HomeEntertainmentಅಂದಾಜ್ ಚಿತ್ರದ ಶೂಟಿಂಗ್ ವೇಳೆ ಸಾವಿನ ದವಡೆಯಿಂದ ಪಾರಾಗಿದ್ದ ಲಾರಾ ದತ್ತಾ: ಕಲ್ಲಿನಂತೆ ಸಮುದ್ರದಲ್ಲಿ ಮುಳುಗಿದ್ದ...

ಅಂದಾಜ್ ಚಿತ್ರದ ಶೂಟಿಂಗ್ ವೇಳೆ ಸಾವಿನ ದವಡೆಯಿಂದ ಪಾರಾಗಿದ್ದ ಲಾರಾ ದತ್ತಾ: ಕಲ್ಲಿನಂತೆ ಸಮುದ್ರದಲ್ಲಿ ಮುಳುಗಿದ್ದ ನಟಿ!

ಮುಂಬೈ: ಬಾಲಿವುಡ್ ನಟಿ ಲಾರಾ ದತ್ತಾ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಎದುರಿಸಿದ ಭೀಕರ ಅಪಘಾತವೊಂದನ್ನು ಸ್ಮರಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ನಾಯಕತ್ವದ ‘ಅಂದಾಜ್’ ಚಿತ್ರದ ಶೂಟಿಂಗ್ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಲಾರಾ ದತ್ತಾ ಬಹುತೇಕ ಮುಳುಗುವ ಹಂತ ತಲುಪಿದ್ದರು. ಈ ಘಟನೆ ಅವರ ಮನಸ್ಸಿನಲ್ಲಿ ನೀರನ ಬಗ್ಗೆ ಭೀತಿಯನ್ನು ಹುಟ್ಟಿಸಿತ್ತು.

ಕಲ್ಲಿನಂತೆ ಮುಳುಗಿದ್ದ ಲಾರಾ: ಸಂದರ್ಶನವೊಂದರಲ್ಲಿ ಮಾತನಾಡಿದ ಲಾರಾ ದತ್ತಾ, ಅಂದಾಜ್ ಚಿತ್ರದ ಹಾಡಿನ ಚಿತ್ರೀಕರಣ ಸಮುದ್ರದ ದಡದಲ್ಲಿ ನಡೆಯುತ್ತಿತ್ತು. ಆಗ ನನಗೆ ಈಜಲು ಬರುತ್ತಿರಲಿಲ್ಲ. ಧರಿಸಿದ್ದ ಚರ್ಮದ ಉಡುಪಿನ ಭಾರ ಹಾಗೂ ಸಮುದ್ರದ ಅಲೆಗಳ ವೇಗಕ್ಕೆ ಸಿಲುಕಿ ನಾನು ಕಲ್ಲಿನಂತೆ ನೀರಿನ ಆಳಕ್ಕೆ ಮುಳುಗಲಾರಂಭಿಸಿದೆ ಎಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಸಹನಟ ಅಕ್ಷಯ್ ಕುಮಾರ್ ತಕ್ಷಣವೇ ಕಾರ್ಯಪ್ರವೃತ್ತರಾಗಿ ಲಾರಾ ಅವರನ್ನು ಹಿಡಿದು ದಡಕ್ಕೆ ತರುವಲ್ಲಿ ಯಶಸ್ವಿಯಾದರು. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ನಟಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಭಯವನ್ನು ಮೆಟ್ಟಿ ನಿಂತ ಸಾಹಸ: ಈ ಘಟನೆಯ ನಂತರ ಲಾರಾ ದತ್ತಾ ಅವರಿಗೆ ನೀರಿನ ಬಗ್ಗೆ ವಿಪರೀತ ಭಯ ಶುರುವಾಗಿತ್ತು. ಆದರೆ ಕೆಲವು ವರ್ಷಗಳ ನಂತರ ಅಕ್ಷಯ್ ಕುಮಾರ್ ಅವರೇ ಲಾರಾ ಹೆಸರನ್ನು ‘ಬ್ಲೂ’ ಎಂಬ ಸಮುದ್ರದೊಳಗಿನ ಸಾಹಸಮಯ ಚಿತ್ರಕ್ಕೆ ಶಿಫಾರಸು ಮಾಡಿದರು. ಆರಂಭದಲ್ಲಿ ಈ ಆಫರ್ ನಿರಾಕರಿಸಿದ್ದ ಲಾರಾ ಅವರಿಗೆ, ಅಕ್ಷಯ್ ಕುಮಾರ್ ಈಜು ಕಲಿಯುವಂತೆ ಸಲಹೆ ನೀಡಿದರು. ತಮ್ಮ 30ನೇ ವಯಸ್ಸಿನಲ್ಲಿ ಈಜು ಮತ್ತು ಡೈವಿಂಗ್ ಕಲಿತ ಲಾರಾ, ವರ್ಷಗಳ ಕಾಲ ಕಾಡಿದ್ದ ನೀರಿನ ಭಯವನ್ನು ಹೋಗಲಾಡಿಸಿ ಬ್ಲೂ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಜಯ್ ದತ್ ಮತ್ತು ಜಾಯೆದ್ ಖಾನ್ ನಟನೆಯ ಬ್ಲೂ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ, ಲಾರಾ ದತ್ತಾ ಅವರ ವೈಯಕ್ತಿಕ ಜೀವನದಲ್ಲಿ ಧೈರ್ಯ ತುಂಬಿದ ಪ್ರಮುಖ ಚಿತ್ರವಾಗಿ ಉಳಿದಿದೆ. ಇತ್ತೀಚೆಗೆ ಇಷ್ಕ್-ಎ-ನಾದಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲಾರಾ, ಅಕ್ಷಯ್ ಕುಮಾರ್ ಅವರ ಸಮಯಪ್ರಜ್ಞೆಯಿಂದಲೇ ಇಂದು ತಾನು ಜೀವಂತವಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular