HomeKarnatakaಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡುತ್ತೇವೆ: ನೂರಕ್ಕೆ ನೂರು ವಿಶ್ವಾಸವಿದೆ ಎಂದ ಬಿ.ಎಸ್.ಯಡಿಯೂರಪ್ಪ

ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡುತ್ತೇವೆ: ನೂರಕ್ಕೆ ನೂರು ವಿಶ್ವಾಸವಿದೆ ಎಂದ ಬಿ.ಎಸ್.ಯಡಿಯೂರಪ್ಪ

ದಾವಣಗೆರೆ: ಮುಂದಿನ ದಿನಗಳಲ್ಲಿ ಬಿಜೆಪಿ–ಜೆಡಿಎಸ್‌ ಒಟ್ಟಾಗಿ ಹೋರಾಟ ಮಾಡಿ, ನೂರಕ್ಕೆ ನೂರು ಸರ್ಕಾರ ರಚನೆ ಮಾಡ್ತೀವಿ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಭವಿಷ್ಯ ನುಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಯಡಿಯೂರಪ್ಪ, 2028ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸರ್ಕ್ಲಾರ ರಚಿಸಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಾರಸ್ವಾಮಿ ಬೇರೆ ಅಲ್ಲ, ನಾವು ಬೇರೆ ಅಲ್ಲ ಎಲ್ಲರೂ ಒಟ್ಟಾಗಿ ಸರ್ಕಾರ ಮಾಡ್ತೀವಿ. ಮುಂದಿನ ಬಾರಿ ಬಿಜೆಪಿ – ಜೆಡಿಎಸ್ ಒಟ್ಟಾಗಿ ಹೋರಾಟ ಮಾಡ್ತೀವಿ. ನಾವಿಬ್ಬರೂ ಸೇರಿ ಸರ್ಕಾರ ಮಾಡ್ತೀವಿ ಅಂತಾ ನೂರಕ್ಕೆ ನೂರು ವಿಶ್ವಾಸವಿದೆ. ಈ ಭ್ರಷ್ಟ ಸರ್ಕಾರ ಕಿತ್ತೊಗೆದು ಬಿಜೆಪಿ-ಜೆಡಿಎಸ್ ಸರ್ಕಾರ ತರಬೇಕು. ಕೈ ಜೋಡಿಸಿ ರಾಜ್ಯದ ಜನರಿಗೆ ಪ್ರಾರ್ಥನೆ ಮಾಡ್ತೀನಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಭೀಕರ ಬರ ತಾಂಡವವಾಡ್ತಿದೆ. ರಾಜ್ಯ ಸರ್ಕಾರಕ್ಕೆ ಬೇಜವಾಬ್ದಾರಿತನದ ಪರಮಾವಧಿ, ಅವರಿಗೆ ಬರಗಾಲನೂ ಗೊತ್ತಿಲ್ಲ, ಜನರ ಸಂಕಷ್ಟವೂ ಗೊತ್ತಿಲ್ಲ. ಒಂದ್ ರೀತಿ ತುಘಲಕ್ ದರ್ಬಾರ್ ನಡೆಸಿದ್ದಾರೆ. ಜನ ತಕ್ಕ ಪಾಠ ಕಲಿಸಬೇಕು, ಬುದ್ದಿ ಕಲಿಸಬೇಕು ಅಷ್ಟೇ. ಅಜೀರ್ಣ ಆಗುವಷ್ಟು ಬಹುಮತ ಸಿಕ್ಕಾಗ ತುಘಲಕ್ ದರ್ಬಾರ್ ನಂತೆ ನಡೆಸುತ್ತಿದ್ದಾರೆ ಎಂದು ಕಿಡಿಕರೈದರು.

ಮಾಧ್ಯಮದವರು ಟೀಕೆ ಟಿಪ್ಪಣಿ ಮಾಡಿ ಸಲಹೆ ಕೊಡ್ತಿದ್ದೀರಿ, ಆದ್ರೆ ತಿದ್ದಿಕೊಳ್ಳಲು ಡಿ.ಕೆ.ಶಿವಕುಮಾರ್ ಸರ್ಕಾರ ಸಿದ್ಧವಿಲ್ಲ. ಅಧಿಕಾರದ ಮದದಿಂದ ಏನ್ ಮಾಡಬೇಕೋ ಮಾಡ್ತಿದ್ದಾರೆ. ಅದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸಿದ್ದರಾಮಯ್ಯ ಅಂಥವರನ್ನ ಕೆಳಗಿಳಿಸಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡಿದ್ರು ಡಿ.ಕೆ.ಶಿವಕುಮಾರ್, ಎಲ್ಲರೂ ಸೇರಿ ವ್ಯವಸ್ಥಿತ ಪಿತೂರಿ ಮಾಡಿ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿದ್ದು ಗೊತ್ತೇ ಇದೆ. ಸಿದ್ದರಾಮಯ್ಯ ಎಲ್ಲವನ್ನೂ ಗಮನಿಸ್ತಿದ್ದಾರೆ, ನೋಡೋಣ ಮುಂದೆ ಏನಾಗುತ್ತೆ ಅಂತ ಎಂದು ಹೇಳಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಶತಃಸಿದ್ಧ: ಆಗ ನನ್ನ ಇನ್ನೊಂದು ಮುಖ ತೋರಿಸ್ತೀನಿ ಎಂದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಶತಃಸಿದ್ಧ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಆಗ ನಾಅನು ನನ್ನ ಇನ್ನೊಂದು ಮುಖವನ್ನು ತೋರಿಸುತ್ತೇನೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಇಲ್ಲದಿದ್ರೆ ಕಾಂಗ್ರೆಸ್​ ಯಾವತ್ತೋ ಮುಗಿದು ಹೋಗ್ತಿತ್ತು. ಅವರ ಜೊತೆ ರಾಜಕೀಯವಾಗಿ ದೊಡ್ಡ ಹೋರಾಟ ಮಾಡಿದ್ದೇನೆ. ಆದರೆ ಈಗ ಸಿದ್ದರಾಮಯ್ಯರನ್ನು ಮುಗಿಸಲು ಏನೆಲ್ಲಾ ನಡೆದಿದೆ? ಯಾವಾಗಲೂ ಅಧಿಕಾರದಲ್ಲಿ ನೀವೇ ಇರ್ತಿರಾ, 1 ವರ್ಷ ಕಳೆಯಲಿ ಏನಾಗುತ್ತೆ ಎಂದು ಗೊತ್ತಾಗಲಿದೆ. ಹಾಸನಾಂಬೆ ದೇವಾಲಯದ ಬಾಗಿಲು ಶೀಘ್ರದಲ್ಲೇ ತೆರೆಯಲಿದ್ದು, ದೇವಾಲಯದಲ್ಲಿ ಕುಳಿತು ಮಾತನಾಡುತ್ತೇನೆ. ಸಿದ್ದರಾಮಯ್ಯ ಯಾಕೆ ಬಾಯಿ ಬಿಡ್ತಿಲ್ಲ ಅನ್ನೋದೆ ನನಗೆ ಆಶ್ಚರ್ಯ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆಂದು ಆ ವ್ಯಕ್ತಿ ಹೇಳಿದ್ದು, ತನಿಖೆ ನಡೆಸಲು ಇನ್ನೇನು ದಾಖಲೆ ಬೇಕು? ಪಕ್ಷದ ಕಾರ್ಯಕರ್ತೆಯನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಹೆಸರು ಹೇಳು ಅಂತಾರೆ. ಸಿದ್ದರಾಮಯ್ಯ ಎಷ್ಟೊತ್ತು ಇದ್ದರು, ಅವರ ದೇಹದ ಗುರುತು ಇದೆಯಾ ಎಂದು ಕಾರ್ಯಕರ್ತೆಯೊಬ್ಬರನ್ನು ಪ್ರಶ್ನೆ ಮಾಡುತ್ತಾರೆ. ಆ ವ್ಯಕ್ತಿಯನ್ನ ಟಚ್​ ಮಾಡೋಕೆ ಆಗ್ತಿಲ್ಲ, ಯಾಕೆ ಟಚ್ ಮಾಡೋಕೆ ಆಗ್ತಿಲ್ಲ? ಸಾಕಷ್ಟು ಪೊಲೀಸ್​ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಕೂಡ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಹಲವು ನಾಯಕರ ಸ್ಟಿಂಗ್ ಆಪರೇಷನ್ ಆಗಿದೆ ಎಂದು ರಾಜಣ್ಣ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಿರಿಯ ಶಾಸಕರ ಬಾಯಿಯನ್ನೇ ಮುಚ್ಚಿಸಿದ್ದಾರೆ. ಒಬ್ಬರು ಮಾಜಿ ಪ್ರಧಾನಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡ್ತಾನೆ. ಈ ಕಾಂಗ್ರೆಸ್ ಸರ್ಕಾರ ಎಲ್ಲಿಗೆ ಹೋಗ್ತಿದೆ ಎಂದವರು ಪ್ರಶ್ನಿಸಿದರು.

ಗೃಹ ಸಚಿವರ ನಡೆ ನೋಡಿದ್ರೆ ಹುನ್ನಾರ ನಡೆದಿದೆ ಎನ್ನಿಸುತ್ತಿದೆ. ನನ್ನನ್ನು ಪ್ರಚೋದಿಸಲು ಸಿಎಂರಿಂದ ನಿರ್ದೇಶನ ತೆಗೆದುಕೊಂಡು ಪ್ರಿಯಾಂಕ್ ಖರ್ಗೆ ಹೀಗೆ ಮಾತನಾಡುತ್ತಿದ್ದಾರೆ. ನನ್ನನ್ನು ಉತ್ತರ ಕುಮಾರ ಅಂತಾರೆ. ಕೆಪಿಎಸ್ ಸಿ ಹಗರಣದ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಎಲ್ಲಿದೆ ಅಂತಾರೆ. ಕೆಪಿಎಸ್​​ಸಿ ಹಗರಣದ ವಿಚಾರದಲ್ಲಿ ಅವರ ಬಳಿ ಉತ್ತರವೇ ಇಲ್ಲ ಎಂದೂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರಿಯಾಂಕ್​​ ಖರ್ಗೆ ಕೂಡ ಕೌಂಟರ್​​ ನೀಡಿದ್ದು, ನಾನು ಯಾರಿಂದಲೂ ನಿರ್ದೇಶನ ತೆಗೆದುಕೊಂಡು ಮಾತನಾಡಲ್ಲ. ಮಣ್ಣಿನ‌ ಮಕ್ಕಳು ಸಿನಿಮಾ ನಿರ್ಮಾಣ ಮಾಡಬಹುದಂತೆ, ಜಾಗ್ವಾರ್ ಆಗಬಹುದಂತೆ. ಆದರೆ ಓರ್ವ ದಲಿತ ಬಲಿತ ಆಗಬಾರದಂತೆ. ಏನ್ರೀ ಕುಮಾರಸ್ವಾಮಿ ಅವರೇ ಲೆಕ್ಕ ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular