ಮಗು ಹುಟ್ಟಿದ ತಕ್ಷಣ ಪೋಷಕರ ಮುಂದೆ ಬರುವ ಅತಿ ದೊಡ್ಡ ಪ್ರಶ್ನೆ ಎಂದರೆ ಲಸಿಕೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುವ ಲಸಿಕೆ ಹಾಕಿಸಬೇಕೋ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಹಾಕಿಸಬೇಕೋ? ಈ ಎರಡರ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಸರ್ಕಾರಿ ವ್ಯಾಕ್ಸಿನೇಷನ್: ರಾಷ್ಟ್ರೀಯ ವೇಳಾಪಟ್ಟಿ
ಭಾರತ ಸರ್ಕಾರದ ರಾಷ್ಟ್ರೀಯ ಪ್ರತಿರಕ್ಷಣೆ ಕಾರ್ಯಕ್ರಮದಡಿ ಸುಮಾರು 12 ಮಾರಕ ರೋಗಗಳಿಂದ ರಕ್ಷಣೆ ನೀಡುವ ಲಸಿಕೆಗಳನ್ನು ನೀಡಲಾಗುತ್ತದೆ.ವೆಚ್ಚ ಸಂಪೂರ್ಣ ಉಚಿತ.ಅಂಗನವಾಡಿ, ಸರ್ಕಾರಿ ಆಸ್ಪತ್ರೆ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಹಳ್ಳಿ ಹಳ್ಳಿಗೂ ಲಭ್ಯ.ದೇಶದ ಪ್ರತಿ ಮಗುವಿಗೂ ಕನಿಷ್ಠ ಅಗತ್ಯವಿರುವ ರೋಗನಿರೋಧಕ ಶಕ್ತಿ ನೀಡುವುದು.
ಸರ್ಕಾರಿ ಲಸಿಕೆಗಳ ಪ್ಲಸ್ ಪಾಯಿಂಟ್:
ಭಾರತ ಸರ್ಕಾರದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಪೋಲಿಯೋ, ಕ್ಷಯ, ಹೆಪಟೈಟಿಸ್-ಬಿ ಸೇರಿದಂತೆ ಪ್ರಮುಖ ರೋಗಗಳ ವಿರುದ್ಧದ ಲಸಿಕೆಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಇವುಗಳ ಶೇಖರಣಾ ವಿಧಾನ (Cold Chain) ಅತ್ಯಂತ ಉತ್ತಮವಾಗಿ ನಿರ್ವಹಿಸಲ್ಪಡುತ್ತದೆ
ಖಾಸಗಿ ವ್ಯಾಕ್ಸಿನೇಷನ್: ಹೆಚ್ಚಿನ ರಕ್ಷಣೆ?
ಖಾಸಗಿ ಆಸ್ಪತ್ರೆಗಳು ಭಾರತೀಯ ಮಕ್ಕಳ ಚಿಕಿತ್ಸಾಲಯ (IAP) ವೇಳಾಪಟ್ಟಿಯನ್ನು ಅನುಸರಿಸುತ್ತವೆ.ಹೆಚ್ಚುವರಿ ಲಸಿಕೆಗಳು ಸರ್ಕಾರಿ ಪಟ್ಟಿಯಲ್ಲಿಲ್ಲದ ಟೈಫಾಯಿಡ್, ಇನ್ಫ್ಲುಯೆನ್ಸ (ಫ್ಲೂ), ಹೆಪಟೈಟಿಸ್ ಎ, ಚಿಕನ್ಪಾಕ್ಸ್ (ನೀರ ಲಾವಿ) ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆಗಳು ಇಲ್ಲಿ ಲಭ್ಯ.ವೆಚ್ಚ ಲಸಿಕೆಯ ಪ್ರಕಾರಕ್ಕೆ ಅನುಗುಣವಾಗಿ ಶುಲ್ಕ ಪಾವತಿಸಬೇಕು.
ಖಾಸಗಿ ವ್ಯಾಕ್ಸಿನೇಷನ್: ಹೆಚ್ಚಿನ ರಕ್ಷಣೆ?
ಖಾಸಗಿ ಆಸ್ಪತ್ರೆಗಳು ಭಾರತೀಯ ಮಕ್ಕಳ ಚಿಕಿತ್ಸಾಲಯ (IAP) ವೇಳಾಪಟ್ಟಿಯನ್ನು ಅನುಸರಿಸುತ್ತವೆ.ಹೆಚ್ಚುವರಿ ಲಸಿಕೆಗಳು: ಸರ್ಕಾರಿ ಪಟ್ಟಿಯಲ್ಲಿಲ್ಲದ ಟೈಫಾಯಿಡ್, ಇನ್ಫ್ಲುಯೆನ್ಸ (ಫ್ಲೂ), ಹೆಪಟೈಟಿಸ್ ಎ ಚಿಕನ್ಪಾಕ್ಸ್ (ನೀರ ಲಾವಿ) ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆಗಳು ಇಲ್ಲಿ ಲಭ್ಯ.ಲಸಿಕೆಯ ಪ್ರಕಾರಕ್ಕೆ ಅನುಗುಣವಾಗಿ ಶುಲ್ಕ ಪಾವತಿಸಬೇಕು.
ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಲಸಿಕೆಗಳು ಯಾವುವು?
ಕೆಲವೊಮ್ಮೆ ಪೋಷಕರು ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿದರೂ ಈ ಕೆಳಗಿನವುಗಳಿಗಾಗಿ ಖಾಸಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.ಫ್ಲೂ ವ್ಯಾಕ್ಸಿನ್: 6 ಮತ್ತು 7ನೇ ತಿಂಗಳಲ್ಲಿ.ಟೈಫಾಯಿಡ್ ವ್ಯಾಕ್ಸಿನ್ 6 ರಿಂದ 9 ತಿಂಗಳಲ್ಲಿ.ಹೆಪಟೈಟಿಸ್ ಎ ಮತ್ತು ವೆರಿಸೆಲ್ಲಾ (ಚಿಕನ್ ಪಾಕ್ಸ್) ಇವು ಹೆಚ್ಚಿನ ಸುರಕ್ಷತೆ ನೀಡುತ್ತವೆ.
ಲಸಿಕೆ ಮುಖ್ಯವೇ ಹೊರತು ಅದು ಎಲ್ಲಿ ಸಿಗುತ್ತದೆ ಎಂಬುದಲ್ಲ. ನೀವು ಬಡವರೇ ಇರಲಿ ಅಥವಾ ಶ್ರೀಮಂತರೇ ಇರಲಿ, ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸುವುದು ಮಗುವಿನ ಭವಿಷ್ಯದ ದೃಷ್ಟಿಯಿಂದ ಅತಿ ಮುಖ್ಯ.

