HomeKarnatakaರೈಲಿನಲ್ಲಿ ಬಹಿರಂಗವಾಗಿ ಗಾಂಜಾ ಸೇವಿಸಿ ಯುವಕರ ಹುಚ್ಚಾಟ: ಸಹ ಪ್ರಯಾಣಿಕರಿಗೆ ಕಿರಿಕಿರಿಯುಂಟು ಮಾಡಿದ ಕಿರಾತಕರು

ರೈಲಿನಲ್ಲಿ ಬಹಿರಂಗವಾಗಿ ಗಾಂಜಾ ಸೇವಿಸಿ ಯುವಕರ ಹುಚ್ಚಾಟ: ಸಹ ಪ್ರಯಾಣಿಕರಿಗೆ ಕಿರಿಕಿರಿಯುಂಟು ಮಾಡಿದ ಕಿರಾತಕರು

ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಲ್ಲಿ ಯುವಕರಿಬ್ಬರು ಗಾಂಜಾ ಸೇವಿಸಿ ಹುಚ್ಚಾಟ ಮೆರೆದಿದ್ದಲ್ಲದೇ, ಸಹಪ್ರಯಾಣಿಕರಿಗೂ ತೊಂದರೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಸಂಪರ್ಕ ಕ್ರಾಂತಿ ರೈಲಿನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಹಜರತ್ ನಿಜಾಮುದ್ದೀನ್‌ ಹಾಗೂ ಯಶವಂತಪುರ ಮಧ್ಯೆ ಸಂಚರಿಸುವ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12650) ರೈಲಿನಲ್ಲಿ ಯುವಕರಿಬ್ಬರು ಬಹಿರಂಗವಾಗಿ ಗಾಂಜಾ ಸೇವನೆ ಮಾಡಿದ್ದಾರೆ.

ರಾತ್ರಿ ಪ್ರಯಾಣದ ವೇಳೆ ಸಿಗರೇಟ್‌ನಲ್ಲಿ ಗಾಂಜಾ ಸೇರಿಸಿ ಸೇದುತ್ತಾ ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದಾರೆ. ಕಿಂಚಿತ್ತೂ ಭಯವಿಲ್ಲದೇ ರೈಲಿನ ಒಳಗೆ ಬೇರೆ ಪ್ರಯಾಣಿಕರಿಗೂ ತೊಂದರೆಯುಂಟುಮಾಡುತ್ತಾ ಗಾಂಜಾ ಸೇವಿಸಿ ಹುಚ್ಚಾಟ ಮೆರೆದಿದ್ದು. ಯುವಕರ ಈ ಕೃತ್ಯವನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇಂತಹ ಸಮಾಜಘಾತುಕರನ್ನು ರೈಲ್ವೆ ಪೊಲೀಸರು ಇವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular