HomeIPL 2026IPL 2026: ಟೂರ್ನಿಯಲ್ಲಿ ಸ್ಯಾಮ್ಸನ್ ಎರಡನೇ ಶತಕ; ಮುಂಬೈಗೆ ಸವಾಲಿನ ಗುರಿ ನೀಡಿದ ಸಿಎಸ್‌ಕೆ

IPL 2026: ಟೂರ್ನಿಯಲ್ಲಿ ಸ್ಯಾಮ್ಸನ್ ಎರಡನೇ ಶತಕ; ಮುಂಬೈಗೆ ಸವಾಲಿನ ಗುರಿ ನೀಡಿದ ಸಿಎಸ್‌ಕೆ

ವಾಂಖೆಡೆಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 23 ) ನಡೆಯುತ್ತಿರುವ ಐಪಿಎಲ್ 2026ರ ಲೀಗ್ ಹಂತದ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 208 ರನ್‌ಗಳ ಗುರಿಯನ್ನು ನೀಡಿದೆ.

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 54 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 101 ರನ್ ಬಾರಿಸಿ ಕೊನೆಯ ಎಸೆತದವರೆಗೂ ಕಣದಲ್ಲಿದ್ದರು. ಇನ್ನುಳಿದಂತೆ ರುತುರಾಜ್ ಗಾಯಕ್ವಾಡ್ 22, ಸರ್ಫರಾಜ್ ಖಾನ್ 14, ಶಿವಮ್ ದುಬೆ 5, ಡಿವಾಲ್ಡ್ ಬ್ರೆವಿಸ್ 21, ಕಾರ್ತಿಕ್ ಶರ್ಮಾ 18, ಜೇಮಿ ಓವರ್ಟನ್ 15 ಹಾಗೂ ಅಕೇಲ್ ಹೊಸೈನ್ ಅಜೇಯ 2 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆನ್ನೈ ಸೂಪರ್ ಕಿಂಗ್ಸ್ ಪರ ಎಎಂ ಘಜನ್ಫರ್ ಹಾಗೂ ಅಶ್ವನಿ ಕುಮಾರ್ ತಲಾ ಎರಡು ವಿಕೆಟ್, ಜಸ್‌ಪ್ರೀತ್ ಬುಮ್ರಾ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular