HomeIPL 2026IPL 2026: ಕಾಲು ಬೌಂಡರಿಗೆ ತಾಗಿದ್ರೂ ಔಟ್ ಕೊಟ್ಟ ಅಂಪೈರ್; ಸಿಕ್ಸ್ ಬಾರಿಸಿದ ವಿದೇಶಿ ಆಟಗಾರನಿಗೆ...

IPL 2026: ಕಾಲು ಬೌಂಡರಿಗೆ ತಾಗಿದ್ರೂ ಔಟ್ ಕೊಟ್ಟ ಅಂಪೈರ್; ಸಿಕ್ಸ್ ಬಾರಿಸಿದ ವಿದೇಶಿ ಆಟಗಾರನಿಗೆ ಮೋಸ | ವಿಡಿಯೊ

ನಿನ್ನೆ ( ಏಪ್ರಿಲ್ 9 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 15ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್‌ಗಳ ರೋಚಕ ಗೆಲುವನ್ನು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು.

ಲಕ್ನೋ ಸೂಪರ್ ಜೈಂಟ್ಸ್ ಪರ ಮುಕುಲ್ ಚೌಧರಿ ಕೊನೆಯ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿ ಕೊನೆಯ ಎಸೆತದವರೆಗೂ ಪಂದ್ಯವನ್ನು ತಂದು ಲಕ್ನೋಗೆ ಗೆಲುವನ್ನು ತಂದಿಟ್ಟು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ರೋಚಕ ಲಾಸ್ಟ್‌ ಬಾಲ್ ಥ್ರಿಲ್ಲರ್‌ನಲ್ಲಿ ಅಂಪೈರ್ ಎಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಫಿನ್ ಅಲೆನ್ ವಿಕೆಟ್ ನಾಟ್‌ಔಟ್ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ಪ್ರಿನ್ಸ್ ಯಾದವ್ ಎಸೆದ ಎಸೆತಕ್ಕೆ ಫಿನ್ ಅಲೆನ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿ ಲೈನ್ ಬಳಿ ದಿಗ್ವೇಶ್ ರಾಠಿ ಕ್ಯಾಚ್ ಪಡೆದು ಸಂಭ್ರಮಿಸಿದರು. ಬೌಂಡರಿ ಲೈನ್ ಬಳಿ ಇದ್ದ ಕಾರಣ ಪರಿಶೀಲನೆ ನಡೆಸಿದ ಮೂರನೇ ಅಂಪೈರ್ ಅದನ್ನು ಔಟ್ ಎಂದು ತೀರ್ಮಾನ ನೀಡಿದರು.

ಆದರೆ ಈ ನಿರ್ಣಯ ಅನುಮಾನ ಮೂಡಿಸಿದ್ದು, ದಿಗ್ವೇಶ್ ರಾಠಿ ಕ್ಯಾಚ್ ಪಡೆಯುವಾಗ ಅವರ ಕಾಲು ಬೌಂಡರಿ ಲೈನ್‌ನ ಕುಷನ್‌ ಅನ್ನು ತಾಗಿದ ಹಾಗೆ ಕಾಣುತ್ತಿದೆ. ಈ ವಿಡಿಯೊವನ್ನು ಹಂಚಿಕೊಂಡಿರುವ ನೆಟ್ಟಿಗರು ಇದು ನಾಟ್‌ಔಟ್, ಅಂಪೈರ್ ಕೆಟ್ಟ ತೀರ್ಮಾನದಿಂದ ಫಿನ್ ಅಲೆನ್‌ಗೆ ಮೋಸ ಆಗಿದೆ ಎಂದಿದ್ದಾರೆ.

ಇನ್ನು ಮೊನ್ನೆಯಷ್ಟೇ ನಡೆದ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಎಸೆದ ಎಸೆತಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ನ ಡೇವಿಡ್ ಮಿಲ್ಲರ್ ಬಾರಿಸಿದ ರಭಸಕ್ಕೆ ಚೆಂಡು ಬೌಂಡರಿ ಲೈನ್ ಮೇಲ ಬಿದ್ದಿತ್ತು. ಆದರೆ ಇದನ್ನು ಮೂರನೇ ಅಂಪೈರ್ ಸರಿಯಾಗಿ ಪರಿಶೀಲಿಸದೇ ಸಿಕ್ಸ್ ಬದಲಾಗಿ ಬೌಂಡರಿ ಎಂದು ನಿರ್ಣಯ ನೀಡಿದ್ದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular