HomeKarnatakaSHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದು ನದಿಗೆ ಹಾರಿ ಮಹಿಳೆ...

SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದು ನದಿಗೆ ಹಾರಿ ಮಹಿಳೆ ಆತ್ಮಹತ್ಯೆ!

ಯಾದಗಿರಿ: ಪುತ್ರನ ಮೇಲಿನ ಅನೈತಿಕ ಸಂಬಂಧದ ಆರೋಪ ಹಾಗೂ ಸಮುದಾಯದ ಮುಖಂಡರು ವಿಧಿಸಿದ ಕಠಿಣ ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದು ಮಹಿಳೆಯೊಬ್ಬರು ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಬಳಿ ನಡೆದಿದೆ.

ಮೃತ ಮಹಿಳೆ  ಕಮಲಮ್ಮ (42) ವೃತ್ತಿಯಲ್ಲಿ ಮೀನುಗಾರರು. ಕಮಲಮ್ಮ ಅವರ ಪುತ್ರ ಎರಿಸ್ವಾಮಿ ಎಂಬಾತ ಅದೇ ಸಮುದಾಯದ ಗರ್ಭಿಣಿಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿತ್ತು.

ಅಮಾನವೀಯ ಶಿಕ್ಷೆ: ಈ ವಿಚಾರವಾಗಿ ಸಮುದಾಯದ ಮುಖಂಡರು ಸಭೆ ಸೇರಿ, ಕುಟುಂಬಕ್ಕೆ 50,000 ರೂ. ದಂಡ ಮತ್ತು 10 ವರ್ಷಗಳ ಕಾಲ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿರ್ಬಂಧಗಳ ಹೇರಿಕೆ: ಕುಟುಂಬವು ಮನೆ ಖಾಲಿ ಮಾಡಬೇಕು, ಯಾರೂ ಅವರ ಜೊತೆ ಮಾತನಾಡಬಾರದು, ಮಾತನಾಡಿದರೆ ಅವರಿಗೂ 10 ವರ್ಷ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.ಸಮುದಾಯದ ಈ ಅಮಾನವೀಯ ನಿರ್ಧಾರದಿಂದ ತೀವ್ರವಾಗಿ ನೊಂದ ಕಮಲಮ್ಮ ಅವರು ಶನಿವಾರ ರಾತ್ರಿ ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ತೆರಳಿದ್ದಾರೆ. ನದಿಗೆ ಹಾರುವ ಮುನ್ನ ತಮ್ಮ ಮಾಂಗಲ್ಯ ಸರವನ್ನು ಸೇತುವೆಯ ಮೇಲೆಯೇ ಕಳಚಿಟ್ಟು, ಬಳಿಕ ಭೀಮಾ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಗಮನಿಸಿ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಮಾನಸಿಕ ಒತ್ತಡವಿದ್ದಲ್ಲಿ ಸಹಾಯವಾಣಿ ಸಂಖ್ಯೆ 080-46110007 (ನಿಮ್ಹಾನ್ಸ್) ಅಥವಾ 104 (ಆರೋಗ್ಯ ಸಹಾಯವಾಣಿ) ಸಂಪರ್ಕಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular