HomeUncategorizedSHOCKING : 3  ವಿಷಯಗಳಲ್ಲಿ ಫೇಲಾಗಿದ್ದಕ್ಕೆ ಮನನೊಂದು ಬೆಂಗಳೂರಲ್ಲಿ 'ದ್ವಿತೀಯ PUC' ವಿದ್ಯಾರ್ಥಿನಿ ಆತ್ಮಹತ್ಯೆ.!

SHOCKING : 3  ವಿಷಯಗಳಲ್ಲಿ ಫೇಲಾಗಿದ್ದಕ್ಕೆ ಮನನೊಂದು ಬೆಂಗಳೂರಲ್ಲಿ ‘ದ್ವಿತೀಯ PUC’ ವಿದ್ಯಾರ್ಥಿನಿ ಆತ್ಮಹತ್ಯೆ.!

ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಬಂದ ಬೆನ್ನಲ್ಲೇ, ಮೂರು ವಿಷಯಗಳಲ್ಲಿ ಅನುತ್ತೀರ್ಣಗೊಂಡ ಬೇಸರದಿಂದ ಖಾಸಗಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ

ಕನಕನಗರದ ನಿವಾಸಿ ತನುಶ್ರೀ (17) ಮೃತ ದುರ್ದೈವಿ. ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತನುಶ್ರೀ ಅವರು ಗಣಿತ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರು. ಪರೀಕ್ಷೆ ಮುಗಿದ ನಂತರವೇ ತಾನು ಸರಿಯಾಗಿ ಬರೆದಿಲ್ಲ ಎಂದು ಆಕೆ ಆತಂಕಗೊಂಡಿದ್ದಳು ಎನ್ನಲಾಗಿದೆ.

ಸ್ಟೇಟಸ್‌ನಲ್ಲಿ ಸೂಚನೆ:

ಫಲಿತಾಂಶ ಬರುವುದಕ್ಕೂ ಕೆಲವು ಕ್ಷಣಗಳ ಮುನ್ನ ವಾಟ್ಸಾಪ್‌ನಲ್ಲಿ “3 PM fielding set” ಎಂದು ತನುಶ್ರೀ ಸ್ಟೇಟಸ್ ಹಾಕಿದ್ದಳು. ಇದನ್ನು ನೋಡಿ ಆತಂಕಗೊಂಡ ಆಕೆಯ ಸ್ನೇಹಿತೆ, ಕೂಡಲೇ ಮನೆಗೆ ಬರುವಂತೆ ಸಂದೇಶ ಕಳುಹಿಸಿದ್ದಾಳೆ. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಸ್ನೇಹಿತೆ ತಕ್ಷಣವೇ ತನುಶ್ರೀ ಮನೆಗೆ ಧಾವಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದುರಂತದ ಅಂತ್ಯ: ಸ್ನೇಹಿತೆ ಮನೆಗೆ ಬಂದು ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ತನುಶ್ರೀ ತಾಯಿಗೆ ವಿಷಯ ತಿಳಿಸಲಾಗಿದ್ದು, ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ತನುಶ್ರೀ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮೂರು ವರ್ಷಗಳ ಹಿಂದೆ ತನುಶ್ರೀ ತಂದೆ ಅನಾರೋಗ್ಯದಿಂದ ನಿಧನರಾಗಿದ್ದರು.ತಾಯಿ ಆಶಾ ಅವರು ಮನೆಗೆಲಸ ಮಾಡಿಕೊಂಡು ಮಗಳನ್ನು ಓದಿಸುತ್ತಿದ್ದರು.ಫಲಿತಾಂಶ ಬಂದ ನಂತರ ಗೆಳತಿಯರು ಧೈರ್ಯ ಹೇಳಿದ್ದರೂ, ಮಾನಸಿಕವಾಗಿ ಜರ್ಜರಿತಗೊಂಡಿದ್ದ ತನುಶ್ರೀ ಈ ತೀವ್ರ ನಿರ್ಧಾರ ಕೈಗೊಂಡಿದ್ದಾಳೆ.

ಸೋಲು ಜೀವನದ ಅಂತ್ಯವಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವುದು ಅಥವಾ ಫೇಲಾಗುವುದು ಜೀವನದ ಒಂದು ಸಣ್ಣ ಭಾಗವಷ್ಟೇ. ಇಂತಹ ಕಷ್ಟದ ಸಮಯದಲ್ಲಿ ಆತ್ಮಹತ್ಯೆಯ ಆಲೋಚನೆ ಬಂದರೆ ದಯವಿಟ್ಟು ಸಹಾಯ ಪಡೆಯಿರಿ.

  • ಸಹಾಯವಾಣಿ (SAHAI): 080-25497777
  • ನಿಮ್ಹಾನ್ಸ್ ಸಹಾಯವಾಣಿ: 080-46110007

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular