HomeIndiaಬಿಸಿಲ ಝಳದ ನಡುವೆ ಚುನಾವಣಾ ಪ್ರಚಾರ: ರಸ್ತೆ ಬದಿ ಕಬ್ಬಿನ ಹಾಲು ಸೇವಿಸಿ; ಆಟೋದಲ್ಲಿ ಪ್ರಯಾಣಿಸಿದ...

ಬಿಸಿಲ ಝಳದ ನಡುವೆ ಚುನಾವಣಾ ಪ್ರಚಾರ: ರಸ್ತೆ ಬದಿ ಕಬ್ಬಿನ ಹಾಲು ಸೇವಿಸಿ; ಆಟೋದಲ್ಲಿ ಪ್ರಯಾಣಿಸಿದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು ಕೊನೇ ಕ್ಷಣದ ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅನಾರೋಗ್ಯದ ನಡುವೆಯೂ ರಣ ಬಿಸಿಲಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದು, ರಸ್ತೆ ಬದಿ ಜ್ಯೂಸ್ ಕುಡಿದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ಗಮನ ಸೆಳೆಯಿತು.

ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಗೆ ತೆರಳಿ ಮಂಡಕ್ಕಿ ಸೇವಿಸಿ ಗಮನ ಸೆಳೆದಿದ್ದರು. ಇದೀಗ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸರದಿ. ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದ್ದು, ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತದಾರರ ಮನವೊಲಿಕೆಗಾಗಿ ಕೊನೇ ಕ್ಷಣದವರೆಗೂ ನಾನಾ ವಿಧದ ಕಸರತ್ತು ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನಾರೋಗ್ಯದ ನಡುವೆಯೂ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ಬಿಸಿಲ ಝಳದ ನಡುವೆ ಸೈದಾಪೇಟ್ ನಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ರಸ್ತೆ ಬದಿಯ ಜ್ಯೂಸ್ ಅಂಗಡಿಗೆ ತೆರಳಿ ಕಬ್ಬಿನ ಹಾಲು ಸೇವಿಸಿದರು. ಬಳಿಕ ಆಟೋದಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular