HomeLatest NewsBREAKING: ಕಟ್ಟಡದ ಫ್ಲೈವುಡ್ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್: ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರ

BREAKING: ಕಟ್ಟಡದ ಫ್ಲೈವುಡ್ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್: ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರ

ಹುಬ್ಬಳ್ಳಿ: ಬಿಲ್ಡಿಂಗ್ ಒಂದರ ಫ್ಲೈವುಡ್ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ ಆಗಿ ನಾಲ್ವರು ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಅಸ್ವಸ್ಥ ಕಾರ್ಮಿಕರನ್ನು ಬೆಂಗಳೂರು ಮೂಲದ ಜಫರ್, ಅಹ್ಮದ್, ಜಬಿ ಮತ್ತು ಹೈದರ್ ಎಂದು ಗುರುತಿಸಲಾಗಿದೆ. ಫ್ಲೈವುಡ್ ಕೆಲಸಕ್ಕೆ ಕೆಮಿಕಲ್ ಬಳಕೆ ಮಾಡಲಾಗುತ್ತಿತ್ತು. ಕೆಲಸ ಮುಗಿದ ಬಳಿಕ ತೀವ್ರ ಬಳಲಿದ್ದ ಕಾರ್ಮಿಕರು ಬಾಗಿಲು, ಕಿಡಕಿ ಬಂದ್ ಮಾಡಿ ಅಲ್ಲಿಯೇ ಮಲಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಿ ನಾಲ್ವರು ಕಾರ್ಮಿಕರು ತೀವ್ರ ಅಸ್ವಸ್ಥರಾಗಿದ್ದಾರೆ. ಅಲ್ಲದೇ ಪ್ರಜ್ಞೆ ತಪ್ಪಿದ್ದಾರೆ. ಬಾಯಿಯಲ್ಲಿ ನೊರೆ ಕಾಣಿಸಿಕೊಂಡಿದೆ. ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ತಕ್ಷಣ ಅವರನ್ನು ಕಿಮ್ಸ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular