HomeLive NewsBREAKING: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಯುವತಿ ಮೇಲೆ ಅತ್ಯಾಚಾರ; ವಿಡಿಯೋ ಮಾಡಿ...

BREAKING: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಯುವತಿ ಮೇಲೆ ಅತ್ಯಾಚಾರ; ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್

ಹುಬ್ಬಳ್ಳಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಯುವತಿ ಮೇಲೆ ಸಮೀರ್ ಮುಲ್ಲಾ ಅತ್ಯಾಚಾರವೆಸಗಿ ವಿಡಿಯೋ ಮಾಡಿಟ್ಟುಕೊಂಡು ಬ್ಲ್ತ್ಯಾಕ್ ಮೇಲ್ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ.

ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತ ಯುವತಿ, ಜಿಮ್ ಟ್ರೇನರ್ ಆಗಿದ್ದ ಸಮೀರ್ ಮುಲ್ಲಾ ಅಕ್ಕ ತೈಸೀಮ್ ಮುಲ್ಲಾ ತನ್ನ ಸ್ನೇಹಿತೆ. ಆಕೆಯ ಮೂಲಕವಾಗಿ ನನಗೆ ಸಮೀರ್ ಪರಿಚಯವಾಗಿದ್ದ. ಜಿಮ್ ಮಾಡಬೇಕೆಂದುದು ನಾನು ನೋಡುತ್ತಿದ್ದಾಗ ಸಮೀರ್ ಜಿಮ್ ಟ್ರೇನರ್ ಅಲ್ಲಿಯೇ ಜಿಮ್ ಗೆ ಸೇರುವಂತೆ ತೈಸಿಮ್ ಹೇಳಿದ್ದಳು. ಅದರಂತೆ ನಾನು ಸೇರಿಕೊಂಡಿದ್ದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವೆಲ್ಲರೂ ಸೇರಿ ವಿಕೆಂಡ್ ಪಾರ್ಟಿ, ಬರ್ತ್ ಡೇ ಪಾರ್ಟಿ ಹೀಗೆ ಆಗಾಗ ಭೇಟಿಯಾಗುತ್ತಿದ್ದೆವು, ಆತ್ಮೀಯವಾಗಿದ್ದೆವು. ಒಮ್ಮ ಸಮೀರ್ ಮನೆಗೆ ಬರುವಂತೆ ಹೇಳಿ ಕರೆದುಕೊಂಡು ಹೋಗಿದ್ದ. ಆ ವೇಳೆ ನೀರು ಕುಡಿ ಎಂದು ಅದರಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿಕೊಟ್ಟಿದ್ದ. ಅದನ್ನು ಕುಡಿದ ಬಳಿಕ ನನಗೆ ತಲೆಸುತ್ತುತ್ತಿತ್ತು. ಈ ವೇಳೆ ರೂಮಿನಲ್ಲಿ ರೆಸ್ಟ್ ತೆಗೆದುಕೊಳ್ಳಲು ಹೇಳಿದ್ದ ಅದಾದ ಬಳಿಕ ನನಗೆ ಏನಾಯಿತು ಎಂಬುದೇ ಗೊತ್ತಿಲ್ಲ.

ಮರುದಿನ ಬೆಳಿಗ್ಗೆ ಸಮೀರ್ ಭೇಟಿಯಾದಾಗ ಮೊಬೈಲ್ ನಲ್ಲಿರುವ ವಿಡಿಯೋ ತೋರಿಸಿದ್ದ. ನನ್ನ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿಟ್ಟುಕೊಂಡಿರುವುದು ಆಗಲೇ ನನಗೆ ಗೊತ್ತಾಗಿದ್ದು. ಅದನ್ನು ಡಿಲಿಟ್ ಮಾಡುವಂತೆ ಕೇಳಿಕೊಂಡರೂ ಮಾಡಿಲ್ಲ. ಸೇಫ್ ಆಗಿ ನನ್ನ ಬಳಿಯೆ ವಿಡಿಯೋ ಇರುತ್ತೆ. ಏನೂ ಮಾಡುವುದಿಲ್ಲ. ನೀನು ನನಗೇ ಸಿಗಬೇಕು ಎಂಬ ಕಾರಣಕ್ಕೆ ಹೀಗೆ ಮಾಡಿದೆ ಎಂದು ಹೇಳಿದ್ದ. ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ತನಗೆ ಮಾತ್ರವಲ್ಲ, ಹಲವು ಯುವತಿಯರಿಗೆ ಸಮೀರ್ ಇದೇ ರೀತಿ ಮೋಸ ಮಾಡಿದ್ದಾನೆ. ಆತನನ್ನು ಬಂಧಿಸಿ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಯುವತಿ ಆಗ್ರಹಿಸಿದ್ದಾಳೆ.

ಹಿಂದೂ ಸಂಘಟನೆ ಕಾರ್ಯಕರ್ತರು ಆರೋಪಿ ಸಮೀರ್ ಮನೆಗೆ ನುಗ್ಗಿ ಆತನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಸಮೀರ್ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೊಂದೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular