HomeBusinessನಿಮ್ಮ ಪ್ರೀತಿಯ ಆಭರಣಗಳಿಗೆ ಸಿಗಲಿದೆ ಫುಲ್ ಪ್ರೊಟೆಕ್ಷನ್ ಏನಿದು ಆಭರಣ ವಿಮೆ? ಇದರ ಲಾಭ ಪಡೆಯುವುದು...

ನಿಮ್ಮ ಪ್ರೀತಿಯ ಆಭರಣಗಳಿಗೆ ಸಿಗಲಿದೆ ಫುಲ್ ಪ್ರೊಟೆಕ್ಷನ್ ಏನಿದು ಆಭರಣ ವಿಮೆ? ಇದರ ಲಾಭ ಪಡೆಯುವುದು ಹೇಗೆ?

ಬೆಂಗಳೂರು: ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಖರೀದಿಸಿದ ಆಭರಣಗಳು ಕಳ್ಳತನವಾದರೆ ಅಥವಾ ನೈಸರ್ಗಿಕ ವಿಕೋಪದಲ್ಲಿ ಹಾನಿಯಾದರೆ ಉಂಟಾಗುವ ಆರ್ಥಿಕ ನಷ್ಟ ಅಷ್ಟಿಷ್ಟಲ್ಲ. ಇಂತಹ ಸಂದರ್ಭದಲ್ಲಿ ಆಭರಣ ಪ್ರಿಯರಿಗೆ ಆಸರೆಯಾಗುವುದು ಆಭರಣ ವಿಮೆ (Jewellery Insurance). ಈ ವಿಮೆಯ ಮೂಲಕ ನಿಮ್ಮ ಬೆಲೆಬಾಳುವ ಆಭರಣಗಳ ನಷ್ಟವನ್ನು ಹೇಗೆ ಮರುಪಡೆಯಬಹುದು ಎಂಬ ವಿವರ ಇಲ್ಲಿದೆ.

ಆಭರಣ ವಿಮೆ ಎಂದರೇನು?


ಇದು ನಿಮ್ಮ ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಬೆಲೆಬಾಳುವ ರತ್ನದ ಕಲ್ಲುಗಳಿಗೆ ರಕ್ಷಣೆ ನೀಡುವ ಪಾಲಿಸಿಯಾಗಿದೆ. ಮುತ್ತೂಟ್ ಫೈನಾನ್ಸ್, ಬಜಾಜ್ ಅಲಿಯಾನ್ಸ್, ರಿಲಯನ್ಸ್ ಹೋಂ ಇನ್ಶುರೆನ್ಸ್ ಮತ್ತು ಹೆಚ್‌ಡಿಎಫ್‌ಸಿ ಎರ್ಗೊದಂತಹ ಪ್ರಮುಖ ಕಂಪನಿಗಳು ಈ ವಿಮೆಯನ್ನು ನೀಡುತ್ತವೆ.

ಯಾವೆಲ್ಲಾ ಅಪಾಯಗಳಿಗೆ ವಿಮೆ ಅನ್ವಯಿಸುತ್ತದೆ?


ಕಳ್ಳತನ: ಮನೆಯಲ್ಲಿ ಅಥವಾ ಸಮಾರಂಭಗಳಲ್ಲಿ ಆಭರಣ ಕಳ್ಳತನವಾದರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೈಸರ್ಗಿಕ ವಿಪತ್ತು: ಪ್ರವಾಹ, ಭೂಕಂಪ ಅಥವಾ ಅಗ್ನಿ ಅವಘಡದಿಂದ ಹಾನಿಯಾದಾಗ.

ಬೆಳ್ಳಿ ಮತ್ತು ರತ್ನಗಳು: ಕೇವಲ ಚಿನ್ನ ಮಾತ್ರವಲ್ಲದೆ ಬೆಳ್ಳಿ ಮತ್ತು ಅಮೂಲ್ಯ ಹರಳುಗಳಿಗೂ ಇದು ಅನ್ವಯಿಸುತ್ತದೆ.

ಗಮನಿಸಿ: ಇವುಗಳಿಗೆ ವಿಮೆ ಸಿಗುವುದಿಲ್ಲ


ಆಭರಣಗಳನ್ನು ಕ್ಲೀನ್ ಮಾಡುವಾಗ ಅಥವಾ ರಿಪೇರಿ ಮಾಡುವಾಗ ಉಂಟಾಗುವ ಹಾನಿ.

ಉದ್ದೇಶಪೂರ್ವಕ ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಕಳೆದುಕೊಂಡರೆ.

ಹಳೆಯ ಆಭರಣ ನೀಡಿ ಹೊಸದು ಖರೀದಿಸಿದರೆ ವಿಮೆ ಆಟೋಮ್ಯಾಟಿಕ್ ಆಗಿ ವರ್ಗಾವಣೆಯಾಗುವುದಿಲ್ಲ.

ಕಾನೂನುಬಾಹಿರ ಕಾರಣಕ್ಕೆ ಸರ್ಕಾರ ಆಭರಣ ಮುಟ್ಟುಗೋಲು ಹಾಕಿಕೊಂಡರೆ ವಿಮೆ ಸಿಗದು.

ಪ್ರೀಮಿಯಂ ಮತ್ತು ದಾಖಲೆಗಳು:


ಸಾಮಾನ್ಯವಾಗಿ ಆಭರಣದ ಒಟ್ಟು ಮೌಲ್ಯದ ಸುಮಾರು ಶೇ. 1 (1%) ರಷ್ಟು ವಾರ್ಷಿಕ ಪ್ರೀಮಿಯಂ ಇರುತ್ತದೆ.
ಅಗತ್ಯ ದಾಖಲೆಗಳು:

ಅಧಿಕೃತ ಆಭರಣ ವ್ಯಾಪಾರಿಯಿಂದ ಪಡೆದ ಮೌಲ್ಯಮಾಪನ ಪ್ರಮಾಣಪತ್ರ (Valuation Certificate).

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನಂತಹ ಕೆವೈಸಿ (KYC) ದಾಖಲೆಗಳು.

ಆಭರಣ ಖರೀದಿಸಿದ ಬಿಲ್ ಅಥವಾ ಇನ್‌ವಾಯ್ಸ್.

ಕ್ಲೈಮ್ ಮಾಡುವುದು ಹೇಗೆ?


ಆಭರಣ ಕಳೆದುಹೋದ ತಕ್ಷಣ ವಿಮಾ ಕಂಪನಿಗೆ ಇಮೇಲ್ ಅಥವಾ ಕರೆ ಮೂಲಕ ತಿಳಿಸಬೇಕು. ಕಳ್ಳತನವಾಗಿದ್ದರೆ ಎಫ್‌ಐಆರ್ (FIR) ಪ್ರತಿ ಕಡ್ಡಾಯ. ಹಾನಿಯಾದ ಚಿತ್ರಗಳು ಅಥವಾ ವಿಡಿಯೋಗಳನ್ನು ಸಾಕ್ಷಿಯಾಗಿ ಇಟ್ಟುಕೊಳ್ಳುವುದು ಉತ್ತಮ. ವಿಮಾ ಕಂಪನಿಯು ಸರ್ವೇಯರ್ ಮೂಲಕ ತನಿಖೆ ನಡೆಸಿ ಬಳಿಕ ಮರುಪಾವತಿ ಮಾಡುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular