HomeKarnatakaALERT : ಬೆಂಗಳೂರಿನ ವೃದ್ಧೆಗೆ ಭಯೋತ್ಪಾದನೆಯ ಬೆದರಿಕೆ ; 'ಡಿಜಿಟಲ್ ಅರೆಸ್ಟ್' ಹೆಸರಲ್ಲಿ 38 ಲಕ್ಷ...

ALERT : ಬೆಂಗಳೂರಿನ ವೃದ್ಧೆಗೆ ಭಯೋತ್ಪಾದನೆಯ ಬೆದರಿಕೆ ; ‘ಡಿಜಿಟಲ್ ಅರೆಸ್ಟ್’ ಹೆಸರಲ್ಲಿ 38 ಲಕ್ಷ ರೂ. ಲೂಟಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರು ಹೊಸ ಮಾದರಿಯ ವಂಚನೆಗೆ ಇಳಿದಿದ್ದು, ವೃದ್ಧೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ ಬರೋಬ್ಬರಿ 38 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ.

ಮಾರ್ಚ್ 11ರಂದು ವೃದ್ಧೆ ಗೀತಾ ಎಂಬುವವರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿತ್ತು. ವಂಚಕರು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು, “ಮುಂಬೈನಲ್ಲಿ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಈ ಖಾತೆಯ ಮೂಲಕ ನೀವು ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದ್ದೀರಿ” ಎಂದು ಬೆದರಿಸಿದ್ದಾರೆ.

ವಂಚನೆ ನಡೆದಿದ್ದುಹೇಗೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ನಂಬಿಕೆ ಹುಟ್ಟಿಸಿದ ವಂಚಕರು: “ಈ ಪ್ರಕರಣದ ಬಗ್ಗೆ ಆರ್‌ಬಿಐ (RBI) ತನಿಖೆ ನಡೆಸುತ್ತಿದೆ. ತನಿಖೆಗೆ ಸಹಕರಿಸಲು ನಿಮ್ಮ ಖಾತೆಯಲ್ಲಿರುವ 38 ಲಕ್ಷ ರೂಪಾಯಿಗಳನ್ನು ನಾವು ನೀಡುವ ಖಾತೆಗೆ ವರ್ಗಾಯಿಸಬೇಕು. ಪರಿಶೀಲನೆ ಮುಗಿದ ಒಂದು ಗಂಟೆಯಲ್ಲೇ ಹಣವನ್ನು ವಾಪಸ್ ಮಾಡಲಾಗುವುದು” ಎಂದು ನಂಬಿಸಿದ್ದಾರೆ.
  • ಡಿಜಿಟಲ್ ಅರೆಸ್ಟ್: ಸುಮಾರು 72 ಗಂಟೆಗಳ ಕಾಲ ಯಾರನ್ನೂ ಸಂಪರ್ಕಿಸದಂತೆ ವೃದ್ಧೆಯನ್ನು ಆನ್‌ಲೈನ್ ಮೂಲಕವೇ ಕಣ್ಗಾವಲಿನಲ್ಲಿ ಇರಿಸಿ (Digital Arrest), ಅವರ ಮೇಲೆ ಒತ್ತಡ ಹೇರಿ ಆರ್‌.ಟಿ.ಜಿ.ಎಸ್ (RTGS) ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ.

ದೂರು ದಾಖಲು: ಎರಡು ದಿನ ಕಳೆದರೂ ಹಣ ವಾಪಸ್ ಬಾರದಿದ್ದಾಗ ಆತಂಕಗೊಂಡ ವೃದ್ಧೆ, ತಾವು ವಂಚನೆಗೆ ಒಳಗಾಗಿರುವುದನ್ನು ಅರಿತು ಬೆಂಗಳೂರಿನ ಪೂರ್ವ ವಿಭಾಗದ ಸೆನ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕರಿಗಾಗಿ ಜಾಲ ಬೀಸಿದ್ದಾರೆ.

ಸಾರ್ವಜನಿಕರಿಗೆ ಸೂಚನೆ: ಪೊಲೀಸರು ಅಥವಾ ಯಾವುದೇ ಸರ್ಕಾರಿ ಸಂಸ್ಥೆಗಳು ಆನ್‌ಲೈನ್ ಮೂಲಕ ನಿಮ್ಮನ್ನು ಬಂಧಿಸುವುದಿಲ್ಲ ಅಥವಾ ಹಣ ವರ್ಗಾಯಿಸುವಂತೆ ಕೇಳುವುದಿಲ್ಲ. ಇಂತಹ ಕರೆಗಳು ಬಂದಲ್ಲಿ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular