ಕರ್ನಾಟಕದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಹಾಗೂ ಮೇಲ್ವಿಚಾರಣೆ ಮಾಡಲು ಮುಖ್ಯಮಂತ್ರಿಗಳ ಟಿಪ್ಪಣಿ ಆಧರಿಸಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಪ್ರಾಧಿಕಾರಗಳನ್ನು ಮತ್ತು ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿದೆ.
ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆ ಎಂಬ ಆರೋಪಗಳ ನಡುವೆಯೇ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರಿಗೆ ಲಕ್ಷಾಂತರ ರೂಪಾಯಿ ವೇತನ ನೀಡುತ್ತದೆ.
ಅಲ್ಲದೇ ಕಚೇರಿಯ ಸಿಬ್ಭಂದಿಗಳ ವೇತನಕ್ಕಾಗಿಯೂ ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಈ ಕುರಿತು ಸರ್ಕಾರವೇ ವಿಧಾನಸಭೆಯಲ್ಲಿ ಮಾಹಿತಿ ನೀಡಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಬಾಬು ಸಿ.ಬಿ. ಕೇಳಿದ್ದ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರ ವೇತನ. ಒಟ್ಟು ಕಛೇರಿ ಸಿಬ್ಬಂದಿಗಳು, ಫೆಬ್ರವರಿ 2026ರಲ್ಲಿ ಕಛೇರಿ ಸಿಬ್ಬಂದಿಗಳಿಗೆ ನೀಡಿದ ವೇತನದ ವಿವರಗಳನ್ನು ಸರ್ಕಾರ ನೀಡಿದೆ.
ಸರ್ಕಾರ ನೀಡಿರುವ ಉತ್ತರ: ಸರ್ಕಾರದ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರ ಮಾಸಿಕ ವೇತನ 5,98,487 ರೂ.ಗಳು, ಐವರು ಉಪಾಧ್ಯಕ್ಷರ ಮಾಸಿಕ ವೇತನ 4,43,865 ರೂ.ಗಳು.
- ಅಧ್ಯಕ್ಷರು – ಹೆಚ್.ಎಂ.ರೇವಣ್ಣ ( ಒಟ್ಟು ಕಚೇರಿ ಸಿಬ್ಬಂದಿ 12)
- ಎಸ್.ಆರ್.ಪಾಟೀಲ್ – ಉಪಾಧ್ಯಕ್ಷರು ( ಒಟ್ಟು ಕಚೇರಿ ಸಿಬ್ಬಂದಿ 11)
- ಸೂರಜ್ ಹೆಗಡೆ – ಉಪಾಧ್ಯಕ್ಷರು (ಒಟ್ಟು ಕಚೇರಿ ಸಿಬ್ಬಂದಿ 9)
- ಡಾ. ಪುಷ್ಪಾ ಅಮರನಾಥ್ – ಉಪಾಧ್ಯಕ್ಷರು (ಒಟ್ಟು ಕಚೇರಿ ಸಿಬ್ಬಂದಿ 12)
- ಎಸ್.ಆರ್.ಮೆಹರೋಜ್ ಖಾನ್ – ಉಪಾಧ್ಯಕ್ಷರು (ಒಟ್ಟು ಕಚೇರಿ ಸಿಬ್ಬಂದಿ 10)
- ದಿನೇಶ್ ಗೂಳಿ ಗೌಡ – ಉಪಾಧ್ಯಕ್ಷರು (ಒಟ್ಟು ಕಚೇರಿ ಸಿಬ್ಬಂದಿ 7)


