HomeLive NewsGOOD NEWS : ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ 10 ಕೆಜಿ ಗ್ಯಾಸ್ ಸಿಲಿಂಡರ್...

GOOD NEWS : ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ 10 ಕೆಜಿ ಗ್ಯಾಸ್ ಸಿಲಿಂಡರ್ ಕಡಿಮೆ ಬೆಲೆಗೆ ಲಭ್ಯ..!

ದೇಶಾದ್ಯಂತ ಎದುರಾಗಿರುವ ಅಡುಗೆ ಅನಿಲದ (LPG) ತೀವ್ರ ಅಭಾವವನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿವೆ. ಸದ್ಯ ಮಾರುಕಟ್ಟೆಯಲ್ಲಿರುವ 14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್‌ಗಳ ಬದಲಿಗೆ, ಇನ್ಮುಂದೆ 10 ಕೆಜಿ ಅನಿಲ ಮಾತ್ರ ತುಂಬಿದ ಸಿಲಿಂಡರ್‌ಗಳನ್ನು ವಿತರಿಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ.

ಹೌದು.    ದೇಶದಲ್ಲಿ ಅಡುಗೆ ಅನಿಲದ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸುತ್ತಿದ್ದರೂ, ವಾಸ್ತವದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಜನರು ಗ್ಯಾಸ್ ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಸಿಲಿಂಡರ್ ಬುಕ್ ಮಾಡಿದರೂ ಡೆಲಿವರಿ ಆಗದಿರುವುದು ಅಥವಾ ವಿಳಂಬವಾಗುತ್ತಿರುವುದರಿಂದ ಗ್ರಾಹಕರು ಪರದಾಡುತ್ತಿದ್ದಾರೆ.

ಇನ್ನು ವಾಣಿಜ್ಯ (Commercial) ಸಿಲಿಂಡರ್‌ಗಳ ಪರಿಸ್ಥಿತಿಯಂತೂ ಕೇಳುವುದೇ ಬೇಡ. ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಇಲ್ಲದ ಕಾರಣ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರದ ಅಂಗಡಿಗಳು ಮುಚ್ಚುತ್ತಿವೆ. ಕೆಲವು ಕಡೆಗಳಲ್ಲಿ ಬೆಲೆ ಏರಿಕೆ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇದು ಸಾಮಾನ್ಯ ಜನರ ಮೇಲೆ ಹೊರೆಯಾಗುತ್ತಿದೆ. ಪರಿಸ್ಥಿತಿ ತಿಳಿಯಾಗಲು ಇನ್ನೂ ಕೆಲವು ತಿಂಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಪಶ್ಚಿಮ ಏಷ್ಯಾ ಯುದ್ಧ ಮುಗಿದು ಸಾಮಾನ್ಯ ಸ್ಥಿತಿ ನೆಲೆಸಿದರೆ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಸಾಧ್ಯತೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ಮುಂದೆ 10 ಕೆಜಿ ಸಿಲಿಂಡರ್..!

ಗ್ಯಾಸ್ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಮತ್ತು ಸರ್ಕಾರಿ ತೈಲ ಕಂಪನಿಗಳು ಮಹತ್ವದ ಕ್ರಮಕ್ಕೆ ಮುಂದಾಗಿವೆ. ಅದರ ಭಾಗವಾಗಿ 10 ಕೆಜಿಯ ಗೃಹ ಬಳಕೆಯ (Domestic) ಸಿಲಿಂಡರ್ ತರಲು ಯೋಜಿಸಲಾಗುತ್ತಿದೆ. ಪ್ರಸ್ತುತ ಮನೆಯ ಉದ್ದೇಶಕ್ಕಾಗಿ ಬಳಸುವ ಸಿಲಿಂಡರ್ 14.2 ಕೆಜಿ ತೂಕ ಹೊಂದಿದೆ, ಇದನ್ನು 10 ಕೆಜಿಗೆ ಇಳಿಸಲು ಯೋಜನೆ ರೂಪಿಸಲಾಗುತ್ತಿದೆ. ಮನೆಗಳಿಗೆ ಸಿಲಿಂಡರ್ ಕೊರತೆಯಾಗದಂತೆ ನೋಡಿಕೊಳ್ಳಲು ಹಳೆಯ ಸಿಲಿಂಡರ್‌ಗಳಲ್ಲೇ 10 ಕೆಜಿ ಎಲ್‌ಪಿಜಿ ತುಂಬಿ ನೀಡಲಾಗುವುದು ಎಂದು ತಿಳಿದುಬಂದಿದೆ. ಇದರ ಮೂಲಕ ಗ್ಯಾಸ್ ಕೊರತೆ ಕಡಿಮೆಯಾಗುವುದಲ್ಲದೆ, ಎಲ್ಲರಿಗೂ ಗ್ಯಾಸ್ ಸಿಗುವಂತಾಗುತ್ತದೆ ಎಂಬುದು ಕಂಪನಿಗಳ ಆಶಯವಾಗಿದೆ.

ಬೆಲೆ ಇಳಿಕೆ..?

ಸಿಲಿಂಡರ್‌ನಲ್ಲಿ ತುಂಬುವ ಗ್ಯಾಸ್ ಪ್ರಮಾಣವನ್ನು ಕಡಿಮೆ ಮಾಡಿದರೆ, ಅದರ ಬೆಲೆಯನ್ನೂ ಇಳಿಸಬೇಕಾಗುತ್ತದೆ. ಇದಕ್ಕಾಗಿ ರೆಗ್ಯುಲೇಟರಿ ಅನುಮತಿಗಳನ್ನು ಪಡೆಯಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. 14.2 ಕೆಜಿಯ ಸಿಲಿಂಡರ್ ಸರಾಸರಿ ಒಂದು ಕುಟುಂಬಕ್ಕೆ 35 ರಿಂದ 40 ದಿನಗಳ ಕಾಲ ಬರುತ್ತದೆ. ಅದೇ 10 ಕೆಜಿ ಸಿಲಿಂಡರ್ ಆದರೆ ಒಂದು ತಿಂಗಳ ಕಾಲ ಬರಬಹುದು. ಎಲ್ಲರಿಗೂ ಗ್ಯಾಸ್ ಒದಗಿಸಲು ತೈಲ ಕಂಪನಿಗಳು ಈ ನಿರ್ಧಾರವನ್ನು ಪರಿಶೀಲಿಸುತ್ತಿವೆ. ಸಿಲಿಂಡರ್ ತೂಕ ಕಡಿಮೆ ಮಾಡಿದರೆ ಅದರ ಲೇಬಲ್ ಬದಲಿಸಬೇಕಾಗುತ್ತದೆ ಮತ್ತು ರೀಫಿಲ್ಲಿಂಗ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯಬಹುದು. ಪ್ರಸ್ತುತ ಈ ನಿರ್ಧಾರವು ಪ್ರಸ್ತಾವನೆಯ ಹಂತದಲ್ಲಿದ್ದು, ತೈಲ ಕಂಪನಿಗಳು ಇದನ್ನು ಹೇಗೆ ಜಾರಿಗೆ ತರುತ್ತವೆ ಎಂಬುದು ಕುತೂಹಲ ಮೂಡಿಸಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಗ್ಯಾಸ್ ಸರಬರಾಜು ಹೆಚ್ಚಾಗಿ ನಡೆಯುತ್ತದೆ, ಆದರೆ ಯುದ್ಧದ ಕಾರಣದಿಂದಾಗಿ ಸಾರಿಗೆಯಲ್ಲಿ ಅಡಚಣೆ ಉಂಟಾಗುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular