ಕರ್ನಾಟಕದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ ಅಧಿಸೂಚನೆಯೊಂದನ್ನು ಹೊರಡಿಸಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಸಂಬಂಧದಲ್ಲಿ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಜಿಲ್ಲೆಗಳಲ್ಲಿ ಒಂಬುಡ್ಸ್‌ಪರ್ಸನ್ಸ್ ಹುದ್ದೆಗಳನ್ನು ಆಯ್ಕೆ ಮೂಲಕ ತುಂಬಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದೆ.
ಒಂಬುಡ್ಸ್‌ಪರ್ಸನ್ ಹುದ್ದೆಗಳನ್ನು ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ಕೋಲಾರ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭರ್ತಿ ಮಾಡಲಾಗುತ್ತದೆ.
ಈ ಯಾವುದಾದರೊಂದು ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಅನುಭವವನ್ನು ಅಭ್ಯರ್ಥಿಗಳು ಹೊಂದಿರಬೇಕಾಗಿರುತ್ತದೆ.
- ಸಾರ್ವಜನಿಕ ಆಡಳಿತ
- ಕಾನೂನು
- ಸಮಾಜ ಸೇವೆ
- ಮ್ಯಾನೇಜ್‌ಮೆಂಟ್
ಸಾರ್ವಜನಿಕರೊಂದಿಗೆ/ ಸಮುದಾಯದ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವು ಒಂದು ಕಡ್ಡಾಯ ಅರ್ಹತೆಯಾಗಿರುತ್ತದೆ.
ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದೀರಾ/ ಆರೋಪ ಪಟ್ಟಿ ದಾಖಲಾಗಿದೆಯೇ?, ಇಲಾಖಾ ವಿಚಾರಣೆಯಲ್ಲಿ ದಂಡನೆಗೆ ಒಳಪಟ್ಟಿರುವಿರೇ?, ಯಾವುದೇ ಇಲಾಖಾ ವಿಚಾರಣೆ ಬಾಕಿ ಇದ್ದರೆ ಅರ್ಜಿ ಸಲ್ಲಿಸುವಂತಿಲ್ಲ.
ಯಾವುದೇ ರಾಷ್ಟ್ರೀಯ/ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು. ಯಾವುದೇ ನಿಷೇಧಿತ ಸಂಘ ಸಂಸ್ಥೆಯ ಸದಸ್ಯನಾಗಿರಬಾರದು (ಈ ಕುರಿತು ಪಬ್ಲಿಕ್ ನೋಟರಿಯಿಂದ ದೃಢೀಕರಿಸಿದ ವೈಯಕ್ತಿಕ ಘೋಷಣಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸುವುದು).
ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪದವೀಧರರಾಗಿರತಕ್ಕದ್ದು. ತಪಾಸಣೆ, ಕ್ಷೇತ್ರ ಭೇಟಿ, ಹಾಗೂ ವೀಕ್ಷಣೆ ಕೆಲಸಗಳಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಲು ದೈಹಿಕವಾಗಿ ಸಮರ್ಥರಾಗಿರಬೇಕು, ವ್ಯದ್ಯಕೀಯ ಪ್ರಮಾಣ ಪತ್ರವನ್ನು ಲಗತ್ತಿಸುವುದು.
ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಗರಿಷ್ಠ ವಯಸ್ಸು 66 ವರ್ಷಗಳನ್ನು ಮೀರಿರಬಾರದು. ನೇಮಕಾತಿಯು ಮೊದಲಿಗೆ 2 ವರ್ಷಗಳ ಅವಧಿಯದಾಗಿರುತ್ತದೆ. ಆದರೆ ಕಾರ್ಯನಿರ್ವಹಣೆಯು ಅತೃಪ್ತಿಕರವಾಗಿ ಕಂಡು ಬಂದಲ್ಲಿ ಅವಧಿಗೆ ಮುನ್ನವೇ ಹುದ್ದೆಯಿಂದ ಬಿಡುಗಡೆ ಮಾಡಲಾಗುವುದು.
ಕೇಂದ್ರ/ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳ ಅನುಸಾರ ಸಂಭಾವನೆ, ಸಿಟ್ಟಿಂಗ್ ಫೀಜು ನೀಡಲಾಗುವುದು. ಪ್ರಸ್ತುತ ಮಾಸಿಕ ರೂ.10,000 ಗೌರವಧನ ಹಾಗೂ ಪ್ರತಿ ಸಿಟ್ಟಿಂಗ್‌ಗೆ ರೂ.2,250ದಂತೆ ಗರಿಷ್ಠ ರೂ.45,000 ಮಿತಿಗೊಳಪಟ್ಟು ಸಿಟ್ಟಿಂಗ್ ಫೀಜು ನೀಡಲಾಗುವುದು.
ಸದರಿ ಹುದ್ದೆಯು ಅರೆಕಾಲಿಕ ಹುದ್ದೆಯಾಗಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಒಂಬುಡ್ಸ್‌ಪರ್ಸನ್‌ಗಳಾಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ವ್ಯಕ್ತಿಗಳು ಇಲಾಖೆಯ ವೆಬ್‌ಸೈಟ್ www.rdpr.karnataka.gov.in ನಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ವ್ಯಕ್ತಿತ್ವ ಪರಿಚಯದ, ಕನಿಷ್ಠ 10 ವರ್ಷಗಳ ಕಾರ್ಯನಿರ್ವಹಣೆ ಸೇವಾನುಭವದ ವಿವರಗಳನ್ನೊಳಗೊಂಡ ದಾಖಲೆ ಹಾಗೂ ಇತರೆ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 24.04.2026ರ ಸಂಜೆ 5.30. ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಧಿಸೂಚನೆ ಹೇಳಿದೆ.
ಅರ್ಜಿಯನ್ನು ಆಯುಕ್ತರು ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 5ನೇ ಮಹಡಿ, ಪ್ಲಾಟ್ ನಂ.1243, ಕೆ.ಎಸ್.ಐ.ಐ.ಡಿ.ಸಿ.ಕಟ್ಟಡ, ಐ.ಟಿ. ಪಾರ್ಕ್, ಸೌತ್ ಬ್ಲಾಕ್, ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಟ್, ಬೆಂಗಳೂರು-560010 ಇಲ್ಲಿಗೆ ಸಲ್ಲಿಸುವುದು.
ನಿಗದಿಪಡಿಸಿದ ದಿನಾಂಕದ ನಂತರ ತಡವಾಗಿ ಸ್ವೀಕೃತವಾಗುವ ಅಥವಾ ಅಪೂರ್ಣ ಮಾಹಿತಿ ಹೊಂದಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆ 080-22342794.

