ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ವಿಮಾನ ಸೇವೆಗೆ ತಯಾರಾಗಿದೆ. ಕುವೈತ್ ಮೂಲದ ಖಾಸಗಿ ವಿಮಾನಯಾನ ಸಂಸ್ಥೆ ಜಝೀರಾ ಏರ್ವೇಸ್ ಮಂಗಳೂರು-ಕುವೈತ್ ನಡುವಿನ ವಿಮಾನ ಸೇವೆ ಘೋಷಣೆ ಮಾಡಿದೆ. ಏಪ್ರಿಲ್ 9ರಿಂದ ವಿಮಾನ ಸೇವೆ ಪ್ರಾರಂಭವಾಗಲಿದೆ.
ಜಝೀರಾ ಏರ್ವೇಸ್ ಭಾರತ ಮತ್ತು ಕುವೈತ್ ನಡುವಿನ ವಿಮಾನಯಾನ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ದೆಹಲಿ ಸೇರಿದಂತೆ ಹಲವು ಕೇಂದ್ರಗಳಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ.
ಈಗ ಜಝೀರಾ ಏರ್ವೇಸ್ ಮಂಗಳೂರು-ಕುವೈತ್ ನಡುವೆ ವಾರಕ್ಕೆ ಎರಡು ಬಾರಿ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಈ ವಿಮಾನದ ಟಿಕೆಟ್ಗಳ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ ಎಂದು ಸಂಸ್ಥೆ ಹೇಳಿದೆ.
ವಿಮಾನದ ವೇಳಾಪಟ್ಟಿ: ಸಾಮಾಜಿಕ ಜಾಲತಾಣದ ಮಾಹಿತಿ ಪ್ರಕಾರ ಮಂಗಳೂರು-ಕುವೈತ್ ವಯಾ ದಮನ್, ಸೌದಿ ಅರೇಬಿಯಾ ನಡುವೆ ಜಝೀರಾ ಏರ್ವೇಸ್ ಸಂಚಾರವನ್ನು ನಡೆಸುತ್ತದೆ.
J9 3417 ಸಂಖ್ಯೆ ವಿಮಾನ ಸೋಮವಾರ & ಗುರುವಾರ ಸಂಚಾರವನ್ನು ನಡೆಸುತ್ತದೆ. ಕುವೈತ್-ಮಂಗಳೂರು ವಿಮಾನ 8.40ಕ್ಕೆ ಹೊರಟು 16:10ಕ್ಕೆ ಆಗಮಿಸುತ್ತದೆ.
J9 3418 ಸಂಖ್ಯೆಯ ಮಂಗಳೂರು-ಕುವೈತ್ ವಿಮಾನ 16.55ಕ್ಕೆ ಹೊರಟು, 19:40ಕ್ಕೆ ತಲುಪುತ್ತದೆ.
ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ, ರಾಜಕೀಯ ಉದ್ವಿಗ್ನತೆಯಿಂದಾಗಿ ಜಝೀರಾ ಏರ್ವೇಸ್ ತನ್ನ ಹಾರಾಟದ ಮಾರ್ಗಗಳನ್ನು ಬದಲಾಯಿಸಬಹುದು. ಸರ್ಕಾರದ ಮಾರ್ಗಸೂಚಿ ಅನ್ವಯ ಇದು ವಿಮಾನದ ದರ ಮತ್ತು ಪ್ರಯಾಣದ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.
ಜಝೀರಾ ಏರ್ವೇಸ್ನ ಕಡಿಮೆ ದರದಲ್ಲಿ ವಿಮಾನ ಸೇವೆ ಒದಗಿಸುವ ವಿಮಾನಯಾನ ಸಂಸ್ಥೆಯಾಗಿದ್ದು ಗಲ್ಫ್ ರಾಷ್ಟ್ರಗಳಿಗೆ ತೆರಳುವ ಭಾರತೀಯ ಕಾರ್ಮಿಕರು ಮತ್ತು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತಿದೆ.

