HomeKarnatakaಗ್ಯಾರಂಟಿ ಯೋಜನೆ: ಅಧ್ಯಕ್ಷ, ಉಪಾಧ್ಯಕ್ಷರಿಗೆ ಲಕ್ಷ ಲಕ್ಷ ವೇತನ

ಗ್ಯಾರಂಟಿ ಯೋಜನೆ: ಅಧ್ಯಕ್ಷ, ಉಪಾಧ್ಯಕ್ಷರಿಗೆ ಲಕ್ಷ ಲಕ್ಷ ವೇತನ

ಕರ್ನಾಟಕದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಹಾಗೂ ಮೇಲ್ವಿಚಾರಣೆ ಮಾಡಲು ಮುಖ್ಯಮಂತ್ರಿಗಳ ಟಿಪ್ಪಣಿ ಆಧರಿಸಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಪ್ರಾಧಿಕಾರಗಳನ್ನು ಮತ್ತು ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿದೆ.

ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆ ಎಂಬ ಆರೋಪಗಳ ನಡುವೆಯೇ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರಿಗೆ ಲಕ್ಷಾಂತರ ರೂಪಾಯಿ ವೇತನ ನೀಡುತ್ತದೆ.

ಅಲ್ಲದೇ ಕಚೇರಿಯ ಸಿಬ್ಭಂದಿಗಳ ವೇತನಕ್ಕಾಗಿಯೂ ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಈ ಕುರಿತು ಸರ್ಕಾರವೇ ವಿಧಾನಸಭೆಯಲ್ಲಿ ಮಾಹಿತಿ ನೀಡಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಬಾಬು ಸಿ.ಬಿ. ಕೇಳಿದ್ದ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರ ವೇತನ. ಒಟ್ಟು ಕಛೇರಿ ಸಿಬ್ಬಂದಿಗಳು, ಫೆಬ್ರವರಿ 2026ರಲ್ಲಿ ಕಛೇರಿ ಸಿಬ್ಬಂದಿಗಳಿಗೆ ನೀಡಿದ ವೇತನದ ವಿವರಗಳನ್ನು ಸರ್ಕಾರ ನೀಡಿದೆ.

ಸರ್ಕಾರ ನೀಡಿರುವ ಉತ್ತರ: ಸರ್ಕಾರದ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರ ಮಾಸಿಕ ವೇತನ 5,98,487 ರೂ.ಗಳು, ಐವರು ಉಪಾಧ್ಯಕ್ಷರ ಮಾಸಿಕ ವೇತನ 4,43,865 ರೂ.ಗಳು.

  • ಅಧ್ಯಕ್ಷರು – ಹೆಚ್.ಎಂ.ರೇವಣ್ಣ ( ಒಟ್ಟು ಕಚೇರಿ ಸಿಬ್ಬಂದಿ 12)
  • ಎಸ್.ಆರ್.ಪಾಟೀಲ್ – ಉಪಾಧ್ಯಕ್ಷರು ( ಒಟ್ಟು ಕಚೇರಿ ಸಿಬ್ಬಂದಿ 11)
  • ಸೂರಜ್ ಹೆಗಡೆ – ಉಪಾಧ್ಯಕ್ಷರು (ಒಟ್ಟು ಕಚೇರಿ ಸಿಬ್ಬಂದಿ 9)
  • ಡಾ. ಪುಷ್ಪಾ ಅಮರನಾಥ್ – ಉಪಾಧ್ಯಕ್ಷರು (ಒಟ್ಟು ಕಚೇರಿ ಸಿಬ್ಬಂದಿ 12)
  • ಎಸ್.ಆರ್.ಮೆಹರೋಜ್ ಖಾನ್ – ಉಪಾಧ್ಯಕ್ಷರು (ಒಟ್ಟು ಕಚೇರಿ ಸಿಬ್ಬಂದಿ 10)
  • ದಿನೇಶ್ ಗೂಳಿ ಗೌಡ – ಉಪಾಧ್ಯಕ್ಷರು (ಒಟ್ಟು ಕಚೇರಿ ಸಿಬ್ಬಂದಿ 7)

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular