಮಾಡಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಲ್ಲೂ ಪಂದ್ಯ ಡೆತ್ ಓವರ್‌ ತಲುಪಿದಾಗ ಕರುಣ್ ನಾಯರ್ ಕೈಚೆಲ್ಲಿದ ಶ್ರೇಯಸ್ ಐಯ್ಯರ್ ಎರಡು ಕ್ಯಾಚ್ ಸಾಕಷ್ಟು ಚರ್ಚೆ ಹುಟ್ಟುಹಾಕಿವೆ. ಹೌದು, ಮೊದಲಿಗೆ ಡೆಲ್ಲಿಗೆ 31 ಎಸೆತಗಳಲ್ಲಿ ಗೆಲ್ಲಲು 63 ರನ್‌ಗಳ ಅಗತ್ಯವಿದ್ದಾಗ ವಿಪ್ರಾಜ್ ನಿಗಮ್ ಎಸೆದ 15ನೇ ಓವರ್‌ನ ಕೊನೆಯ ಎಸೆತದಲ್ಲಿ ಕೈಗೆ ಬಂದ ಸುಲಭ ಕ್ಯಾಚನ್ನು ಕರುಣ್ ಕೈಚೆಲ್ಲಿದರು. ಅದೇ ಓವರ್‌ನಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ನಾಯಕನ ವಿಕೆಟ್ ಈ ಸಮಯದಲ್ಲಿ ಉರುಳಿದ್ದರೆ ತುಸು ಒತ್ತಡ ಹೇರಬಹುದಾಗಿತ್ತು. ಹೀಗೆ ಕರುಣ್ ಕ್ಯಾಚ್ ಬಿಟ್ಟಿದ್ದಕ್ಕೆ ಬೌಲರ್ ವಿಪ್ರಾಜ್ ನಿಗಮ್ ನೆಲದಲ್ಲಿ ಕುಳಿತು ತಲೆ ಮೇಲೆ ಕೈಹೊತ್ತು ಬೇಸರಕ್ಕೊಳಗಾದರು.

ನಂತರ ಕುಲ್‌ದೀಪ್ ಯಾದವ್ ಮಾಡಿದ 16ನೇ ಓವರ್‌ನ ಎರಡನೇ ಎಸೆತದಲ್ಲಿ ಕರುಣ್ ನಾಯತ್ ಮತ್ತೆ ಶ್ರೇಯಸ್‌ನ ಕ್ಯಾಚ್ ಚೆಲ್ಲಿದರು. ಈ ಸಮಯದಲ್ಲಿ ಪಂಜಾಬ್‌ಗೆ 29 ಎಸೆತಗಳಲ್ಲಿ ಗೆಲ್ಲಲು 56 ರನ್‌ಗಳು ಬೇಕಿತ್ತು. ಇಲ್ಲೂ ಕ್ಯಾಚ್ ಪಡೆದಿದ್ದರೆ ಅದೇ ಒತ್ತಡವನ್ನು ಪಂಜಾಬ್ ಮೇಲೆ ಹೇರಬಹುದಿತ್ತು. ಇಲ್ಲಿ ಶ್ರೇಯಸ್ ಔಟ್ ಆಗಿದ್ದರೆ 23 ಎಸೆತಗಳಲ್ಲಿ 35 ರನ್ ಗಳಿಸಿರುತ್ತಿದ್ದರು. ಆದರೆ ಈ ಕ್ಯಾಚ್ ಡ್ರಾಪ್ ಗೆಲುವಿನ ಸಮಯಕ್ಕೆ ಐಯ್ಯರ್ ರನ್ 36 ಎಸೆತಗಳಲ್ಲಿ 71 ಆಗುವಂತೆ ಮಾಡಿತು. ಈ ಮೂಲಕ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಸಾಲು ಕ್ರಿಕೆಟ್ ಪ್ರೇಮಿಗಳ ತಲೆಯಲ್ಲಿ ಮತ್ತೊಮ್ಮೆ ಸದ್ದು ಮಾಡಿತು.

ಹೀಗೆ ಮಹತ್ವದ ಘಟ್ಟದಲ್ಲಿ ಕ್ಯಾಚ್ ಬಿಟ್ಟ ಅರಿವಾದ ಕರುಣ್ ನಾಯರ್ ನಡುಗಿ, ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದನ್ನು ಕಾಣಬಹುದಾಗಿತ್ತು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular