ಅದೊಂದು ಕಾಲವಿತ್ತು.. ಯಾರ ಮನೆಯ ಬಾಗಿಲಿನಲ್ಲಿ ಭತ್ತದ ತೋರಣ ಜೋತಾಡುತ್ತಿತ್ತೋ, ಆ ಮನೆಯವರು ಜೀವನದಲ್ಲಿ ಚೆನ್ನಾಗಿ ಸೆಟಲ್ ಆಗಿದ್ದಾರೆ, ಶ್ರೀಮಂತರು ಎಂಬ ಭಾವನೆ ಇತ್ತು. ಕಾಲ ಬದಲಾದಂತೆ ಪ್ಲಾಸ್ಟಿಕ್ ತೋರಣಗಳು ಮಾರುಕಟ್ಟೆ ಆಕ್ರಮಿಸಿಕೊಂಡವು. ಆದರೆ ಈಗ ಮತ್ತೆ ಕಾಲ ಉರುಳಿದೆ ಹಳೆಯ ಸಂಪ್ರದಾಯ ಈಗ ಹೊಸ ಟ್ರೆಂಡ್ ಆಗಿ ಮನೆಮನೆ ತಲುಪುತ್ತಿದೆ. ಈ ಭತ್ತದ ತೋರಣದ ಹಿಂದೆ ಅಡಗಿರುವ ರಹಸ್ಯಗಳೇನು? ಇದರಿಂದ ಮನೆಗೆ ಏನು ಲಾಭ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ವಾಸ್ತು ದೋಷಕ್ಕೆ ರಾಮಬಾಣ
ಜೋತಿಷ್ಯ ಶಾಸ್ತ್ರ ಮತ್ತು ವಾಸ್ತು ಪ್ರಕಾರ, ಮನೆಯ ಮುಂಬಾಗಿಲಿಗೆ ಭತ್ತದ ತೋರಣ ಕಟ್ಟುವುದು ಕೇವಲ ಅಂದಕ್ಕಲ್ಲ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಶಕ್ತಿಯನ್ನು (Positive Energy) ಆಹ್ವಾನಿಸುತ್ತದೆ. ಮನೆಯಲ್ಲಿ ಅಶಾಂತಿ ಅಥವಾ ವಾಸ್ತು ದೋಷವಿದ್ದರೆ ಭತ್ತದ ತೋರಣ ಒಂದು ರಕ್ಷಾಕವಚದಂತೆ ಕೆಲಸ ಮಾಡುತ್ತದೆ ಎಂಬ ನಂಬಿಕೆ ಹಳ್ಳಿಗರಲ್ಲಿದೆ.
ಈ ತೋರಣದ ವಿಶೇಷತೆಗಳೇನು?
ಶುಭ ಶಕುನ: ಹಬ್ಬ ಅಥವಾ ಶುಭ ಸಮಾರಂಭಗಳ ಸೂಚಕವಾಗಿ ಇದು ಅತಿಥಿಗಳನ್ನು ಬರಮಾಡಿಕೊಳ್ಳುತ್ತದೆ.
ದೃಷ್ಟಿ ದೋಷ ನಿವಾರಣೆ: ಮನೆಗೆ ಬೀಳುವ ಕೆಟ್ಟ ದೃಷ್ಟಿಯನ್ನು ಇದು ತಡೆಯುತ್ತದೆ ಎಂಬುದು ಹಿರಿಯರ ಮಾತು.
ಸಾಂಪ್ರದಾಯಿಕ ಕಲೆ: ಇದನ್ನು ಸಿದ್ಧಪಡಿಸುವುದು ಒಂದು ಕಲೆ. ಲಾವಂಚ ಮತ್ತು ಭತ್ತದ ಸಂಯೋಜನೆಯಿಂದ ತಯಾರಾಗುವ ಈ ತೋರಣಗಳು ಈಗ ಅನೇಕ ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿವೆ.
ಇತ್ತೀಚಿನ ದಿನಗಳಲ್ಲಿ ಜನರು ರಾಸಾಯನಿಕಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಬಿಟ್ಟು ಮತ್ತೆ ಪ್ರಕೃತಿಯತ್ತ ಮುಖ ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಇಂದು ಕಾಫಿನಾಡು ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಹಾಗೂ ಹಳ್ಳಿಗಳಲ್ಲಿ ಭತ್ತದ ತೋರಣಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ನಿಮ್ಮ ಮನೆಯಲ್ಲೂ ಸುಖ-ಶಾಂತಿ ನೆಲೆಸಬೇಕೆಂದರೆ ಒಂದು ಭತ್ತದ ತೋರಣ ಕಟ್ಟಿ ನೋಡಿ

