ಸಸ್ಪೆನ್ಸ್ ಮತ್ತು ಹಾರರ್ ಸಿನಿಮಾಗಳನ್ನು ಇಷ್ಟಪಡುವವರಿಗಾಗಿ ಒಟಿಟಿಯಲ್ಲಿ ಒಂದು ಅತ್ಯುತ್ತಮ ಸಿನಿಮಾ ಲಭ್ಯವಿದೆ. ಮುಂಬೈನ ಖ್ಯಾತ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಒಬ್ಬರು ಮುನ್ನಾರ್‌ನ ಮೆಡಿಕಲ್ ಕಾಲೇಜೊಂದರಲ್ಲಿ ನಡೆಯುವ ಸರಣಿ ಆತ್ಮಹತ್ಯೆಗಳ ರಹಸ್ಯ ಭೇದಿಸಲು ಹೊರಟಾಗ ಎದುರಾಗುವ ಭಯಾನಕ ಸತ್ಯಗಳೇ ‘ಶಬ್ದಂ’ ಸಿನಿಮಾದ ಜೀವಾಳ. ವೈಜ್ಞಾನಿಕ ಆಯಾಮ ಮತ್ತು ಶಬ್ದ ತರಂಗಗಳ (Sound Waves) ಮೂಲಕ ದೆವ್ವಗಳ ಇರುವಿಕೆಯನ್ನು ಪತ್ತೆಹಚ್ಚುವ ವಿಭಿನ್ನ ಪ್ರಯೋಗ ಈ ಚಿತ್ರದಲ್ಲಿದೆ. ಹಾರರ್ ಪ್ರಿಯರಿಗೆ ಇದೊಂದು ಹೊಸ ಅನುಭವ ನೀಡಲಿದ್ದು, ಈಗ ZEE5 ನಲ್ಲಿ ಲಭ್ಯವಿದೆ.
ಮೆಡಿಕಲ್ ಕಾಲೇಜೊಂದರ 40 ವಿದ್ಯಾರ್ಥಿಗಳ ನಿಗೂಢ ಸಾವಿನ ಸುತ್ತ ಸಾಗುವ ‘ಶಬ್ದಂ’ ಸಿನಿಮಾ ಈಗ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವೈಜ್ಞಾನಿಕ ಹಿನ್ನೆಲೆ ಮತ್ತು ಅತೀಂದ್ರಿಯ ಶಕ್ತಿಗಳ ನಡುವಿನ ಸಂಘರ್ಷವನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಈ ಬೆಚ್ಚಿಬೀಳಿಸುವ ಹಾರರ್ ಥ್ರಿಲ್ಲರ್ ಕಥೆಯು ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಸಿನಿಮಾ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಜೀ5 ನಲ್ಲಿ ಸದ್ಯ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
ಕೇವಲ ಕಣ್ಣಿಗೆ ಕಾಣುವ ದೃಶ್ಯಗಳಿಗಿಂತ ಕಿವಿಗಿ ಕೇಳುವ ಧ್ವನಿಯೇ ಹೆಚ್ಚು ಭಯ ಹುಟ್ಟಿಸಿದರೆ ಹೇಗಿರುತ್ತದೆ? ಅಂತಹ ಒಂದು ಕಾನ್ಸೆಪ್ಟ್ ಇಟ್ಟುಕೊಂಡು ಬಂದಿರುವ ಚಿತ್ರವೇ ‘ಶಬ್ದಂ’. 40 ವರ್ಷಗಳ ಹಿಂದಿನ ಕರಾಳ ನೆರಳು ಈಗಿನ ಮೆಡಿಕಲ್ ವಿದ್ಯಾರ್ಥಿಗಳನ್ನು ಬಲಿ ಪಡೆಯುತ್ತಿರುವುದರ ಹಿಂದಿನ ರಹಸ್ಯವೇನು? ಆದಿ ಪಿನಿಶೆಟ್ಟಿ ನಟನೆಯ ಈ ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಈಗ ಒಟಿಟಿ ಅಂಗಳಕ್ಕೆ ಲಗ್ಗೆ ಇಟ್ಟಿದೆ.
ಮುನ್ನಾರ್‌ನ ಒಂದು ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ನಿಗೂಢ ಸರಣಿ ಆತ್ಮಹತ್ಯೆಗಳು ಮತ್ತು ಸಾವಿನ ರಹಸ್ಯವನ್ನು ಪತ್ತೆಹಚ್ಚಲು ಬರುವ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಸುತ್ತ ಈ ಚಿತ್ರ ಸಾಗುತ್ತದೆ. 40 ವರ್ಷಗಳ ಹಿಂದಿನ ಕರಾಳ ಇತಿಹಾಸವು ಈ ಸಾವಿನ ಹಿಂದಿದೆಯೇ ಎಂಬುದು ಚಿತ್ರದ ಕ್ಲೈಮ್ಯಾಕ್ಸ್. ಕಾಲೇಜಿನಲ್ಲಿ ನಡೆಯುವ ನಿಗೂಢ ಸಾವುಗಳು ಕೇವಲ ಅಪಘಾತಗಳೋ ಅಥವಾ ಯಾವುದೋ ಅದೃಶ್ಯ ಶಕ್ತಿಯ ಕೈವಾಡವೋ? ಇನ್ವೆಸ್ಟಿಗೇಟರ್ ರೂಬನ್ ನಡೆಸುವ ತನಿಖೆ ನಿಮ್ಮನ್ನು ಬೆಚ್ಚಿಬೀಳಿಸುವುದಂತೂ ಖಂಡಿತ. ಸಿಮ್ರಾನ್ ಮತ್ತು ಲೈಲಾ ಅವರಂತಹ ಹಿರಿಯ ನಟಿಯರ ಅತಿಥಿ ಪಾತ್ರಗಳು ಸಿನಿಮಾಗೆ ಹೆಚ್ಚಿನ ಬಲ ನೀಡಿವೆ. ಆದಿ ಪಿನಿಶೆಟ್ಟಿ, ಲಕ್ಷ್ಮಿ ಮೆನನ್, ಸಿಮ್ರಾನ್ ಮತ್ತು ಲೈಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಈ ವಾರಾಂತ್ಯದ ಮಸ್ತ್ ಎಂಟರ್ಟೈನ್ಮೆಂಟ್ ಆಗಿ ಈ ಚಿತ್ರವನ್ನು ಮಿಸ್ ಮಾಡಬೇಡಿ.

