HomeKarnatakaಸಚಿವ ಕೆ.ಹೆಚ್.ಮುನಿಯಪ್ಪ ವಿರುದ್ಧವೇ ವಾಗ್ದಾಳಿ ನಡೆಸಿದ ಸ್ವಪಕ್ಷದ ನಾಯಕ ಎಂ.ಲಕ್ಷ್ಮಣ್

ಸಚಿವ ಕೆ.ಹೆಚ್.ಮುನಿಯಪ್ಪ ವಿರುದ್ಧವೇ ವಾಗ್ದಾಳಿ ನಡೆಸಿದ ಸ್ವಪಕ್ಷದ ನಾಯಕ ಎಂ.ಲಕ್ಷ್ಮಣ್

ದಾವಣಗೆರೆ: ಸಚಿವ ಕೆ.ಹೆಚ್.ಮುನಿಯಪ್ಪ ವಿರುದ್ಧವೇ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಾಡೆಸಿದ್ದಾರೆ. ಕೇಂದ್ರ ಸರ್ಕಾರ ಓಲೈಕೆ ಮಾಡುವುದನ್ನು ಬಿಟ್ಟು ಸಮರ್ಪಕವಾಗಿ ಉತ್ತರ ನೀಡಿ ಎಂದು ಗುಡುಗಿದ್ದಾರೆ.

ದಾವಣ್ಗೆರೆಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಸಿಲಿಂಡರ್ ಅಭಾವದಿಂದ ಜನರು ತತ್ತರಿಸುತ್ತಿದ್ದಾರೆ. ಆಟೋ ಚಾಲಕರಿಗೂ ಆಟೋ ಎಲ್ ಪಿಜಿ ಸಿಗುತ್ತಿಲ್ಲ. ಇದು ಕೇಂದ್ರದ ಸಮಸ್ಯೆ ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತಿಲ್ಲ. ಕೇಂದ್ರದವರು ಪೂರೈಸುತ್ತಿಲ ಎಂದು ಹೇಳುವುದನ್ನು ಬಿಟ್ಟು ಕೇಂದ್ರ ಸರ್ಕಾರವನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನೀವು ಹಿರಿಯ ಸಚಿವರು, ಏಳು ಬಾರಿ ಸಂಸದರಾದವರು. ಆಟೋ ಎಲ್ ಪಿಜಿ ಸಿಗದೇ ಆಟೋ ಚಾಲಕರು ಬಂಕ್ ಗಳಲ್ಲಿಯೇ ಮಲಗುತ್ತಿದ್ದಾರೆ. ಅವರು ರಾಜ್ಯ ಸರ್ಕಾರವೇ ಸಿಲಿಂಡರ್ ಪೂರೈಸುತ್ತಿದೆ ಎಂದುಕೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಆಗುತ್ತಿರುವ ಸಮಸ್ಯೆಯಿದು. ಮುನಿಯಪ್ಪನವರು ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೆಯದು ಎಂದಿದದರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ದಯಮಾಡಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಪದೇ ಪದೇ ಸಭೆ ಮಾಡುವುದನ್ನು ಸಚಿವರು ನಿಲ್ಲಿಸಬೇಕು. ಕೇಂದ್ರ ಸರ್ಕಾರದ ಪರ ಮಾತನಾಡುವುದನ್ನು ನಿಲ್ಲಿಸಿ ಎಂದು ಗರಂ ಆಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular