ರಾಯಚೂರು: ಮದುವೆಯಾಗುವುದಾಗಿ ನಂಬಿಸಿ ಇಂಜಿನಿಯರ್ ಓರ್ವ ಶಿಕ್ಷಕಿಯೊಬ್ಬರಿಗೆ ಮೋಸ ಮಾಡಿದ್ದು, ಶಿಕ್ಷಕಿ ಇಂಜಿನಿಯರ್ ವಿರುದ್ಧ ಲಸ್-ಸೆಕ್ಸ್-ದೋಖಾ ಕೇಸ್ ದಾಖಲಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಮೂಲದ ಇಂಜಿನಿಯರ್ ಮಲ್ಲಿಕಾರ್ಜುನ್ ವಿರುದ್ಧ ಶಿಕ್ಷಕಿ ದೂರು ನೀಡಿದ್ದಾರೆ. ಪ್ರೀತಿ-ಪ್ರೇಮ ಎಂದು 7-8 ವರ್ಷಗಳ ಕಾಲ ಈ ಜೋಡಿ ಒಟ್ಟಾಗಿ ಓಡಡಿವೆ. ಕಾಲೇಜು ದಿನಗಳಿಂದಲೂ ಯುವತಿ ಹಾಗೂ ಮಲ್ಲಿಕಾರ್ಜುನ ಇಬ್ಬರೂ ಪ್ರೀತಿಸುತ್ತಿದ್ದರು. ಈ ಜೋಡಿ ಮಂತ್ರಾಲಯ, ಆಲಮಟ್ಟಿ ಡ್ಯಾಂ ಸೇರಿದಂತೆ ಹಲವೆಡೆ ಸುತ್ತಾಡಿದ್ದರು.
ಅಲ್ಲದೇ ಮಲ್ಲಿಕಾರ್ಜುನ್ ಯುವತಿಯೊಂದಿಗೆ ಹಲವುಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದನಂತೆ. ಈಗ ಜಾತಿ ನೆಪ ಹೇಳಿ ವಿವಾಹವಾಗಲು ನಿರಾಕರಿಸಿ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತ ಶಿಕ್ಷಕಿ ಕಣ್ಣೀರಿಟ್ಟಿದ್ದಾರೆ.
ನ್ಯಾಯಕ್ಕಾಗಿ ಶಿಕ್ಷಕಿ ಮಲ್ಲಿಕಾರ್ಜುನ್ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಆತನ ಜೊತೆ ಓಡಡಿರುವ ಫೋಟೋ, ವಿಡಿಯೋ, ಆಡೀಯೋ, ಸಂದೇಶಗಳ ಸಮೇತ ದೂರು ನೀಡಿದ್ದಾರೆ. ಇಂಜಿನಿಯರ್ ಮಲ್ಲಿಕಾರ್ಜುನ್ ವಿರುದ್ಧ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಿಕ್ಷಕಿ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ರಾಯಚೂರು ಎಸ್ ಪಿ ಅರುಣಾಂಗ್ಶುಗಿರಿ ತಿಳಿಸಿದ್ದಾರೆ.

