ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಐಪಿಎಲ್ 2026ರ 16ನೇ ಲೀಗ್ ಪಂದ್ಯ ಆಯೋಜನೆಯಾಗಿದೆ.
ಇನ್ನು ಪಂದ್ಯದ ಟಾಸ್ ನಡೆಯುವ ಮುನ್ನವೇ ಮಳೆಯ ಆಗಮನವಾಗಿದ್ದು, ಟಾಸ್ ವಿಳಂಬವಾಗಿದೆ. ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯಕ್ಕೂ ಸಹ ಮಳೆ ಅಡ್ಡಿಯುಂಟುಮಾಡಿದ್ದ ಕಾರಣ 11 ಓವರ್ಗಳ ಪಂದ್ಯ ನಡೆದಿತ್ತು.
ಹೀಗಾಗಿ ಈ ಪಂದ್ಯಕ್ಕೂ ಸಹ ಮಳೆ ಅಡ್ಡಿಯನ್ನುಂಟುಮಾಡಲಿದೆಯಾ ಹಾಗೂ ಓವರ್ ಕಡಿತಗೊಳ್ಳಲಿದೆಯಾ ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಬೇಗನೆ ಉತ್ತರ ಸಿಕ್ಕಿದ್ದು, ಸಂಜೆ 7.45ರ ಸಮಯಕ್ಕೆ ಮಳೆ ಸಂಪೂರ್ಣವಾಗಿ ನಿಂತಿದೆ ಹಾಗೂ ಟಾಸ್ ಕುರಿತ ಅಪ್ಡೇಟ್ ಹೊರಬಿದ್ದಿದೆ.
ಟಾಸ್ 8 ಗಂಟೆಗೆ ನಡೆಯಲಿದ್ದು, ಪಂದ್ಯದ ಮೊದಲ ಎಸೆತ 8.15ಕ್ಕೆ ನಡೆಯಲಿದೆ. ಅಲ್ಲದೇ ಯಾವುದೇ ಓವರ್ ಕಡಿತಗೊಳ್ಳದೇ ಸಂಪೂರ್ಣ ಪಂದ್ಯ ನಡೆಯಲಿದೆ.

