HomeLatest Newsಭಾರತದಲ್ಲಿ ಚಹಾದ ಇತಿಹಾಸ: ಟೀ ಜನಪ್ರಿಯವಾಗುವ ಮೊದಲು ನಮ್ಮ ಪೂರ್ವಜರು ಏನನ್ನು ಕುಡಿಯುತ್ತಿದ್ದರು?

ಭಾರತದಲ್ಲಿ ಚಹಾದ ಇತಿಹಾಸ: ಟೀ ಜನಪ್ರಿಯವಾಗುವ ಮೊದಲು ನಮ್ಮ ಪೂರ್ವಜರು ಏನನ್ನು ಕುಡಿಯುತ್ತಿದ್ದರು?

ಬೆಂಗಳೂರು: ಇಂದು ನಮ್ಮ ದಿನಚರಿ ಶುರುವಾಗೋದೇ ಒಂದು ಕಪ್ ಬಿಸಿ ಬಿಸಿ ಚಹಾದಿಂದ. ಟೀ ಇಲ್ಲದ ಬೆಳಿಗ್ಗೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ, ಭಾರತೀಯರು ಚಹಾಕ್ಕೆ ಅಡಿಕ್ಟ್ ಆಗಿ ಕೇವಲ 100 ವರ್ಷಗಳಾಗಿವೆ ಎಂದರೆ ನೀವು ನಂಬುತ್ತೀರಾ? ಹೌದು, ಬ್ರಿಟಿಷರು ಭಾರತಕ್ಕೆ ಬರುವ ಮೊದಲು ನಮ್ಮ ಬೆಳಗಿನ ಪಾನೀಯಗಳೇ ಬೇರೆಯಾಗಿದ್ದವು

ಚಹಾ ಕುಡಿಯೋ ಅಭ್ಯಾಸ ಬಂದಿದ್ದು ಹೇಗೆ?
ಭಾರತೀಯರು ರಾತ್ರೋರಾತ್ರಿ ಚಹಾ ವ್ಯಸನಿಗಳಾಗಲಿಲ್ಲ. ಬ್ರಿಟಿಷರು ಸುಮಾರು 40-50 ವರ್ಷಗಳ ಕಾಲ ಸತತವಾಗಿ ಶ್ರಮಿಸಿ, ಜಾಹೀರಾತುಗಳ ಮೂಲಕ ನಮ್ಮನ್ನು ಚಹಾಕ್ಕೆ ಒಗ್ಗುವಂತೆ ಮಾಡಿದರು. 1950ರ ವೇಳೆಗೆ ಇಡೀ ದೇಶ ಚಹಾಕ್ಕೆ ಮರುಳಾಯಿತು. ಇಂದು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಹಾ ಸೇವಿಸುವ ದೇಶಗಳಲ್ಲಿ ಒಂದಾಗಿದೆ.

ಬ್ರಿಟಿಷರಿಗಿಂತ ಮೊದಲು ಏನನ್ನು ಕುಡಿಯುತ್ತಿದ್ದರು?
ಬ್ರಿಟಿಷರು ಚಹಾವನ್ನು ಪರಿಚಯಿಸುವ ಮೊದಲು ಭಾರತದಲ್ಲಿ ಅತ್ಯಂತ ಶ್ರೀಮಂತ ಮತ್ತು ಆರೋಗ್ಯಕರ ಪಾನೀಯ ಸಂಸ್ಕೃತಿ ಇತ್ತು. ಋತುಮಾನಕ್ಕೆ ಅನುಗುಣವಾಗಿ ಜನರು ಈ ಕೆಳಗಿನ ಪಾನೀಯಗಳನ್ನು ಸೇವಿಸುತ್ತಿದ್ದರು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಿಡಮೂಲಿಕೆ ಕಷಾಯ: ಹಳ್ಳಿಗಳಲ್ಲಿ ಜನರು ತುಳಸಿ, ಶುಂಠಿ, ಕರಿಮೆಣಸು ಮತ್ತು ದಾಲ್ಚಿನ್ನಿ ಹಾಕಿ ಕುದಿಸಿದ ನೀರನ್ನು (ಕಷಾಯ) ಕುಡಿಯುತ್ತಿದ್ದರು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವ ರಾಮಬಾಣವಾಗಿತ್ತು.

ತಾಜಾ ಮಜ್ಜಿಗೆ: ಉತ್ತರ ಭಾರತದ ಬಿಸಿ ಪ್ರದೇಶಗಳಲ್ಲಿ ಜೀರಿಗೆ ಮತ್ತು ಕಪ್ಪು ಉಪ್ಪು ಹಾಕಿದ ಮಜ್ಜಿಗೆಯನ್ನು ಬೆಳಿಗ್ಗೆ ಕುಡಿಯುತ್ತಿದ್ದರು. ಇದು ಹೊಟ್ಟೆಯನ್ನು ತಂಪಾಗಿಸುತ್ತಿತ್ತು.

ಸಟ್ಟು ಸಿರಪ್: ಬಿಹಾರ ಮತ್ತು ಬಂಗಾಳದ ಭಾಗಗಳಲ್ಲಿ ಸಟ್ಟು (ಹುರಿದ ಬೇಳೆ ಹಿಟ್ಟು), ಬೆಲ್ಲ ಅಥವಾ ನಿಂಬೆ ರಸ ಬೆರೆಸಿದ ಪಾನೀಯವನ್ನು ಕುಡಿಯುತ್ತಿದ್ದರು. ಇದು ಕೇವಲ ಪಾನೀಯವಲ್ಲ, ರೈತರಿಗೆ ಮಧ್ಯಾಹ್ನದವರೆಗೆ ಶಕ್ತಿ ನೀಡುವ ಸಂಪೂರ್ಣ ಆಹಾರವಾಗಿತ್ತು.

ಪಜಾಯ ಸಾದಂ (ಅನ್ನದ ನೀರು): ದಕ್ಷಿಣ ಭಾರತದಲ್ಲಿ ಹಿಂದಿನ ರಾತ್ರಿಯ ಅನ್ನವನ್ನು ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಅದರ ನೀರನ್ನು (ಕಂಜಿ) ಕುಡಿಯುತ್ತಿದ್ದರು. ಇದು ಅತ್ಯುತ್ತಮ ಪ್ರೋಬಯಾಟಿಕ್ ಆಗಿತ್ತು.

ಚಹಾವನ್ನು ವಿಷ ಎಂದಿದ್ದ ಗಾಂಧೀಜಿ
ಮಹಾತ್ಮ ಗಾಂಧಿಯವರು ಚಹಾ ಸೇವನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಅವರು ಚಹಾವನ್ನು “ಸಾಮ್ರಾಜ್ಯಶಾಹಿಯ ಸಂಕೇತ” ಮತ್ತು ವಿಷ ಎಂದು ಕರೆದಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ “ಚಹಾ ಬಿಟ್ಟುಬಿಡಿ” ಎಂಬ ಘೋಷಣೆಗಳೂ ಕೇಳಿಬಂದಿದ್ದವು. ಚಹಾ ಸೇವನೆಯಿಂದ ಭಾರತದ ಹಣ ಇಂಗ್ಲೆಂಡ್‌ಗೆ ಹರಿಯುತ್ತಿದೆ ಎಂಬುದು ಅವರ ವಾದವಾಗಿತ್ತು.

ಬ್ರಿಟಿಷರ ಮಾಸ್ಟರ್ ಪ್ಲಾನ್
ರಾಷ್ಟ್ರೀಯ ನಾಯಕರು ಚಹಾವನ್ನು ವಿರೋಧಿಸಿದಾಗ, ಬ್ರಿಟಿಷರು ಚಹಾವನ್ನು ಆಧುನಿಕ ಮತ್ತು ಆರೋಗ್ಯಕರ ಎಂದು ಪ್ರಚಾರ ಮಾಡಿದರು. ಚಹಾ ಕುಡಿಯುವುದರಿಂದ ಜಾತಿ ಭೇದಗಳು ದೂರವಾಗುತ್ತವೆ ಮತ್ತು ಇದು ಮಲೇರಿಯಾದಂತಹ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಸುಳ್ಳು ಪ್ರಚಾರವನ್ನೂ ಮಾಡಿದ್ದರು!

ಟೀ ವಿರಾಮ (Tea Break) ಶುರುವಾಗಿದ್ದು ಹೇಗೆ?
ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು ಆಯಾಸಗೊಳ್ಳಬಾರದು ಮತ್ತು ಮತ್ತೆ ಚೈತನ್ಯದಿಂದ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಬ್ರಿಟಿಷರೇ ಈ 15 ನಿಮಿಷಗಳ ಚಹಾ ವಿರಾಮ ಪದ್ಧತಿಯನ್ನು ಪರಿಚಯಿಸಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular