HomeLatest Newsಉದ್ಯೋಗ ವಾರ್ತೆ : ತುಮಕೂರು ಮಹಾನಗರ ಪಾಲಿಕೆಯಲ್ಲಿ 238 ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಉದ್ಯೋಗ ವಾರ್ತೆ : ತುಮಕೂರು ಮಹಾನಗರ ಪಾಲಿಕೆಯಲ್ಲಿ 238 ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ತುಮಕೂರು :  ತುಮಕೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಹಾಗೂ ಈಗಾಗಲೇ ಪೌರಸೇವೆಯಲ್ಲಿ ತೊಡಗಿರುವವರಿಗೆ ಜಿಲ್ಲಾಡಳಿತವು ಸಿಹಿಸುದ್ದಿ ನೀಡಿದೆ. ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ ಶಿರಾ ಮತ್ತು ತಿಪಟೂರು ನಗರಸಭೆಗಳಲ್ಲಿ ಖಾಲಿ ಇರುವ ಒಟ್ಟು 238 ಪೌರಕಾರ್ಮಿಕ ಹುದ್ದೆಗಳನ್ನು ನೇರಪಾವತಿ ಪದ್ಧತಿಯಡಿ ಭರ್ತಿ ಮಾಡಲು ಜಿಲ್ಲಾ ನಗರಾಭಿವೃದ್ಧಿ ಕೋಶವು ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ತುಮಕೂರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ನಗರಾಭಿವೃದ್ಧಿ ಕೋಶವು ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ 238 ಪೌರಕಾರ್ಮಿಕ ಹುದ್ದೆಗಳನ್ನು ನೇರಪಾವತಿ ಪದ್ಧತಿಯಡಿ ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಪ್ರಮುಖ ಮಾಹಿತಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25-03-2026
  • ಅರ್ಜಿ ಪಡೆಯುವ ಸ್ಥಳ: ಸಂಬಂಧಪಟ್ಟ ಮಹಾನಗರಪಾಲಿಕೆ ಅಥವಾ ನಗರಸಭೆ ಕಾರ್ಯಾಲಯಗಳು.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-04-2026
  • ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಅಂತಿಮ ಗಡುವು: 09-04-2026 (ಸಂಜೆ 5:00 ಗಂಟೆಯೊಳಗೆ).

ಹುದ್ದೆಗಳ ವಿವರ:  

1) ತುಮಕೂರು ಮಹಾನಗರಪಾಲಿಕೆ  175

2) ತಿಪಟೂರು ನಗರಸಭೆ  24

3) ಶಿರಾ ನಗರಸಭೆ  39

 ಒಟ್ಟು  ಹುದ್ದೆಗಳು :  238

ಅರ್ಹತೆಗಳು

  • ಈಗಾಗಲೇ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಥವಾ ದಿನಗೂಲಿ ಆಧಾರದ ಮೇಲೆ ಕನಿಷ್ಠ ಒಂದು ವರ್ಷ ಪೌರಕಾರ್ಮಿಕರಾಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
  • ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನವಿರಬೇಕು.
  • ವಯೋಮಿತಿ 18 ರಿಂದ 50 ವರ್ಷಗಳ ಒಳಗಿರಬೇಕು.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ www.tumakurududc.mrc.gov.in ಗೆ ಭೇಟಿ ನೀಡಬಹುದು ಅಥವಾ ಆಯಾ ಕಚೇರಿಗಳ ಸೂಚನಾ ಫಲಕವನ್ನು ಗಮನಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular