ಬೆಂಗಳೂರು: 2025-26ನೇ ಆರ್ಥಿಕ ವರ್ಷವು ಮುಕ್ತಾಯದ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು ಬಾಕಿ ಇರುವ ಬಿಲ್ಗಳ ಪಾವತಿಗೆ ಕಟ್ಟುನಿಟ್ಟಿನ ಗಡುವು ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟಿರುವ ಒಟ್ಟು ₹175 ಕೋಟಿ ಮೊತ್ತದ ಬಿಲ್ಗಳನ್ನು ಸ್ವೀಕರಿಸಲು ಮಾರ್ಚ್ 30 ಕೊನೆಯ ದಿನವಾಗಿದೆ.
ಎಲ್ಲಾ ಜಿಲ್ಲಾ ಖಜಾನಾಧಿಕಾರಿಗಳು ಮಾರ್ಚ್ 30ರ ಸಂಜೆ 5:30ರ ಒಳಗೆ ಈ ಬಿಲ್ಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು .ಮಾರ್ಚ್ 31ರಂದು ಎಲ್ಲಾ ಲೆಕ್ಕಪತ್ರಗಳನ್ನು ಪೂರ್ಣಗೊಳಿಸಿ ಆರ್ಥಿಕ ವರ್ಷದ ಲೆಕ್ಕವನ್ನು ಮುಕ್ತಾಯಗೊಳಿಸಲು ಸರ್ಕಾರ ಈ ತುರ್ತು ಆದೇಶ ಹೊರಡಿಸಿದೆ.


