HomeKarnatakaಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರ್ಜಿ ವಜಾ: ಅತಿಕ್ರಮಣ ಅರಣ್ಯ ಭೂಮಿಯನ್ನು 30 ದಿನಗಳೊಳಗೆ ಅರಣ್ಯ...

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರ್ಜಿ ವಜಾ: ಅತಿಕ್ರಮಣ ಅರಣ್ಯ ಭೂಮಿಯನ್ನು 30 ದಿನಗಳೊಳಗೆ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಆದೇಶ

ಕೋಲಾರ: ಮಾಜಿ ವಿಧಾನಸಭಾ ಸಭಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಆರ್. ರಮೇಶ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಬೆಂಗಳೂರು ಅರಣ್ಯ ಸಂರಕ್ಷಣಾ ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಕ (ಪ್ರಾದೇಶಿಕ) ವಜಾಗೊಳಿಸಿದ್ದು, ಶ್ರೀನಿವಾಸಪುರ ತಾಲ್ಲೂಕಿನ ಹೊಸಹುದ್ಯ ಗ್ರಾಮದಲ್ಲಿರುವ ಅತಿಕ್ರಮಿತ ಅರಣ್ಯ ಭೂಮಿಯನ್ನು 30 ದಿನಗಳೊಳಗೆ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಆದೇಶಿಸಿದೆ.

ಪ್ರಾಧಿಕಾರದ ಆದೇಶದ ಪ್ರಕಾರ, ಸರ್ವೆ ನಂ. 1ರಲ್ಲಿ 6 ಎಕರೆ ಹಾಗೂ ಸರ್ವೆ ನಂ. 2ರಲ್ಲಿ 54 ಎಕರೆ 23 ಗುಂಟೆಗಳಷ್ಟು ಅರಣ್ಯ ಭೂಮಿ ಸೇರಿ ಒಟ್ಟು 60.23 ಎಕರೆಗಳ ಭೂಮಿಯನ್ನು ಅತಿಕ್ರಮಿಸಲಾಗಿದೆ ಎಂದು ಜಂಟಿ ಸರ್ವೇ ವರದಿ ಸ್ಪಷ್ಟಪಡಿಸಿದೆ.

ಪ್ರಕಟವಾದ ಆದೇಶದಲ್ಲಿ, ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ 2011ರ ಜೂನ್ 24ರಂದು ನೀಡಿದ್ದ ತೆರವು ಆದೇಶವನ್ನು ಸಮರ್ಥಿಸಲಾಗಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ರಮೇಶ್ ಕುಮಾರ್ ಸಲ್ಲಿಸಿದ್ದ ರಿಟ್ ಪಿಟಿಷನ್ ಸಂಖ್ಯೆ 6613/2025ಕ್ಕೆ ಸಂಬಂಧಿಸಿದ ನಿರ್ದೇಶನಗಳ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2025ರ ಜನವರಿ 15 ಮತ್ತು 16ರಂದು ನಡೆದ ಜಂಟಿ ಸರ್ವೇಯಲ್ಲಿ ಅರಣ್ಯ ಭೂಮಿಯ ಅತಿಕ್ರಮಣ ನಿರ್ಣಾಯಕವಾಗಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳೊಳಗೆ ಭೂಮಿಯನ್ನು ಶಾಂತಿಯುತವಾಗಿ ಹಸ್ತಾಂತರಿಸಬೇಕು ಎಂದು ಸೂಚಿಸಲಾಗಿದೆ.

ನಿರ್ಧರಿತ ಅವಧಿಯಲ್ಲಿ ಭೂಮಿ ಹಸ್ತಾಂತರವಾಗದಿದ್ದಲ್ಲಿ, ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಕ್ಷಣವೇ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಪ್ರಾಧಿಕಾರ ನಿರ್ದೇಶಿಸಿದೆ.


ಈ ಪ್ರಕರಣದ ಹಿನ್ನೆಲೆದಲ್ಲಿ, ರಮೇಶ್ ಕುಮಾರ್ ಅವರು ಹಿಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೆಡುಕೊಂಡಲು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಜಿಲ್ಲೆಯ ರೈತರನ್ನು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿ ನಡೆದ ಕೆಡಿಪಿ ಸಭೆಗಳಲ್ಲಿ ವಿವಿಧ ಪಕ್ಷಗಳ ಶಾಸಕರು ಕೂಡ ಅವರಿಗೆ ಬೆಂಬಲ ಸೂಚಿಸಿ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮವನ್ನು ಟೀಕಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular