ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ಟ್ರೇ ವೇಕೆನ್ಸಿ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ಒಟ್ಟು 39 ಮಂದಿಗೆ ಸೀಟು ಸಿಕ್ಕಿದೆ. ಸೀಟು ಹಂಚಿಕೆಯಾದವರ ಪಟ್ಟಿಯನ್ನು ವಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಈ ಸುತ್ತಿನ ಸೀಟು ಹಂಚಿಕೆ ನಂತರ ಇನ್ನೂ 744 ಸೀಟು ಬಾಕಿ ಉಳಿದಂತಾಗಿದೆ.
ಇದುವರೆಗೂ ಸೀಟು ಹಂಚಿಕೆಯಾಗದವರಿಗೆ ಕೋರ್ಸ್ ಶುಲ್ಕದ ಡಿಡಿ ಅಥವಾ ಚೆಕ್ ಪಡೆದು ಆಪ್ಷನ್ಸ್ ದಾಖಲಿಸಲು ಬುಧವಾರ ಇಡೀ ದಿನ ಅವಕಾಶ ನೀಡಲಾಗಿತ್ತು. ಒಟ್ಟು 55 ಮಂದಿ ಡಿಡಿ/ಚೆಕ್ ಕೊಟ್ಟಿದ್ದರು. ಆದರೆ 41 ಮಂದಿ ಮಾತ್ರ ಆಪ್ಷನ್ಸ್ ದಾಖಲಿಸಿದ್ದರು. ಅವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ.
ಸೀಟು ಹಂಚಿಕೆಯಾದವರು ಮಾ.12ರಂದು ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ಸೀಟು ಹಂಚಿಕೆಯಾದವರ ಪಟ್ಟಿ ಈ ಕೆಳಗೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.
PGNEET_MEED_ALLOT_2025_NON_INS_STRAY_11032026_FINLkannada.pdf https://share.google/uLkCuxTxXocMxL9ZU

